ಸೂಫಿಯೂ ಆದ ಸೂಫಿಯೂ ಅಲ್ಲದ ಉಮರ್ ಖಯ್ಯಾಮ್‌ನ ಕುರಿತು : ವಿಜಯರಾಘವನ್ ಬರಹ

ಕೆಲವು ವಿದ್ವಾಂಸರ ಪ್ರಕಾರ ಉಮರನು ಸೂಫಿ ಸಂತ. ಇನ್ನೊಂದು ಕಡೆ ಅವನು ಒಬ್ಬ ವೈಜ್ಞಾನಿಕ ಮನೋಭಾವದ, ಅವನ ಕಾಲದೇಶಗಳಿಗಿಂತ ಬಹಳ ಮುಂದಿದ್ದ ತತ್ತ್ವಜ್ಞಾನಿಯಾಗಿದ್ದ ಎನ್ನುವುದನ್ನು ಚಾರಿತ್ರಿಕವಾಗಿ ಸಾಬೀತುಪಡಿಸಲು ಸಾಧ್ಯವಿದೆ. | ಪರಷಿಯಾ ದೇಶದ ಕವಿ, ತತ್ವಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ & ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್’ನ ರುಬಾಯತ್ ಹೊಸ ಅನುವಾದಕ್ಕೆ ಆರ್. ವಿಜಯರಾಘವನ್ ಬರೆದ ಪ್ರವೇಶಿಕೆ (ಇಂದಿಗೆ ಖಯ್ಯಾಮ್ ಜನಿಸಿ 971 ವರ್ಷಗಳಾದವು) ಉಮರ್ ಖಯ್ಯಾಮ್ ಕನ್ನಡಿಗರಿಗೆ ಡಿ ವಿ ಗುಂಡಪ್ಪನವರ ಉಮರನ ಒಸಗೆಯಿಂದ ಪರಿಚಿತ. ಡಿವಿಜಿಯವರನ್ನು ಸ್ಮರಿಸದೆ […]

ಖಯಾಮರು ಸೊಳ್ಳೆಗೆ ಹೆದರಿದ್ದೇಕೆ!? : Tea time story

ಉಮರ್ ಖಯಾಮರು ಒಮ್ಮೆ ತಮ್ಮ ಶಿಷ್ಯನೊಡನೆ ದಟ್ಟ ಅಡವಿಯಲ್ಲಿ ಹೋಗುತ್ತಿದ್ದರು. ಹೋಗುತ್ತಾ ಸಂಜೆಯಾಯಿತು. ಖಯ್ಯಾಮರು ತಮ್ಮ ಬಗಲಲ್ಲಿದ್ದ ಚಾಪೆ ಹಾಸಿಕೊಂಡು ನಮಾಜ್ ಮಾಡಲು ಕುಳಿತರು. ಅದೇ ಸಮಯಕ್ಕೆ ಸ್ವಲ್ಪ ದೂರದಲ್ಲಿ ಸಿಂಹ ಘರ್ಜಿಸುವುದು ಕೇಳಿಸಿತು. ಹೆದರಿದ ಶಿಷ್ಯ ಕೂಡಲೇ ಸಮೀಪವಿದ್ದ ಮರವೇರಿ ಕುಳಿತುಕೊಂಡ. ಮನುಷ್ಯವಾಸನೆ ಹಿಡಿದು ಬಂದ ಸಿಂಹ ಖಯಾಮರು ಇದ್ದಲ್ಲಿಗೆ ಬಂತು. ಅವರ ಮುಂದೆಯೇ ನಿಂತಿತು. ಖಯಾಮರು ಚೂರೂ ಕದಲಿಲ್ಲ. ತಮ್ಮ ಪ್ರಾರ್ಥನಾವಿಧಿಗಳನ್ನು ಮುಂದುವರೆಸಿದರು. ಸಿಂಹ ಒಂದೆರಡು ಘಳಿಗೆ ನಿಂತಿದ್ದು ಹೊರಟುಹೋಯಿತು. ಆಮೇಲೆ ಶಿಷ್ಯ ಕೆಳಗಿಳಿದ. […]