ಬೆಳವಣಿಗೆಗೆ ಪೂರಕವಾಗಿರಲಿ ಉಲ್ಲಂಘನೆ

ಮೀರಿ ನಡೆಯುವುದು ಅಷ್ಟು ಸುಲಭವಲ್ಲ. ಉಲ್ಲಂಘನೆ ನಮ್ಮ ಒಳ – ಹೊರಗಿನ ಬೆಳವಣಿಗೆಗೆ ಎಷ್ಟು ಸಹಕಾರಿ ಅನ್ನೋದನ್ನ ಮೊದಲು ಯೋಚಿಸಬೇಕು. ಜೊತೆಗೆ, ನಮ್ಮ ಈ ನಡೆಯನ್ನು ಭರಿಸಿಕೊಳ್ಳುವ, ಸರಿದೂಗಿಸಿಕೊಳ್ಳುವ ಆತ್ಮ ವಿಶ್ವಾಸ ನಮ್ಮಲ್ಲಿದೆಯೇ ಎಂದೂ ಪರೀಕ್ಷಿಸಿಕೊಳ್ಳಬೇಕು. ಅನಂತರವಷ್ಟೆ ಹೆಜ್ಜೆ ಎತ್ತುವ ಮಾತು. ~ ಆನಂದಪೂರ್ಣ