ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ. ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ […]

ಇರುವುದೊಂದೇ ಸತ್ಯ, ಅದಕ್ಕೆ ಹಲವು ಹೆಸರು : ಋಗ್ವೇದ ಸಾರುವ ಸಮಾನತೆಯ ಮಂತ್ರ

ಏಕಂ ಸತ್ ವಿಪ್ರಾಃ ಬಹುಧಾ ವದನ್ತಿ : ಇರುವುದೊಂದೇ ಸತ್ ತತ್ತ್ವ. ಪ್ರಾಜ್ಞರು ಅದನ್ನು ನಾನಾ ರೀತಿಯಾಗಿ ಬಣ್ಣಿಸುತ್ತಾರೆ….  ಇರುವುದೊಂದೇ ಸತ್ ತತ್ತ್ವ. ಸರಳವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಇದನ್ನು ಸತ್ಯ ಎಂದು ಕರೆಯೋಣ. ಸತ್ಯ ಯಾವಾಗಲೂ ಒಂದೇ ಆಗಿರುತ್ತದೆ. ಹಲವು ಸತ್ಯಗಳು ಇರಲು ಸಾಧ್ಯವಿಲ್ಲ. ಇರುವುದೇನಿದ್ದರೂ ಸತ್ಯ. ಸತ್ಯ ಅಲ್ಲದೆ ಹೋಗಿರುವ ಯಾವುದೇ ಸಂಗತಿ ಸುಳ್ಳು.  ಸತ್ಯವನ್ನು ಕಂಡುಕೊಂಡವರು ಅದನ್ನು ಹಲವು ವಿಧದಲ್ಲಿ ವರ್ಣಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಅದನ್ನು ಕರೆದಿದ್ದಾರೆ. “ಇರುವುದೊಂದೇ ಭಗವಂತ ಅಥವಾ […]

ಋಗ್ವೇದದ ‘ಋತ’ ದ ಪರಿಕಲ್ಪನೆ : ಅರವಿಂದ ಚೊಕ್ಕಾಡಿ ಬರಹ

ಋಗ್ವೇದದ ಬಹಳ ಮುಖ್ಯವಾದ ಪರಿಕಲ್ಪನೆ ‘ಋತ’. ಋತ ಎಂದರೆ ಸತ್ಯ. ಸತ್ಯವೆಂದರೆ ಸುಳ್ಳು ಹೇಳದಿರುವುದು ಎಂಬ ಸರಳ ಅರ್ಥವಲ್ಲ. ಋತ ಎಂದರೆ ವಿಶ್ವ ನಿಯಮ.ಈ ವಿಶ್ವನಿಯಮ ಎಂಬ ಪರಿಕಲ್ಪನೆಗೆ ಋಗ್ವೇದವು ನಿಷ್ಠವಾಗಿದೆ. ಆದ್ದರಿಂದಲೆ ಒಬ್ಬ ವ್ಯಕ್ತಿಯನ್ನು ಆಶೀರ್ವದಿಸುವಾಗ ‘ಶತಮಾನಂ ಭವತಿಃ’ಎಂದು ಆಶೀರ್ವದಿಸಲಾಗುತ್ತದೆ ಹೊರತು ಶಾಶ್ವತವಾಗಿ ಬಾಳು ಎಂದು ಆಶೀರ್ವದಿಸುವುದಿಲ್ಲ. ಏಕೆಂದರೆ ಶಾಶ್ವತವಾಗಿ ಬಾಳುವುದು ವಿಶ್ವನಿಯಮ ಅಲ್ಲ  ~ ಅರವಿಂದ ಚೊಕ್ಕಾಡಿ ಎರಡು ದಿನಗಳ ಹಿಂದೆ ಕಾಶ್ಮೀರ ಸಮಸ್ಯೆಯ ಸೃಷ್ಟಿಗೆ ಹರಿಸಿಂಗ್ ಕಾರಣರೆ ಹೊರತು ಜವಾಹರ ಲಾಲ್ ನೆಹರೂ […]

ಗಾಯತ್ರಿ ಮಂತ್ರ : ನೀವು ತಿಳಿದಿರಬೇಕಾದ 8 ಮೂಲಭೂತ ಸಂಗತಿಗಳು

ಸನಾತನ ಧರ್ಮದಲ್ಲಿ ಅತಿಹೆಚ್ಚು ಪ್ರಾಮುಖ್ಯತೆಯೊಡನೆ ಹೇಳಲ್ಪಡುವ ಮಂತ್ರ ‘ಗಾಯತ್ರಿ ಮಂತ್ರ’. ಈ ಮಂತ್ರ ಮೂಲಭೂತ ಸಂಗತಿಗಳನ್ನು ಮತ್ತು ಗಾಯತ್ರಿ ಮಾತೆಯ ಕುರಿತು ಕೆಲವು ಮಾಹಿತಿಗಳನ್ನು 8 ಚಿತ್ರಿಕೆಗಳ ಮೂಲಕ ಇಲ್ಲಿ ನೀಡಲಾಗಿದೆ.  1 ಮಂತ್ರ ಮತ್ತು ಅರ್ಥ 2. ಗಾಯತ್ರಿ… ಸಾವಿತ್ರಿ… 3. ಹಂಸವಾಹಿನಿ 4. ಧ್ಯಾನ ರೂಪ 5. ವಿಶ್ವಾಮಿತ್ರನೇ ದ್ರಷ್ಟಾರ 6. ಋಗ್ವೇದ ಮೂಲ 7. ಎಲ್ಲೆಲ್ಲಿ ಪ್ರಸ್ತಾಪಗೊಂಡಿದೆ…? 8. ಪುರಾಣ ಕಥೆ

ದಾಸಿಯಿಂದ ದಾರ್ಶನಿಕ ಹಂತಕ್ಕೇರಿದ ಉಶಿಜಾ

ಉಶಿಜಳ ಅಧ್ಯಾತ್ಮ ಸಾಹಿತ್ಯಸೃಷ್ಟಿಯಲ್ಲಿ ಬಹಳ ಮುಖ್ಯವಾದುದು ಋಗ್ವೇದದ ಪ್ರಥಮ ಮಂಡಲದ 116 ರಿಂದ 121ರವರೆಗೆ ಇರುವ ಆರು ಮಂತ್ರಗಳು. ಉಶಿಜಾ ಈ ಮಂತ್ರಗಳ ದ್ರಷ್ಟಾರಳಾಗಿದ್ದಾಳೆ. ಈಕೆಯಿಂದ ಸಂಕಲಿತ ಈ ಮಂತ್ರಗಳು ಋಗ್ವೇದದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಧಾರಣ ದಾಸಿಯಾಗಿದ್ದ ಉಶಿಜಾ, ಋಗ್ವೇದದ ಪುಟಗಳಲ್ಲಿ ಶಾಮೀಲಾದ ಬಗೆಯೇ ಒಂದು ಬೋಧನೆಯಾಗಿದೆ ~ ಚೇತನಾ ತೀರ್ಥಹಳ್ಳಿ ಅಂಗದೇಶ ಸಮೀಪೇ ತು ತಂ ನದ್ಯಾಃ ಸಮುದಕ್ಷಿಪನ್ | ಅಂಗರಾಜ ಗೃಹೇ ಯುಕ್ತಾಮ್ ಉಶಿಜಂ ಪುತ್ರಕಾಮ್ಯಯಾ || ರಾಜ್ಞಾ ಚ ಪ್ರಹಿತಾಂ […]

ಅರಣ್ಯ ನಾಶ ಮಾಡಬಾರದು : ಬೆಳಗಿನ ಹೊಳಹು

“ವನಾನಿ ನ ಪ್ರಜಹಿತಾನಿ”… ಅರ್ಥಾತ್, ಅರಣ್ಯ ನಾಶ ಮಾಡಬಾರದು – ಎನ್ನುತ್ತದೆ ಋಗ್ವೇದದ ಒಂದು ಮಂತ್ರ  ~ ಅಪ್ರಮೇಯ ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಕಾಡನ್ನು ನಾಶಮಾಡುತ್ತಿದ್ದಾನೆ, ಮರಗಳನ್ನು ಕಡೆದು ಭೂಮಿಯನ್ನು ಬೆಟ್ಟ, ಗುಡ್ಡಗಳನ್ನು ಸತ್ವಹೀನವಾಗಿಸುತ್ತಿದ್ದಾನೆ. ಇದರ ಫಲವನ್ನು ನಾವು ಈಗಾಗಲೇ ಅನುಭವಿಸುತ್ತಿರುವುದನ್ನು ಕಾಣಬಹುದು. ಮನುಷ್ಯನು ಮಿಥ್ಯಾ ಅಭಿವೃದ್ಧಿಯ ಹೆಸರಿನಲ್ಲಿ, ದುರಾಸೆಯಿಂದ ಮಾಡುತ್ತಿರುವ ಪ್ರಕೃತಿ ನಾಶವು ಮನುಷ್ಯನಿಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಮಾರಕವಾಗಿದೆ. ಇದು ಮೂರ್ಖನು ತಾನು ಕೂತ ಕೊಂಬೆಯನ್ನೇ ಕತ್ತರಿಸುತ್ತಿರುವಂತಿದೆ. ನಮ್ಮ ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಆರಾಧಿಸಿ, […]