ದಾಸಿಯಿಂದ ದಾರ್ಶನಿಕ ಹಂತಕ್ಕೇರಿದ ಉಶಿಜಾ

ಉಶಿಜಳ ಅಧ್ಯಾತ್ಮ ಸಾಹಿತ್ಯಸೃಷ್ಟಿಯಲ್ಲಿ ಬಹಳ ಮುಖ್ಯವಾದುದು ಋಗ್ವೇದದ ಪ್ರಥಮ ಮಂಡಲದ 116 ರಿಂದ 121ರವರೆಗೆ ಇರುವ ಆರು ಮಂತ್ರಗಳು. ಉಶಿಜಾ ಈ ಮಂತ್ರಗಳ ದ್ರಷ್ಟಾರಳಾಗಿದ್ದಾಳೆ. ಈಕೆಯಿಂದ ಸಂಕಲಿತ ಈ ಮಂತ್ರಗಳು ಋಗ್ವೇದದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಧಾರಣ ದಾಸಿಯಾಗಿದ್ದ ಉಶಿಜಾ, ಋಗ್ವೇದದ ಪುಟಗಳಲ್ಲಿ ಶಾಮೀಲಾದ ಬಗೆಯೇ ಒಂದು ಬೋಧನೆಯಾಗಿದೆ ~ ಚೇತನಾ ತೀರ್ಥಹಳ್ಳಿ ಅಂಗದೇಶ ಸಮೀಪೇ ತು ತಂ ನದ್ಯಾಃ ಸಮುದಕ್ಷಿಪನ್ | ಅಂಗರಾಜ ಗೃಹೇ ಯುಕ್ತಾಮ್ ಉಶಿಜಂ ಪುತ್ರಕಾಮ್ಯಯಾ || ರಾಜ್ಞಾ ಚ ಪ್ರಹಿತಾಂ […]