ಬೃಹದ್ದೇವತೆಯಲ್ಲಿ ಉಲ್ಲೇಖಗೊಂಡಿರುವ 28 ಋಷಿಕೆಯರ ಹೆಸರು ಗೊತ್ತೇ? ~ ಸನಾತನ ಸಾಹಿತ್ಯ ಮೂಲ ಪಾಠಗಳು #49

ಪೂರ್ವದ ಋಷಿಗಳಲ್ಲಿ ನಮಗೆ ಒಂದಷ್ಟು ಪುರುಷ ಋಷಿಗಳ ಹೆಸರು ಗೊತ್ತೇ ಇದೆ. ಆದರೆ ಸ್ತ್ರೀ ಋಷಿಯರ ಹೆಸರು ತಿಳಿದಿದೆಯೆ? ಮಂತ್ರದ್ರಷ್ಟಾರರೂ ಆದ  ಬ್ರಹ್ಮವಾದಿನಿಯರಲ್ಲಿ ಕೆಲವರ  ಹೆಸರನ್ನು, ಅವರು ರಚಿಸಿದ ಮಂತ್ರ / ಸೂಕ್ತಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ  ~ ಗಾಯತ್ರಿ ಶೌನಕ ಮಹರ್ಷಿಗಳು ರಚಿಸಿದ ಬೃಹದ್ದೇವತಾ ಮಹತ್ಕೃತಿಯಲ್ಲಿ ಹಲವು ಬ್ರಹ್ಮವಾದಿನಿಯರ ಉಲ್ಲೇಖವಿದ್ದು, ಅದು ಹೀಗಿದೆ: ಘೋಷಾ ಗೋಧಾ, ವಿಶ್ವವಾರಾ, ಅಪಾಲೋಪನಿಷನ್ನಿಷತ್ | ಬ್ರಹ್ಮಜಾಯಾ ಜುಹೂರ್ನಾಮ ಅಗಸ್ತ್ಯಸ್ಯ ಸ್ವಸಾದಿತಿಃ || ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ | […]

ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ. ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ […]

ಮಾಂಡವ್ಯ ಋಷಿ ಬೆನ್ನಿನಲ್ಲಿ ಶೂಲ ಹೊತ್ತು ಓಡಾಡುವಂತಾಗಿದ್ದು ಏಕೆ?

ಮಾಂಡವ್ಯ ಋಷಿ ಒಬ್ಬ ಸಿದ್ಧಪುರುಷರಾಗಿದ್ದರು. ಧ್ಯಾನಯೋಗಾದಿಗಳನ್ನು ನಡೆಸುತ್ತಾ ಅಪಾರ ವರ್ಚಸ್ಸನ್ನು ಗಳಿಸಿದ್ದರು. ದಿನದ ಬಹುಪಾಲು ಸಮಯವನ್ನು ತಮ್ಮ ಆಶ್ರಮದಲ್ಲಿ ತಪಶ್ಚರಣೆಯಲ್ಲಿ ಕಳೆಯುತ್ತಿದ್ದರು.   ಒಮ್ಮೆ ಹೀಗಾಯ್ತು. ಅರಮನೆಗೆ ಕನ್ನ ಹಾಕಿದ ಕಳ್ಳರ ಗುಂಪೊಂದು ಭಟರಿಂದ ತಪ್ಪಿಸಿಕೊಂಡು ಓಡುತ್ತಾ ಮಾಂಡವ್ಯರ ಆಶ್ರಮ ಹೊಕ್ಕಿತು. ಇದೇ ಪ್ರಸ್ತ ಜಾಗವೆಂದು, ದೋಚಿದ ಸಂಪತ್ತೆಲ್ಲ ಅಲ್ಲೇ ಅಡಗಿಸಿ, ತಾವೂ ಅಡಗಿ ಕುಳಿತರು. ಕಳ್ಳರನ್ನು ಬೆನ್ನಟ್ಟಿದ ಭಟರೂ ಆಶ್ರಮವನ್ನು ತಲುಪಿದರು. “ಇಲ್ಲಿ ಕಳ್ಳರು ಬಂದುದನ್ನು ಕಂಡಿರಾ?” ಎಂದು ಮಾಂಡವ್ಯರನ್ನು ಕೇಳಿದರು. ಧ್ಯಾನನಿರತರಾಗಿದ್ದ ಮಾಂಡವ್ಯರಿಗೆ ಯಾವ […]