ಏಕಾಂಗಿ ಹೋರಾಟಗಾರರೇ ನಿಜವಾದ ಬಲಶಾಲಿಗಳು : ಯೋಗಿ ಅರವಿಂದ

ಒಗ್ಗಟ್ಟಿನಿಂದ ಹೋರಾಟ ನಡೆಸಿ ಎದುರಿಸುವುದು ಇದ್ದದ್ದೇ. ಆದರೆ, ಜೊತೆಯಲ್ಲಿ ಯಾರೂ ಇಲ್ಲದಾಗಲೂ ಧೃತಿಗೆಡದೆ ಹೋರಾಡುವುದು ಇದೆಯಲ್ಲ, ಅದು ನಿಜವಾದ ಕೆಚ್ಚು, ನಿಜವಾದ ಬಲ. ಕೆಲವೊಮ್ಮೆ ಹೀಗಾಗಿಬಿಡುತ್ತದೆ. ಕಾರಣ ಎಷ್ಟೇ ಮಹತ್ವದ್ದಾಗಿದ್ದರೂ, ಘನವಾಗಿದ್ದರೂ ಅದಕ್ಕಾಗಿ ಹೋರಾಡಲು ಜೊತೆಗಾರರು ಒಗ್ಗೂಡುವುದೇ ಇಲ್ಲ. ಆದರೆ ಹೋರಾಟದ ತುರ್ತು ಇದ್ದೇ ಇದೆ. ಇಂಥ ಸಂದರ್ಭದಲ್ಲಿ ಯಾರ ಬೆಂಬಲವೂ ಇಲ್ಲವೆಂದು ಹೆಜ್ಜೆ ಹಿಂತಿರುಗಿಸುವುದು ಸರಿಯೇ?  ಖಂಡಿತಾ ಇಲ್ಲ. ಹೀಗೆ ಮಾಡುವುದು ವೈಯಕ್ತಿಕ ನಷ್ಟ ಮಾತ್ರವಲ್ಲ, ಸಾಮಾಜಿಕ ನಷ್ಟವೂ ಹೌದು. ಬಹುತೇಕ ಸಂದರ್ಭಗಳಲ್ಲಿ ನಾವಿದನ್ನು ನೋಡಿದ್ದೇವೆ. […]