ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ ! ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ […]

ಕಾಲವೆಂಬ ಸತ್ಯ ಮತ್ತು ಭ್ರಮೆ

ಕಾಲವು ಅಸ್ತಿತ್ವ ಪಡೆಯುವುದೇ ಮತ್ತೊಂದು ವಸ್ತುವಿನ ಅವಲಂಬನೆಯ ಮೇಲೆ. ಇನ್ನೂ ಹೇಳಬೇಕೆಂದರೆ, ಕಾಲವೊಂದು ಭ್ರಮೆ. ನಾವು ಲೆಕ್ಕ ಹಾಕಿದರಷ್ಟೆ ಅದು ಉದ್ಭವವಾಗುವುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಳಿದರೆ ಕಾಲವೊಂದು ನಗಣ್ಯ ಸಂಗತಿಯಾಗಿಬಿಡುತ್ತದೆ. ಈ ಸೃಷ್ಟಿಯಲ್ಲಿ ಅತ್ಯಂತ ನಿಗೂಢವೂ ವಿವರಣೆಗೆ ನಿಲುಕದ್ದೂ ಆದ ಸಂಗತಿಯೆಂದರೆ, ಅದು `ಕಾಲ’.  ಎಷ್ಟು ಸತ್ಯವೋ ಅಷ್ಟೇ ಭ್ರಮಾತ್ಮಕವೂ ಆಗಿರುವ ಸಂಗತಿ ಇದು. ಭಗವಂತನಂತೆಯೇ ಕಾಲವೂ. ಅಥವಾ ಭಗವಂತನೇ ಕಾಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು `ಕಾಲೋsಸ್ಮಿ ಲೋಕ ಕ್ಷಯ ಕಾರಕಃ’ ಅಂದಿದ್ದಾನೆ. ಲೋಕವನ್ನು […]