ಪ್ರಾರ್ಥನೆ ಮಾಡುವುದು ಅಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಎಂದಲ್ಲ!

ನಮ್ಮ ಜವಾಬ್ದಾರಿಗಳನ್ನು ದೇವರೆಂದು ನಂಬಿಕೊಂಡು ಅತೀತ ಶಕ್ತಿಯ ಮೇಲೆ ಹೊರೆಸುತ್ತೇವೆ. ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ತೇವೆ. ಹಾಗೆ ದೇವರು ಹೊಣೆ ಹೊರಲೆಂದು ಪೂಜೆ ಪ್ರಾರ್ಥನೆಗಳ ದೇಣಿಗೆಯನ್ನೂ ಕೊಟ್ಟು ‘ನಾವು ಕೊಟ್ಟೆವು, ನಾವು ಬೇಡಿದೆವು’ ಎಂದು ಲೆಕ್ಕ ಕೊಡುತ್ತೇವೆ. ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. […]