ನೀವಿದ್ದೀರಲ್ಲ ಗುರುವೇ! ~ ಒಂದು ಝೆನ್ ಕಥೆ

 ಸಂಗ್ರಹ ಮತ್ತು ಅನುವಾದ : ಅಲಾವಿಕಾ

Continue reading “ನೀವಿದ್ದೀರಲ್ಲ ಗುರುವೇ! ~ ಒಂದು ಝೆನ್ ಕಥೆ”

ಪ್ರಾಚೀನ ಪ್ರೇಮ ಕಥೆಗಳು : ಬಿಲ್ವಮಂಗಳನ ಚೂಡಾಮಣಿ

ಹೊರಗಿನ ಮಳೆ ಬಿಲ್ವಮಂಗಳನ ಎದೆಯಲ್ಲೂ ಸುರಿಯಿತು. ಮನದೊಳಗೆ ಮಿಂಚಾಯಿತು. ಕಾಲ ಕೂಡಿ ಬಂದಿತ್ತು. ಅವಳ ಪಾದಕ್ಕೆ ಮುತ್ತಿಟ್ಟವನೇ ಎದ್ದು ಹೊರಟ. ಬೆಳಗಾಗುವವರೆಗೂ ಜಡಿಮಳೆಯಲ್ಲೇ ನಡೆದ. ಬೆಳಕು ಮೂಡುವ ಹೊತ್ತಿಗೆ ಸರಿಯಾಗಿ ದೇವಾಲಯದಲ್ಲಿ ನಿಂತಿದ್ದ ~ ಚೇತನಾ ಬಿಲ್ವಮಂಗಳ ಒಬ್ಬ ಸಜ್ಜನ, ಶ್ರೀಮಂತ. ಜೊತೆಗೆ ಮಹಾನ್ ಹರಿಭಕ್ತ. ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ ಸಹಜವೇನೋ ಅನ್ನುವಷ್ಟು ತೀವ್ರತೆ ಇತ್ತು ಅವನಲ್ಲಿ. ಚೂಡಾಮಣಿ, ಸೌಂದರ್ಯ ಶಿರೋಮಣಿ. ಹುಟ್ಟಿದ್ದು ವೇಶ್ಯೆಯರ ಕುಲದಲ್ಲಿ. ಇವಳು ಬಿಲ್ವಮಂಗಳನ ಮನದನ್ನೆ. ಅವರಿಬ್ಬರ ಪ್ರೇಮಕ್ಕೆ ಅವರ ಸುತ್ತಮುತ್ತಲಿನ ಜಗತ್ತು ಬೆರಗಾಗಿತ್ತು. ಮದುವೆಯಿಲ್ಲ ಅನ್ನುವುದೊಂದು ಬಿಟ್ಟರೆ ಯಾವ ದೇವದಂಪತಿಗೂ ಕಡಿಮೆ ಇಲ್ಲದಂತೆ ಸಾಂಗತ್ಯಸುಖ … Continue reading ಪ್ರಾಚೀನ ಪ್ರೇಮ ಕಥೆಗಳು : ಬಿಲ್ವಮಂಗಳನ ಚೂಡಾಮಣಿ

ಡಯೋನಿಸಸ್ ಎಂಬ ದ್ವಿಜ : ಗ್ರೀಕ್ ಪುರಾಣ ಕಥೆಗಳು ~ 10

ದುಃಖಿತನಾದ ಸ್ಯೂಸ್, ಸೆಮಿಲಿಯ ಮಗುವನ್ನಾದರೂ ಜೋಪಾನ ಮಾಡಬೇಕೆಂದು ನಿಶ್ಚಯಿಸಿದ. ಇನ್ನೂ ಸಂಪೂರ್ಣ ಬೆಳೆದಿರದ ಆರು ತಿಂಗಳ ಆ ಭ್ರೂಣವನ್ನು ತನ್ನ ತೊಡೆ ಸಿಗಿದು, ಅದರಲ್ಲಿಟ್ಟುಕೊಂಡ. ಮೂರು ತಿಂಗಳ ಕಾಲ ಅದರ ಆರೈಕೆ ಮಾಡಿದ. ಒಂಭತ್ತನೇ ತಿಂಗಳಿಗೆ ಗಂಡು ಮಗುವೊಂದು ಸ್ಯೂಸನ ತೊಡೆಯಿಂದ ಹುಟ್ಟಿಬಂತು. ~ ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಸ್ಯೂಸ್ ದೇವನ ಪ್ರಣಯ ಲೀಲೆಗಳು ಅಪಾರ. ಆತನ ಪಟ್ಟದರಸಿ ಹೀರಾ ದೇವಿಯಲ್ಲದೆ ದೇವ, ದಾವನ, ಮಾನವರಲ್ಲೂ ಅವನಿಗೆ ಪ್ರೇಯಸಿಯರಿದ್ದರು. ಅವರಿಂದ ಮಕ್ಕಳೂ ಇದ್ದವು. ಒಮ್ಮೆ ಸ್ಯೂಸ್ ದೇವನಿಗೆ ಕಾಡ್ಮಿಯ ನಗರವನ್ನು ಆಳುತ್ತಿದ್ದ ಕಾಡ್ಮಸ್ ಮತ್ತು ಹಾರ್ಮೋನಿಯಾರ ಮಗಳು … Continue reading ಡಯೋನಿಸಸ್ ಎಂಬ ದ್ವಿಜ : ಗ್ರೀಕ್ ಪುರಾಣ ಕಥೆಗಳು ~ 10

ಭೂಮಿಗೆ ಬಂದ ಮೊಟ್ಟಮೊದಲ ಮಿಡತೆ ಟಿಥೋನಸ್ : ಗ್ರೀಕ್ ಪುರಾಣ ಕಥೆಗಳು ~ 6

ಸ್ಯೂಸ್ ದೇವನನ್ನು ಪ್ರಾರ್ಥಿಸಿ ಒಲಿಸಿಕೊಂಡ ಈಯೋಸ್, ಟಿಥೋನಸನನ್ನು ಚಿರಾಯುವನ್ನಾಗಿ ಮಾಡಬೇಕೆಂದು ಕೇಳಿಕೊಂಡಳು. ಸ್ಯೂಸ್ ದೇವ ಅದನ್ನು ದಯಪಾಲಿಸಿದ. ಆದರೆ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಉಷಾದೇವತೆ ಈಯೋಸ್ ಅಪ್ರತಿಮ ಸುಂದರಿ. ಅವಳನ್ನು ಹೊಂದಲು ದೇವತೆಗಳು ತಮ್ಮತಮ್ಮಲ್ಲೆ ಹೊಡೆದಾಡುತ್ತಿದ್ದರು. ಈಯೋಸ್ ಕೂಡಾ ದೇವತೆಗಳು, ಮನುಷ್ಯರೆನ್ನದೆ ಹಲವು ಜನರೊಡನೆ ಸಂಬಂಧ ಇರಿಸಿಕೊಂಡಿದ್ದಳು. ತಾನು ಯಾರನ್ನಾದರೂ ಬಯಸಿ ಅವರು ನಿರಾಕರಿಸಿದರೆ, ಅವರನ್ನು ಹೊತ್ತುಕೊಂಡು ತರಲೂ ಆಕೆ ಹಿಂದೆಮುಂದೆ ನೋಡುತ್ತಿರಲಿಲ್ಲ. ಆದರೆ ಈಯೋಸ್ ದುರದೃಷ್ಟವಂತೆ. ಅವಳು ಪ್ರೇಮಿಸಿದ ಯಾವ ಗಂಡಸೂ ಅವಳೊಡನೆ ಹೆಚ್ಚು ಕಾಲ ಇರುತ್ತಿರಲಿಲ್ಲ. ಇಂಥಾ ಈಯೋಸ್ ಟಿಥೋನಸ್’ನನ್ನು ಮನಸಾರೆ ಪ್ರೇಮಿಸಿದಳು. ಟಿಥೋನಸ್ … Continue reading ಭೂಮಿಗೆ ಬಂದ ಮೊಟ್ಟಮೊದಲ ಮಿಡತೆ ಟಿಥೋನಸ್ : ಗ್ರೀಕ್ ಪುರಾಣ ಕಥೆಗಳು ~ 6

ಉತ್ತರ ನಿನ್ನ ಕೈಯಲ್ಲೇ ಇದೆ

ಒಮ್ಮೆ ಒಬ್ಬ ಯುವಕ ಬೆಟ್ಟದ ಮೇಲೆ ಇರುತ್ತಿದ್ದ ಝೆನ್ ಗುರುವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಒಂದು ಪುಟ್ಟ ಹಕ್ಕಿಯನ್ನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡು, ಬೆನ್ನ ಹಿಂದೆ ಕೈ ಕಟ್ಟಿಕೊಂಡು ಗುರುವಿನ ಬಳಿಗೆ ಹೋದನು.    ಗುರು ಒಂದು ವೇಳೆ ಹಕ್ಕಿ ಬದುಕಿದೆ ಅಂದರೆ ಹಾಗೇ ಹಕ್ಕಿಯ ಕತ್ತು ಹಿಸುಕಿ ಕೊಂದುಬಿಡುವುದಾಗಿಯೂ, ಸತ್ತಿದೆ ಅಂದರೆ ಹಕ್ಕಿಯನ್ನು ಮುಷ್ಟಿ ತೆರೆದು ಹಾರಿಬಿಡುವುದಾಗಿಯೂ ಅವನು ಆಲೋಚಿಸಿ, “ಗುರುವೇ! ನನ್ನ ಕೈಯೊಳಗೆ ಇರುವ ಹಕ್ಕಿ ಬದುಕಿದೆಯೋ, ಸತ್ತಿದೆಯೋ?” ಎಂದು ಕೇಳಿದನು.  ಯುವಕನ ಮುಖವನ್ನು ಶಾಂತವಾಗಿ ದಿಟ್ಟಿಸಿದ ಗುರು, “ಉತ್ತರ ನಿನ್ನ ಕೈಯಲ್ಲೇ ಇದೆ!” ಎಂದು ಮುಗುಳ್ನಕ್ಕನು.  Continue reading ಉತ್ತರ ನಿನ್ನ ಕೈಯಲ್ಲೇ ಇದೆ

External link to ಮೂರ್ಖತ್ವದ ಮಾನದಂಡ

ಮೂರ್ಖತ್ವದ ಮಾನದಂಡ

~ ಯಾದಿರಾ ಮರುಭೂಮಿಯ ಮಹಾಯೋಗಿನಿ ರಾ-ಉಮ್ ಬಳಿಗೆ ಮೂರ್ಖನೊಬ್ಬ ಬಂದ. ಈಚಲ ಮರದ ಕೆಳಗೆ ಧ್ಯಾನಾಸಕ್ತಳಾಗಿದ್ದ ರಾ-ಉಮ್ ಕಣ್ಣು ತೆರೆದಳು. ‘ಅಮ್ಮಾನಾನೊಬ್ಬ ಮೂರ್ಖ ಎಂದು ನನಗೆ ಗೊತ್ತಿದೆ. ಮೂರ್ಖತ್ವವನ್ನು ಹೇಗೆ ಕಳೆದುಕೊಳ್ಳುವುದು ಎಂದು ಮಾತ್ರ ಗೊತ್ತಾಗುತ್ತಿಲ್ಲ’ ಎಂದು ಆ ಮೂರ್ಖ ಅಲವತ್ತುಕೊಂಡ. ರಾ-ಉಮ್ ಗಹಗಹಿಸಿ ನಕ್ಕು. ‘ಅಂದರೆ ನೀನು ಮೂರ್ಖ ಎಂದು ನಿನಗೆ ಗೊತ್ತಿದೆ. ಹಾಗಾದರೆ ನೀನು ಮೂರ್ಖನಾಗಿರಲು ಸಾಧ್ಯವೇ ಇಲ್ಲ’ ಎಂದಳು. ಮೂರ್ಖನಿಗೆ ತಲೆಕೆಟ್ಟಂತಾಯಿತು. ಅವನು ವಿವರಿಸಿದ: ‘ಎಲ್ಲರೂ ನನ್ನನ್ನು ಮೂರ್ಖ ಎನ್ನುತ್ತಾರೆ’ ರಾ-ಉಮ್ ಗೆ ಸಿಟ್ಟು ಬಂತು: ‘ಮೂರ್ಖ… ಇತರರು ಹೇಳುವುದನ್ನು ಕೇಳಿಸಿಕೊಂಡು ನಿನ್ನನ್ನು ನೀನು ಅರಿಯುತ್ತಿದ್ದರೆ ನೀನು … Continue reading ಮೂರ್ಖತ್ವದ ಮಾನದಂಡ