ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಬ್ರಹ್ಮದತ್ತನ ಕಥೆ

ವರರುಚಿಯಾಗಿ ಹುಟ್ಟಿದ ಪುಷ್ಪದಂತನು ತನ್ನ ಜೀವನವೃತ್ತಾಂತವನ್ನು ಕಾಣಭೂತಿಗೆ ಹೇಳುತ್ತಿದ್ದಾನೆ. ಈ ಕಥನದಲ್ಲೀಗ ವರರುಚಿಯು ತಾನು ತನ್ನ ಗುರು ವರ್ಷೋಪಾಧ್ಯಯರಿಂದ ಕೇಳಿ ತಿಳಿದ ಪಾಟಲೀಪುತ್ರ ನಗರದ ಕಥೆಯನ್ನು ಹೇಳುತ್ತಿದ್ದಾನೆ.  ಪುತ್ರಕನಿಗೆ ಯಜ್ಞದತ್ತನು ದಾನಧರ್ಮಾದಿಗಳನ್ನು ಮಾಡಲು ಸೂಚಿಸಿ, ಅದಕ್ಕೆ ಪೂರಕವಾಗಿ ಬ್ರಹ್ಮದತ್ತನ ಕಥೆಯನ್ನು ಹೇಳಲು ಆರಂಭಿಸಿದನು. ಮುಂದೆ… ವಾರಣಾಸಿಯಲ್ಲಿ ಬ್ರಹ್ಮದತ್ತನೆಂಬ ರಾಜನಿದ್ದನು. ರಾತ್ರಿ ಅರಮನೆಯ ಉಪ್ಪರಿಗೆಯಲ್ಲಿ ನಿಂತಿದ್ದಾಗ ಬಂಗಾರದ ಮೈಕಾಂತಿಯುಳ್ಳ ಹಂಸ ಜೋಡಿಯೊಂದು ರೆಕ್ಕೆ ಬೀಸಿಕೊಂಡು ಅವನೆದುರೇ ಹಾರಿಹೋದವು. ಅವುಗಳ ಮೋಹಕ ಬಣ್ಣಕ್ಕೆ, ಹೊಳಪಿಗೆ ರಾಜನು ಮಾರುಹೋದನು. ಏನಾದರೂ ಮಾಡಿ […]

ಕಥಾ ಸರಿತ್ಸಾಗರ : ದಾಯಾದಿ ಸಹೋದರರು ಹೇಳಿದ ವರ್ಷೋಪಾಧ್ಯಾಯರ ಕಥೆ

ವರರುಚಿಗೆ ವೇತಸಪುರದ ದೇವಸ್ವಾಮಿ ಮತ್ತು ಕರಂಭಕ ಎಂಬ ಬ್ರಾಹ್ಮಣ ಸಹೋದರರ ಮಕ್ಕಳಾದ ವ್ಯಾಡಿ ಮತ್ತು ಇಂದ್ರದತ್ತರ ಪರಿಚಯವಾಯಿತು. ಅವರ ಪರಿಚಯವನ್ನು ಕೇಳಲು ಆ ದಾಯಾದಿ ಸಹೋದರರು ಹೇಳಲು ಆರಂಭಿಸಿದರು…  ಏಕಕಾಲಕ್ಕೆ ತಮ್ಮ ತಂದೆಯರನ್ನು ಕಳೆದುಕೊಂಡ ವೇತಸಪುರದ ವ್ಯಾಡಿ ಮತ್ತು ಇಂದ್ರದತ್ತರು ಉತ್ತಮ ವಿದ್ಯೆ ನೀಡಬಲ್ಲ ಗುರುವಿಗಾಗಿ ಅಲೆದಾಡಿ, ಕುಮಾರಸ್ವಾಮಿಯನ್ನು ಕುರಿತು ಪ್ರಾರ್ಥಿಸಿದರು. ಕುಮಾರಸ್ವಾಮಿಯು ಅವರಿಗೆ ನಂದ ಮಹಾರಾಜನ ಪಾಟಲಿಕ ಎಂಬ ನಗರದಲ್ಲಿ ವಾಸವಿರುವ ವರ್ಷೋಪಾಧ್ಯಾಯನನ್ನು ಆಶ್ರಯಿಸುವಂತೆ ಸೂಚಿಸಿದನು. ಅದರಂತೆ ಪಾಟಲಿಕ ನಗರಕ್ಕೆ ಬಂದ ದಾಯಾದಿಗಳು ಅಲ್ಲಿಯ ಜನರನ್ನು […]

ಕಥಾ ಸರಿತ್ಸಾಗರ : ವ್ಯಾಡಿ, ಇಂದ್ರದತ್ತರೊಡನೆ ಏಕಶ್ರುತಧರ ವರರುಚಿಯ ಭೇಟಿ

ವಿಂಧ್ಯಾಟವಿಯಲ್ಲಿ ಕಾಣಭೂತಿಯನ್ನು ಭೇಟಿ ಮಾಡಿ ಮಾತನಾಡಿದಾಗ ವರರುಚಿಗೆ ತನ್ನ ಪೂರ್ವಜನ್ಮದ ಸ್ಮರಣೆ ಉಂಟಾಯಿತು. ಅವನು ತಾನು ಪುಷ್ಪದಂತನೆಂದೂ, ಕಾಣಭೂತಿಗೆ ಕಥೆ ಹೇಳುವುದರಿಂದ ತನಗೆ ಶಾಪವಿಮೋಚನೆಯಾಗುವುದೆಂದೂ ಅವನು ಅರಿತನು. ಅದೇ ವೇಳೆಗೆ ಕಾಣಭೂತಿಯು ವರರುಚಿಗೆ ಅವನ ಜೀವನ ವೃತ್ತಾಂತವನ್ನು ಹೇಳುವಂತೆ ಕೇಳಿಕೊಂಡನು. ಅದರಂತೆ ವರರುಚಿಯು ತನ್ನ ಜೀವನಗಾಥೆಯನ್ನು ಹೇಳಲಾರಂಭಿಸಿದನು. ಕೌಶಾಂಬಿಯಲ್ಲಿ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನಿಗೆ ಅಗ್ನಿಶಿಖ ಎಂಬ ಹೆಸರೂ ಇತ್ತು. ಅವನ ಹೆಂಡತಿ ವಸುದತ್ತಾ, ಒಂದೊಮ್ಮೆ ಮುನಿಕುಮಾರಿಯಾಗಿದ್ದು, ಶಾಪದಿಂದ ಆಕೆ ಬ್ರಾಹ್ಮಣಳಾಗಿ ಹುಟ್ಟಿದ್ದಳು. ಅವರ ಮಗನೇ ವರರುಚಿ. ವರರುಚಿ […]

ಕಥಾಸರಿತ್ಸಾಗರ : ಕದ್ದು ಕಥೆ ಕೇಳಿದ ಪುಷ್ಪದಂತನಿಗೆ ಶಾಪ

ಸೋಮದೇವನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರವು 21,500 ಶ್ಲೋಕಗಳುಳ್ಳ ಕೃತಿ. ನೂರಾರು ಕಥೆಗಳು ಬಂದು ಸೇರಿ ಉಂಟಾದ ಕಥಾ ಸಮುದ್ರವಿದು. ಆದ್ದರಿಂದಲೇ ಇದಕ್ಕೆ ‘ಕಥಾ ಸರಿತ್ಸಾಗರ’ ಎಂಬ ಹೆಸರು. ಈ ಕಥೆಗಳನ್ನು ಹಲವು ಆಕರಗಳಿಂದ ಸಂಗ್ರಹಿಸಿ, ಸರಳವಾಗಿ ಅನುವಾದಿಸಿ ನೀಡುವ ಪ್ರಯತ್ನವಿದು…  ಕೈಲಾಸದಲ್ಲಿ ಒಮ್ಮೆ ಪಾರ್ವತಿಯು ಶಿವನಿಗೆ ಕಥೆ ಹೇಳೆಂದು ಪೀಡಿಸಿದಳು. ಶಿವನು ತನ್ನ ಪ್ರೀತಿಯ ಮಡದಿಯ ಕೋರಿಕೆಯನ್ನು ನಿರಾಕರಿಸಲಾಗದೆ, ವಿದ್ಯಾಧರರ ಕಥೆ ಹೇಳುವುದಾಗಿ ಒಪ್ಪಿಕೊಂಡನು. ಆಗ ಪಾರ್ವತಿಯು, “ನೀನು ಹೇಳುವ ಕಥೆಯನ್ನು ನಾನೊಬ್ಬಳೇ ಕೇಳಬೇಕು” ಎಂದು ತಾಕೀತು ಮಾಡಿ, […]