ಗುರು – ಶಿಷ್ಯರ ನಡುವಣ ವ್ಯತ್ಯಾಸವೇನು? : ಸಾಇಲ್ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್‌ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್‌ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ ಪಾನೀಯ ಧ್ಯಾನದ ಹೊತ್ತು ಇಲ್ಲವೇ ಬೆಳಗ್ಗಿನ ಕಲಿಕೆಯ ಸಮಯ ಅಥವಾ ಎಲ್ಲಾ ಶಿಷ್ಯರೂ ಒಟ್ಟಾಗಿರುವ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಅವನ ಬಾಯಿಂದ ಹೊರಬರುತ್ತಿದ್ದವು. ಈ ಪ್ರಶ್ನೆಗಳಿಗೆ ರಾ-ಉತ್ತರಿಸುತ್ತಾಳೆ ಎಂಬ ಖಾತರಿಯೇನೂ ಇರಲಿಲ್ಲ. ಆದರೆ ಆಗಾಗ ಇಂಥ ಪ್ರಶ್ನೆಗಳನ್ನು ಅವನಂತೂ ಕೇಳುತ್ತಿರುತ್ತಿದ್ದ. ಇಂಥದ್ದೇ ಒಂದು ಸಂದರ್ಭದಲ್ಲಿ ಅವನು ಕೇಳಿದ ಪ್ರಶ್ನೆ […]

ಬೇಗ ಏಳುವುದರ ನಷ್ಟ : ನಸ್ರುದ್ದೀನನ ಕಥೆಗಳು

ಮುಲ್ಲಾ ನಸ್ರುದ್ದೀನನ ತಂದೆ ಹೇಳಿದ, “ಮಗನೇ, ನಾಳೆಯಿಂದ ನೀನು ಬೆಳಗ್ಗೆ ಬೇಗ ಏಳೋದು ರೂಢಿ ಮಾಡಿಕೋ” “ಯಾಕೆ?” ಕೇಳಿದ ನಸ್ರುದ್ದೀನ್. ತಂದೆ : ಅದು ಒಳ್ಳೆ ಅಭ್ಯಾಸ ನಸ್ರುದ್ದೀನ್ : ನನಗೆ ಹಲವು ಒಳ್ಳೆ ಅಭ್ಯಾಸಗಳಿವೆ. ಇದರಲ್ಲೇನು ವಿಶೇಷ? ತಂದೆ : ಇವತ್ತು ಬೇಗ ಎದ್ದು ಮುಂಜಾನೆಯ ವಿಹಾರಕ್ಕೆ ಹೋದಾಗ ರಸ್ತೆಯಲ್ಲಿ ನನಗೆ ಬಂಗಾರದ ನಾಣ್ಯಗಳ ಸಂಚಿ ಸಿಕ್ಕತು. ನೋಡು! ಬೇಗ ಎದ್ದರೆ ಇಂಥಾ ಲಾಭಗಳುಂಟು. ನಸ್ರುದ್ದೀನ್ : ಹೋ! ನೆನ್ನೆ ರಾತ್ರಿ ನಾನು ಬಹಳ ತಡವಾಗಿ […]

ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ~ ಆನಂದಪೂರ್ಣ ‘ಬಾಡ’ದ ತಿಮ್ಮಪ್ಪ ನಾಯಕ ಕಾಗಿನೆಲೆಯ ಕನಕದಾಸರಾದ ಕತೆ ನಮಗೆಲ್ಲ ತಿಳಿದಿದೆ. ದಾಸಶ್ರೇಷ್ಠ, ಉತ್ತಮ ಕವಿ, ಕರ್ನಾಟಕ ಸಂಗೀತಕ್ಕೆ ಮಹತ್ವದ ಕಾಣಿಕೆಯನ್ನಿತ್ತ […]

ಎರಡು ಬಾರಿ ಸತ್ತ ಮನುಷ್ಯ : ಡೈರಿ ಕಥೆಗಳು

ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ…. ~ ಅಲಾವಿಕಾ ಒಂದೂರಲ್ಲಿ ಒಬ್ಬನಿಗೆ ಸಾವು ಅಂದರೆ ವಿಪರೀತ ಭಯ. ಊರಿನಲ್ಲಿ ಯಾರಾದರೂ ಸತ್ತುಹೋದರು ಎಂದು ಗೊತ್ತಾದರೆ ತಾನು ನಡುಗಿಹೋಗುತ್ತಿದ್ದ. ತಾನು ಯಾವಾಗ, ಎಲ್ಲಿ, ಹೇಗೆ ಸಾಯಬಹುದು ಎಂದು ಚಿಂತೆಗೆ ಬೀಳುತ್ತಿದ್ದ. ಒಂದು ದಿನ ಅವನ ಪಕ್ಕದ ಮನೆಯವನ ಹೆಂಡತಿ ಸತ್ತುಹೋದಳು. ಚಿಕ್ಕವಯಸ್ಸಿನ ಹೆಂಗಸು. ಅವಳ ಸಾವಿನ ಸುದ್ದಿ ಕೇಳಿದ ಮೇಲೆ ಈತನಿಗೆ ವಿಪರೀತ ಭಯವಾಗತೊಡಗಿತು. ಗಂಡ […]

ಅವನು ಇಲ್ಲದೆ ಇದ್ದಾಗ ಅತ್ತಿರಲಿಲ್ಲ, ಅವನು ಹೋದನೆಂದು ನಾನೇಕೆ ಅಳಲಿ? ~ ಮಾಧವ ಲಾಹೋರಿ ಕಥೆಗಳು

ಊರಿನ ಜನಕ್ಕೆ ಇದೇನು ವಿಚಿತ್ರ ಅಂತ ಗಾಬರಿಯಾಯಿತು. ಬೇರೆ ಸಮಯದಲ್ಲೇನೋ ಸರಿ… ಮಗ ಸತ್ತುಹೋದಾಗಲೂ ಹೀಗೆ ಆಡಬೇಕೇ? ಎಂದು ಮಾತಾಡಿಕೊಂಡರು. ಇಷ್ಟಕ್ಕೂ ಮಾಧವ ಲಾಹೋರಿ ಹಾಗೆ ನಡೆದುಕೊಂಡಿದ್ದೇಕೆ ಗೊತ್ತೆ……? ~ ಆನಂದಪೂರ್ಣ ಮಾಧವ ಲಾಹೋರಿ ಎಂಥಾ ವಿಲಕ್ಷಣ ಮನುಷ್ಯ ಅಂದರೆ, ಅವನ ವರ್ತನೆಯನ್ನು ನೋಡಿದವರು ಒಂದು ಕ್ಷಣ ದಂಗಾಗಿಬಿಡುತ್ತಿದ್ದರು. ಅವನನ್ನು ಚೆನ್ನಾಗಿ ಬೈದುಕೊಳ್ಳುತ್ತಿದ್ದರು. ನಂತರದಲ್ಲಿ ಯಾವಾಗಲೋ ಅವರಿಗೆ ಅವನ ವರ್ತನೆಗೆ ಕಾರಣ ತಿಳಿಯುತ್ತಿತ್ತು. ಆ ಕಾರಣ ಅವರನ್ನು ಮತ್ತಷ್ಟು ದಂಗುಬಡಿಸಿ, ಮಾಧೋನ ಬಗ್ಗೆ ಬೇಸರಪಡಬೇಕೋ, ಅವನನ್ನು ಗೌರವದಿಂದ […]

ಮಹಾ ಮೌನಿ ಗುರು ಮತ್ತು ಮಾತುಗಾರ ಸನ್ಯಾಸಿ : ಝೆನ್ ಕಥೆ

ಚೀನಾ ದೇಶದಲ್ಲಿ ಒಬ್ಬ ಝೆನ್ ಗುರುವಿದ್ದ. ಅವನು ಮಿತಭಾಷಿ, ಮಹಾಮೌನಿ. ಮಾತೇ ಆಡದೇ ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ. ಎಷ್ಟೋ ಸಲ ಆತುರಗಾರ ಶಿಷ್ಯರು ಮಾತೇ ಆಡದ ಗುರುವಿನ ವರಸೆಗೆ ಬೇಸತ್ತು ಆಶ್ರಮ ತೊರೆಯುತ್ತಿದ್ದರು. ಇಂಥಲ್ಲಿಗೆ ಒಬ್ಬ ಮಾತುಗಾರ ಸನ್ಯಾಸಿ ಬಂದ. ಬಂದು ಕೆಲವೇ ಗಂಟೆಗಳಲ್ಲಿ ಆಶ್ರಮದ ಶಿಷ್ಯರನ್ನೆಲ್ಲ ಗುಡ್ಡೆ ಹಾಕಿಕೊಂಡ. ಅವನ ಮಾತಿನ ಮೋಡಿಗೆ ಅವರೆಲ್ಲ ಬೆರಗಾದರು. ತಮ್ಮ ಗುರುವಿನ ಜೊತೆ ಹೋಲಿಕೆ ಮಾಡಿ ಇವನನ್ನು ಹೊಗಳಿದರು. ಆ ಮಾತುಗಾರ ಗುರುವಿನ ಬಳಿ ಬಂದು “ನನ್ನ […]

ಟ್ರೋಜನ್ ಯುದ್ಧಕ್ಕೆ ಕಾರಣವಾದ ಪ್ಯಾರಿಸನ ತೀರ್ಪು  :  ಗ್ರೀಕ್ ಪುರಾಣ ಕಥೆಗಳು ~ 21

ಹೀರಾ, ಅಫ್ರೋದಿತೆ ಮತ್ತು ಅಥೆನಾ – ಈ ಮೂವರು ದೇವಿಯರಲ್ಲಿ ಯಾರು ಅಪ್ರತಿಮ ಸುಂದರಿ ಎಂದು ತೀರ್ಪು ಕೊಡುವ ಹೊಣೆ ಪ್ಯಾರಿಸ್’ನ ಮೇಲೆ ಬಿತ್ತು. ಅವನು ಅಫ್ರೋದಿತೆಯನ್ನು ಸುಂದರಿಯೆಂದು ಘೋಷಿಸಿದ ಮತ್ತು ಅದಕ್ಕಾಗಿ ಭಾರೀ ಬೆಲೆಯನ್ನೇ ತೆತ್ತ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೌಂಟ್ ಒಲಿಂಪಸ್’ನಲ್ಲಿ ಪೆಲಿಯುಸ್ ಮತ್ತು ಥೆಟಿಸ್ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಸ್ವತಃ ಸ್ಯೂಸ್ ದೇವ ಸಂತೋಷ ಕೂಟದ ನೇತೃತ್ವ ವಹಿಸಿಕೊಂಡಿದ್ದ. ಈರಿಸಳ ಹೊರತಾಗಿ ಪ್ರತಿಯೊಬ್ಬ ದೇವತೆಗಳನ್ನೂ ಉಪ ದೇವತೆಗಳನ್ನೂ ಈ […]

ನಾವೇಕೆ ಗ್ರೀಕ್ ಪುರಾಣ ಕಥೆಗಳ ಸರಣಿ ಪ್ರಕಟಿಸುತ್ತಿದ್ದೇವೆ?

ಅರಳಿಮರ ಕಳೆದ ಕೆಲವು ದಿನಗಳಿಂದ ಗ್ರೀಕ್ ಪುರಾಣ ಕಥೆಗಳಸರಣಿಯನ್ನು ಪ್ರಕಟಿಸುತ್ತಿದೆ. ಇದಕ್ಕೆ ಅಂತಹಾ ಗಹನ ಕಾರಣಗಳೇನೂ ಇಲ್ಲ. ನೇರವಾಗಿ ಮತ್ತು ಸರಳವಾಗಿ ಹೇಳುವುದಾದರೆ ಜಗತ್ತಿನ ಬೇರೆಬೇರೆ ಭಾಗಗಳ ಕತೆಗಳನ್ನು ಓದಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ. ಇತ್ತೀಚಿನ ವರ್ಷಗಳಲ್ಲಿ ನಾವು ಕಥೆಗಳನ್ನು ಕಥೆಗಳನ್ನಾಗಿಯೇ ಓದುವ ಅಭ್ಯಾಸವನ್ನೇ ಬಿಟ್ಟುಬಿಟ್ಟಿದ್ದೇವೆ. ಪ್ರತಿಯೊಂದರಲ್ಲೂ ಏನಾದರೊಂದನ್ನು ಹುಡುಕುವುದು ನಮಗೆ ರೂಢಿಯಾಗಿಬಿಟ್ಟಿದೆ. ನೀತಿಯನ್ನೋ, ಮೌಲ್ಯವನ್ನೋ, ಸಂದೇಶವನ್ನೋ, ಒಳಿತನ್ನೋ, ಕೆಡುಕನ್ನೋ ನಾವು ಅಲ್ಲಿ ಹುಡುಕಲೇ ಬೇಕು. ಇದೊಂದು ಬೌದ್ಧಿಕ ಕಸರತ್ತು ಅಷ್ಟೇ. ಏಕೆಂದರೆ, ಹಾಗೆ ಕಥೆಗಳಿಗೆ ಏನಾದರೊಂದು […]