ರಾಜ್ಯ ಕಳೆದುಕೊಂಡು ಭಿಕ್ಷುಕನಾದ ಜನಕ ಮಹಾರಾಜನ ಕಥೆ

ಇನ್ನೇನು ಜನಕ ಅದನ್ನು ತಿನ್ನಲು ಕೂರಬೇಕು… ಗಿಡುಗವೊಂದು ರೆಕ್ಕೆ ಫಡಫಡಿಸುತ್ತಾ ಹಾರಿಬಂದು ದೂಳೆಬ್ಬಿಸಿತು. ಜನಕನ ಕೈಯಿಂದ ಅನ್ನದ ಕೊಟ್ಟೆ ಜಾರಿಬಿದ್ದು ಮಣ್ಣಲ್ಲಿ ಕಲೆಸಿಹೋಯಿತು. ಹಸಿದ ಜನಕ, ಮಣ್ಣಲ್ಲಿ ಅನ್ನ, ಒಂದೇ ಸಮ ಸುರಿಯುತ್ತಿರುವ ಕಣ್ಣೀರು… ಕ್ಷಣ ಕಳೆದು ಕಣ್ತೆರೆದರೆ, ಎದುರಲ್ಲಿ ಮಂತ್ರಿ ಆತಂಕದಿಂದ ನಿಂತಿದ್ದಾನೆ! ~ ಸಾ.ಹಿರಣ್ಮಯಿ ಮಿಥಿಲೆಯ ರಾಜಧಾನಿಯ ಮೇಲೆ ಶತ್ರು ರಾಜನೊಬ್ಬ ಆಕ್ರಮಣ ಮಾಡಿದ. ಧಿಡೀರನೆ ಮುತ್ತಿಗೆ ಹಾಕಿದ ಸೇನೆಯನ್ನು ಎದುರಿಸಲಾಗದೆ ಜನಕನ ಸೈನ್ಯ ಸೋತುಹೋಯಿತು. ಜನಕ ಮಹಾರಾಜ ಅಧಿಕಾರಚ್ಯುತನಾಗಬೇಕಾಯಿತು. ಸೈನಿಕರು ಜನಕನನ್ನು ಬಂಧಿಸಿ, […]

ಸೂಪ್’ನಲ್ಲಿ ಹಾವಿನ ತಲೆ ! : ಒಂದು ಝೆನ್ ಕಥೆ ~ Tea time story

ಒಂದು ದಿನ ಝೆನ್ ಆಶ್ರಮಕ್ಕೆ ಝೆನ್ ಮಾಸ್ಟರ್ ಅನಿರೀಕ್ಷಿತವಾಗಿ ಭೇಟಿ ನೀಡಿದ. ಆಶ್ರಮದ ಅಡಿಗೆಯವ ಮಾಸ್ಟರ್ ಗಾಗಿ ವಿಶೇಷ ಸೂಪ್ ತಯಾರಿಸಲು ತರಾತುರಿಯಿಂದ ಸಿದ್ಧತೆ ಮಾಡಿಕೊಳ್ಳತೊಡಗಿದ. ಅವ ಆಶ್ರಮದ ತೋಟಕ್ಕೆ ಹೋಗಿ ಗಡಿಬಿಡಿಯಿಂದ ಒಂದಿಷ್ಟು ತರಕಾರಿ ಕತ್ತರಿಸಿಕೊಂಡು ಬಂದು ರುಚಿಕಟ್ಟಾದ ಸೂಪ್ ತಯಾರಿಸಿದ. ಮಾಸ್ಟರ್, ಅಡಿಗೆಯವ ತಯಾರಿಸಿದ ಸೂಪ್ ಖುಶಿಯಿಂದ ಸೇವಿಸತೊಡಗಿದ. ಅರ್ಧ ಸೂಪ್ ಸೇವಿಸಿದವನಿಗೆ ಅದರಲ್ಲೊಂದು ಹಾವಿನ ಕತ್ತರಿಸಿದ ತಲೆ ಕಾಣಿಸಿತು. ಮಾಸ್ಟರ್ ಸಿಟ್ಟಿನಿಂದ ಅಡಿಗೆಯವನನ್ನು ಕೂಗಿದ. ಅಡಿಗೆಯವ ಮಾಸ್ಟರ್ ಎದುರು ಬಂದು ನಿಂತ. “ […]

ದೀಪದ ಕಂಬದೆತ್ತರಕ್ಕೆ ಹಾರಬಹುದೇ? : ರಾ-ಉಮ್ ಕಥೆಗಳು

~ ಯಾದಿರಾ ವಾ-ಐನ್-ಸಾಇಲ್ ಕೆಲ ಕಾಲ ರಾ-ಉಮ್ ಆಶ್ರಮದಿಂದ ದೂರವಾಗಿದ್ದ. ಇದಕ್ಕೆ ಕಾರಣ ಶಿಷ್ಯರೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದ್ದ ಪರಿವ್ರಾಜಕತ್ವ. ತಿರುಗಾಟದಲ್ಲಿದ್ದ ವಾ-ಐನ್ ಒಂದು ದಿನ ಹಲವು ಗರಡಿಯಾಳುಗಳು ಸಾಮು ಮಾಡುತ್ತಿದ್ದ ಸ್ಥಳವೊಂದಕ್ಕೆ ಬಂದ. ಎಲ್ಲರೂ ವ್ಯಾಯಾಮದಲ್ಲಿ ನಿರತರಾಗಿದ್ದರು. ವಾ-ಐನ್‌ನ ಉಡುಪು ಮತ್ತು ಗಡ್ಡವನ್ನು ಕಂಡು ಕಂಡ ಒಬ್ಬ ಗರಡಿಯಾಳಿಗೆ ಈತ ಯಾರೋ ದೊಡ್ಡ ಅನುಭಾವಿಯೇ ಇರಬೇಕು ಅನ್ನಿಸಿತು. ಅವನು ಹತ್ತಿರ ಬಂದು ಒಂದು ಪ್ರಶ್ನೆ ಕೇಳಿದ, ‘ಗುರುಗಳೇ ನಾನು ಹಲವು ದಿನಗಳಿಂದ ಜಿಗಿಯುವ ಅಭ್ಯಾಸ ಮಾಡುತ್ತಿದ್ದೇನೆ. ಹೀಗೇ […]

ಕತ್ತರಿಸುವ ಕಿವಿಗಳು, ಹೊಲೆಯುವ ಕಣ್ಣು : ದೃಷ್ಟಾಂತ ಕಥೆ

ಒಂದೂರಿನಲ್ಲಿ ಒಬ್ಬ ಒಕ್ಕಣ್ಣ ದರ್ಜಿಯಿದ್ದ. ಬಟ್ಟೆ ಹೊಲಿದು ಸುಖ ಜೀವನ ನಡೆಸುತ್ತಿದ್ದರೂ ಅವನಿಗೆ ತಾನು ಒಕ್ಕಣ್ಣನೆಂಬ ಕೊರಗು ಸದಾ ಕಾಡುತ್ತಿತ್ತು. ಹೀಗಿರುತ್ತ, ಒಬ್ಬ ಸಾಧು ಅವನ ಮಳಿಗೆಗೆ ಬಂದ. ಅವನಿಗೆ ಹಾಲು ಹಣ್ಣು ಕೊಟ್ಟ ಸತ್ಕರಿಸಿದ ದರ್ಜಿ, “ನನ್ನ ಆದಾಯ ಚೆನ್ನಾಗಿಯೇ ಇದೆ. ಆದರೂ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಏನಾದರೂ ಉಪಾಯ ಹೇಳಿ” ಅಂದ. ಸಾಧು, “ಸರಿ. ಹೋಗಿ ಒಂದು ಕತ್ತರಿಯನ್ನೂ, ಸೂಜಿಯನ್ನೂ ತೆಗೆದುಕೊಂಡು ಬಾ” ಎಂದು ಹೇಳಿದ. ದರ್ಜಿಗೆ ಆಶ್ಚರ್ಯವಾಯಿತು. ಸಮಾಧಾನ ನೀಡಿ ಅಂದರೆ ಕತ್ತರಿ, […]

ಒಂದು ಝೆನ್ ಕಥೆಯ ಹುಡುಕಾಟ : ಕೆ.ಸಚ್ಚಿದಾನಂದನ್

ಕೆ. ಸಚ್ಚಿದಾನಂದನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಒಂದು ಸಂಜೆ, ಝೆನ್ ಕಥೆ ಗುರುವನ್ನು ಹುಡುಕುತ್ತಾ ದಾರಿಗಿಳಿಯಿತು. ಹಾದಿಯಲ್ಲಿ ಗುಡುಗು, ಮಿಂಚು, ಭರ್ಜರಿ ಮಳೆ. ತೊಯ್ಸಿಕೊಂಡು ಒದ್ದೆಯಾದ ಕಥೆಗೆ ಚಳಿಯಿಂದಾಗಿ ಮೈಯೆಲ್ಲಾ ನಡುಕ. ಕಾಡಿನ ಕಗ್ಗತ್ತಲು ಮತ್ತು ಕ್ರೂರ ಪ್ರಾಣಿಗಳ ಸದ್ದಿಗೆ ಬೆದರಿದ ಕಥೆಯ ಅವಸರ, ಮರದಿಂದ ಮರಕ್ಕೆ. ಕಥೆ ಬೇಟೆಗೆ ಬಂದ ಬೇಟೆಗಾರರು ಬರೀ ಮೂಳೆ ಚರ್ಮಗಳ ಬಡಕಲು ಕಥೆ ಕಾಸಿಗೂ ಪ್ರಯೋಜನವಿಲ್ಲವೆಂದು ಬಲೆ ಎತ್ತಿ ಕಥೆಯನ್ನು ಹೊರ ನೂಕಿದರು. ಮುಂದೆ ದಾರಿಯಲ್ಲಿ ಒಬ್ಬ […]

“ನನಗೆ ಕುರಾನಿನಲ್ಲಿ ಏನಿದೆ ಗೊತ್ತು” : ಇದ್ರಿಸ್ ಶಾ ಹೇಳಿದ ದರ್ವೇಶಿ ಕಥೆ

ಬೆಕ್ತಾಶಿ ದರ್ವೇಶಿಯೊಬ್ಬ ತನ್ನ ವಿನಯಶೀಲ ನಡವಳಿಕೆಯಿಂದ ಎಲ್ಲರ ಮನ್ನಣೆ ಪಡೆಯುತ್ತಿದ್ದ. “ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?” ಎಂದು ಯಾರಾದರೂ ಕೇಳಿದರೆ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು”  ಅನ್ನುತ್ತಿದ್ದ. ಒಂದು ದಿನ ದರ್ವೇಶಿ ಚಹಾಖಾನೆಯಲ್ಲಿ ಕುಳಿತಿದ್ದ. ಅಲ್ಲಿದ್ದ ಅಪರಿಚಿತನೊಬ್ಬ ಅವನಿಗೆ ಸಲ್ಲುತ್ತಿದ್ದ ಮನ್ನಣೆ ಕಂಡು ಆಶ್ಚರ್ಯಚಕಿತನಾದ. ದರ್ವೇಶಿಗೆ ಎಲ್ಲರು ಕೇಳುತ್ತಿದ್ದ ಪ್ರಶ್ನೆಯನ್ನೇ ಕೇಳಿದ, “ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?” ದರ್ವೇಶಿ ಚಹಾ ಹೀರುತ್ತ ಹೇಳಿದ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು” . “ಓಹೋ!? ಅದು ಸರಿ… […]

ಖಯಾಮರು ಸೊಳ್ಳೆಗೆ ಹೆದರಿದ್ದೇಕೆ!? : Tea time story

ಉಮರ್ ಖಯಾಮರು ಒಮ್ಮೆ ತಮ್ಮ ಶಿಷ್ಯನೊಡನೆ ದಟ್ಟ ಅಡವಿಯಲ್ಲಿ ಹೋಗುತ್ತಿದ್ದರು. ಹೋಗುತ್ತಾ ಸಂಜೆಯಾಯಿತು. ಖಯ್ಯಾಮರು ತಮ್ಮ ಬಗಲಲ್ಲಿದ್ದ ಚಾಪೆ ಹಾಸಿಕೊಂಡು ನಮಾಜ್ ಮಾಡಲು ಕುಳಿತರು. ಅದೇ ಸಮಯಕ್ಕೆ ಸ್ವಲ್ಪ ದೂರದಲ್ಲಿ ಸಿಂಹ ಘರ್ಜಿಸುವುದು ಕೇಳಿಸಿತು. ಹೆದರಿದ ಶಿಷ್ಯ ಕೂಡಲೇ ಸಮೀಪವಿದ್ದ ಮರವೇರಿ ಕುಳಿತುಕೊಂಡ. ಮನುಷ್ಯವಾಸನೆ ಹಿಡಿದು ಬಂದ ಸಿಂಹ ಖಯಾಮರು ಇದ್ದಲ್ಲಿಗೆ ಬಂತು. ಅವರ ಮುಂದೆಯೇ ನಿಂತಿತು. ಖಯಾಮರು ಚೂರೂ ಕದಲಿಲ್ಲ. ತಮ್ಮ ಪ್ರಾರ್ಥನಾವಿಧಿಗಳನ್ನು ಮುಂದುವರೆಸಿದರು. ಸಿಂಹ ಒಂದೆರಡು ಘಳಿಗೆ ನಿಂತಿದ್ದು ಹೊರಟುಹೋಯಿತು. ಆಮೇಲೆ ಶಿಷ್ಯ ಕೆಳಗಿಳಿದ. […]

ಶಿಷ್ಯರಿಗೆ ಎಂಥದನ್ನು ಹೇಳಬೇಕು!? : ಝೆನ್ ಕಥೆ

ಬೇರೆ ಬೇರೆ ಆಶ್ರಮದ ಇಬ್ಬರು ಗುರುಗಳು  ಮಾತಾಡಿಕೊಳ್ಳುತ್ತಿದ್ದರು. ಗುರು 1 : ಶಿಷ್ಯರಿಗೆ ಯಾವತ್ತೂ ಕಂಡರಿಯಲು ಸಾಧ್ಯವಾಗದ ಸಂಗತಿಯನ್ನೆ ಹೇಳಬೇಕು. ಗುರು 2 : ಯಾಕೆ? ಗುರು 1 : ನೀನು ಅವರಿಗೆ “ನಾನು ಮಂಗಳ ಗ್ರಹಕ್ಕೆ ಹೋಗಿದ್ದೆ; ಅಲ್ಲಿ ಸಾವಿರಾರು ಅನ್ಯಗ್ರಹ ಜೀವಿಗಳನ್ನು ಕಂಡೆ” ಎಂದು ಹೇಳಿದರೆ, ಅವರು ನಂಬಲು ಇಷ್ಟಪಡುತ್ತಾರೆ. ನೀನೇನಾದರೂ “ಈ ದಿನ ಚೆನ್ನಾಗಿದೆ” ಅಂದರೆ, ಶಿಷ್ಯರಲ್ಲಿ ಯಾರಾದರೊಬ್ಬ ಮೂರ್ಖ “ನೆನ್ನೆಯಷ್ಟು ಚೆನ್ನಾಗಿಲ್ಲ” ಎಂದೋ, ಮತ್ತೊಬ್ಬ “ಇಲ್ಲಿಯವರೆಗೆ ಚೆನ್ನಾಗಿದೆ, ಮುಂದೆ ಹೇಗೋ ಏನೋ” […]

ಪುಟ್ಟ ಹಕ್ಕಿಯ ಕಥೆ ಮತ್ತು ಮೂರು ನೀತಿಗಳು : Tea time story

ಒಂದಾನೊಂದು ಕಾಲದಲ್ಲಿ ಒಂದು ಪುಟ್ಟ ಹಕ್ಕಿ ಇತ್ತು. ಚಳಿಗಾಲ ಹತ್ತಿರವಾಗುತ್ತಿದ್ದಂತೆಯೇ ಆ ಹಕ್ಕಿಯ ಗೆಳಯರೆಲ್ಲ ದಕ್ಷಿಣಕ್ಕೆ ಹಾರಿ ಹೋಗುವ ತೀರ್ಮಾನ ಮಾಡಿದರು. ಗೆಳೆಯರು ಎಷ್ಟು ತಿಳಿ ಹೇಳಿದರೂ ಆ ಪುಟ್ಟ ಹಕ್ಕಿ ಅವರೊಡನೆ ದಕ್ಷಿಣಕ್ಕೆ ಹೋಗಲು ಒಪ್ಪಲಿಲ್ಲ. ಕೊನೆಗೆ ನಿರುಪಾಯರಾದ ಬೇರೆಲ್ಲ ಹಕ್ಕಿಗಳು, ಪುಟ್ಚ ಹಕ್ಕಿಯನ್ನು ಅಲ್ಲೇ ಬಿಟ್ಟು ತಮ್ಮ ಪಾಡಿಗೆ ತಾವು ದಕ್ಷಿಣ ದಿಕ್ಕಿನತ್ತ ಹೊರಟು ಹೋದರು. ಕೆಲವೇ ದಿನಗಳಲ್ಲಿ ಚಳಗಾಲದ ಆಗಮನವಾಯಿತು. ಈ ಬಾರಿಯಂತೂ ಕೊರೆಯುವ ಚಳಿ. ಪುಟ್ಟ ಹಕ್ಕಿ, ಚಳಿಗೆ ನಡುಗತೊಡಗಿತು. ಹಕ್ಕಿಗೆ […]

ಖೊಟ್ಟಿ ನಾಣ್ಯ : ಒಂದು ಸೂಫಿ ಕಥೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ ಒಂದೂರಿನಲ್ಲಿ ಒಬ್ಬ ಭೋಳೆ ಮನುಷ್ಯ ಇದ್ದ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಸಣ್ಣ ಪುಟ್ಟ ಸಾಮಾನುಗಳನ್ನು ಮಾರಿ ಜೀವನ ನಡೆಸುತ್ತಿದ್ದ. ಆ ಊರಿನ ಜನ ಅವನನ್ನು ಸಾಮಾನ್ಯ ಜ್ಞಾನ ಇಲ್ಲದ, ಲಾಭ ನಷ್ಟ ಗೊತ್ತಿಲ್ಲದ ಪೆದ್ದ ಎಂದು ತಿಳಿದುಕೊಂಡಿದ್ದರು. ಕೆಲವರು, ಕೊಂಡ ವಸ್ತುಗಳಿಗೆ ಬದಲಾಗಿ ಅವನಿಗೆ ಖೊಟ್ಟಿ ನಾಣ್ಯಗಳನ್ನು ಕೊಡುತ್ತಿದ್ದರು. ಕೆಲವರಂತೂ ದುಡ್ಡು ಕೊಟ್ಟು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಆದರೆ ಈ ಮನುಷ್ಯ ಯಾರೊಂದಿಗೂ ಜಗಳ ಆಡುತ್ತಿರಲಿಲ್ಲ. […]