ಕತ್ತೆಯೊಡನೆ ಕುಸ್ತಿ ಆಡುವ ಕನಸು : ನಸ್ರುದ್ದೀನನ ಕಥೆಗಳು

ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.” ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ […]

ಕಾರ್ಲ್ ಯಂಗ್ ಹೇಳಿದ್ದು : ಅರಳಿಮರ POSTER

ಕಾರ್ಲ್ ಯಂಗ್, ಆಧುನಿಕ ಕಾಲಘಟ್ಟದ ಸ್ವಿಸ್ ಮನಶ್ಶಾಸ್ತ್ರಜ್ಞ, ತತ್ತ್ವಜ್ಞಾನಿ ಮತ್ತು ಸಾಹಿತಿ.  “ಯಾರು ಹೊರಗೆ ನೋಡುತ್ತಾರೋ ಅವರು ಕನಸು ಕಾಣುತ್ತಾರೆ. ಯಾರು ತಮ್ಮೊಳಗೆ ನೋಡಿಕೊಳ್ತಾರೋ ಅವರು ಜಾಗೃತರಾಗುತ್ತಾರೆ” ~ ಕಾರ್ಲ್ ಯಂಗ್

ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ. ಮರುದಿನ ಮುಂಜಾನೆ ಆತ ಆ ಕಾಡನ್ನು ಹುಡುಕುತ್ತ ಹೊರಟ. ದಾರಿಯಲ್ಲಿ ವಿಶ್ರಾಂತಿಗಾಗಿ ಆತ ಒಂದು ಮರದ ಕೆಳಗೆ ಕುಳಿತುಕೊಂಡಾಗ ಹತ್ತಿರದಲ್ಲಿ ಅವನಿಗೆ ಬಂಡೆಯ ಕೆಳಗೆ ಒಂದು ನರಿ ಮಲಗಿರುವುದು ಕಾಣಿಸಿತು. ಆ ನರಿಗೆ ಕಾಲುಗಳಿರಲಿಲ್ಲ. ಕಾಲುಗಳಿಲ್ಲದ ನರಿ ಹೇಗೆ ಬದುಕಬಲ್ಲದು? ಆಹಾರ ಹೇಗೆ ಹುಡುಕಿಕೊಳ್ಳುತ್ತದೆ ಎಂದು ಆ ಮನುಷ್ಯ ವಿಚಾರ ಮಾಡುತ್ತಿರುವಾಗಲೇ ಒಂದು ಆಶ್ಚರ್ಯ ಗಮನಿಸಿದ. […]

ಅಕ್ಕ ಕಂಡ ಚೆನ್ನಮಲ್ಲಯ್ಯನ ಕನಸು…

ಚೆನ್ನಮಲ್ಲಿಕಾರ್ಜುನನ್ನು ಕನಸಿನಲ್ಲಿ ಕಂಡ ಕುರಿತು ಅಕ್ಕ ಮಹಾದೇವಿ ರಚಿಸಿರುವ ಎರಡು ವಚನಗಳು ಇಲ್ಲಿವೆ: ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ.  ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು  ಬಂದೆನ್ನ ನೆರೆದ ನೋಡವ್ವಾ.  ಆತನನಪ್ಪಿಕೊಂಡು ತಳವೆಳಗಾದೆನು.  ಚೆನ್ನಮಲ್ಲಿಕಾರ್ಜುನನ ಕಂಡು  ಕಣ್ಣಮುಚ್ಚಿ ತೆರೆದು ತಳವೆಳಗಾದೆನು.  ~ ಅಕ್ಕ ಕೇಳೌ, ನಾನೊಂದು ಕನಸ ಕಂಡೆ.  ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.  ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು  ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.  ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.  […]

ಈ ಕನಸಿನ ವ್ಯಾಖ್ಯಾನವೇನು?

ಕುರಾನ್ ಬಗ್ಗೆ ತನಗಿರುವಷ್ಟು ಅಗಾಧ ಪಾಂಡಿತ್ಯವನ್ನು ಬೇರಾರಿಗೂ ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನಿದ್ದ. ಚಿಸ್ತಿ ಪೀರ್ ನ ಸೂಫಿಯನ್ನು ವಾದಕ್ಕೆಳೆದು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಮತ್ತು ಅವನನ್ನು ವಾದದಲ್ಲಿ ಸೋಲಿಸಬೇಕೆಂದು ಆತ ಬಯಸಿದ್ದ. ಹಾಗೆಂದೇ ಒಂದು ದಿನ ಅವನು ಸೂಫಿಯಲ್ಲಿಗೆ ಬಂದ. ಆ ಅಹಂಕಾರಿಯ ಆಲೋಚನೆಯನ್ನು ನೋಟದಲ್ಲೇ ಗ್ರಹಿಸಿದ ಸೂಫಿಯು, ಕುರಾನಿನಲ್ಲಿ ಯೂಸಫ಼ನಿಗೆ ಬಿದ್ದಿತೆಂದು ಹೇಳಲಾಗದ ಕನಸನ್ನು ಪ್ರಸ್ತಾಪಿವುದರೊಂದಿಗೆ ತಾನಾಗಿಯೇ ಸಂಭಾಷಣೆಯನ್ನು ಪ್ರಾರಂಭಿಸಿದ. ನಂತರ ಆ ವ್ಯಕ್ತಿಯನ್ನು ಕುರಿತು, “ನನಗೂ ಹಾಗೆಯೇ ಒಂದು ಕನಸು ಬಿದ್ದಿತ್ತು. […]