ಕೋಪ ಬಂದಿದೆಯೇ? ಕನ್ನಡಿ ಮುಂದೆ ನಿಲ್ಲಿ!

ನಮಗೆ ಕೋಪ ಬಂದಾಗ ನಾವು ಮಾಡಬೇಕಾಗಿರುವುದು ಇಷ್ಟೆ, ಒಮ್ಮೆ ಕನ್ನಡಿಯ ಮುಂದೆ ಹೋಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು, ಆಗ ನಾವು ಕೋಪದಿಂದ ಎಷ್ಟು ಮೂರ್ಖರಾಗಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಹಾಗೇ ಒಮ್ಮೆ ನಗುವೂ  ಬರುತ್ತದೆ. ಇದು ಸತ್ಯ….! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಮನುಷ್ಯನಿಗೆ ಎಲ್ಲಾ ತರಹದ ಬಾವನೆಗಳು ಇರುತ್ತವೆ, ಬಾವನೆಗಳೆಂದರೆ ಸಂತೋಷ, ಕೋಪ, ಹೊಟ್ಟೆಕಿಚ್ಚು, ಕೋಪ ಇತ್ಯಾದಿಗಳು. ಆದರೆ ಈ ಎಲ್ಲಾ ಬಾವನೆಗಳಲ್ಲಿ ಕೋಪ ಬಹಳ ವಿಷೇಶವಾದದು. ಕೋಪವು ಮನುಷ್ಯನಿಗೆ ದೇವರು ಕೊಟ್ಟ […]

ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ #1

ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ ~ ಗಾಯತ್ರಿ ಏಷ ಸ್ವಪ್ರತಿಬಿಂಬಸ್ಯ ಸ್ವಯಮಾಲೋಕನೇಚ್ಛಾಯ | ಅತ್ಯಂತನಿರ್ಮಲಾಕಾರಃ ಸ್ವಯಂ ಮುಕುರತಾಂ ಗತಃ ||ಯೋಗ ವಾಸಿಷ್ಠ || ಅರ್ಥ :  ಈ ಬ್ರಹ್ಮವು ತನ್ನ ಪ್ರತಿ ಬಿಂಬವನ್ನು ತಾನೇ ನೋಡಿಕೊಳ್ಳಬೇಕೆಂಬ ಇಚ್ಛೆಯಿಂದ ತಾನೇ ಅತ್ಯಂತ ನಿರ್ಮಲಾಕಾರವಾದ ಕನ್ನಡಿಯಾಯಿತು. { […]

ನನಗೆ ಮಾತ್ರ ಕಷ್ಟವೇ!? : ಅರಳಿಮರ Audio

ನನಗೇ ಯಾಕೆ ಹೀಗಾಗುತ್ತದೆ? ನನಗೇ ಯಾಕೆ ಹೀಗೆ ಮಾಡುತ್ತಾರೆ? ನಾನು ಮಾತ್ರ ಯಾಕೆ ದುಃಖಪಡುತ್ತೇನೆ? ವಂಚನೆಗೊಳಗಾಗುತ್ತೇನೆ? – ಈ ಥರದ ಪ್ರಶ್ನೆಗಳು ಹುಟ್ಟಿಕೊಳ್ಳುವುದೇಕೆ ಗೊತ್ತಾ? ಈ ಆಡಿಯೋ ಕೇಳಿ…

ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ : Morning Mantra

ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ ~ ಗಾಯತ್ರಿ ಈ ದಿನದ Morning Mantra ನಮಗೆ ಸಮಾಜದೊಡನೆ ಬೆರೆಯಲು ಅತ್ಯಂತ ಉಪಯುಕ್ತವಾಗಿರುವಂತದ್ದು. ಆದರೆ, ಅಷ್ಟೇ ಸರಳವೂ ಆಗಿರುವಂಥದ್ದು : “ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ”! ಎದ್ದು, ಮುಖ ತೊಳೆದು ಕನ್ನಡಿ ಮುಂದೆ […]

ಚಿಕ್ಕದೊಂದು ಕದಲುವಿಕೆ ಸಾಕು : ಅರಳಿಮರ POSTER

ಚಿಕ್ಕದೊಂದು ಕದಲುವಿಕೆ ಸಾಕು, ಬಿಂಬ ಕನ್ನಡಿಯಾಚೆ ಹೋಗಲು ~ ಅಲಾವಿಕಾ ಎಲ್ಲ ಸುಖ ದುಃಖಗಳೂ, ಎಲ್ಲ ಘಟನೆಗಳೂ ಕನ್ನಡಿ ಮೇಲಿನ ಬಿಂಬಗಳಷ್ಟೆ. ಯಾವುದೂ ಶಾಶ್ವತವಲ್ಲ. ಪ್ರತಿಯೊಂದೂ ತಾತ್ಕಾಲಿಕ, ಕನ್ನಡಿ ಮೇಲಿನ ಪ್ರತಿಬಿಂಬದಂತೆ. ನಾವು ಅವನ್ನು ಶಾಶ್ವತ ಚಿತ್ರಗಳಂತೆ ಚಿತ್ತ ಭಿತ್ತಿಯ ಮೇಲೆ ತೂಗಿ ಹಾಕಿಕೊಳ್ಳುತ್ತೇವೆ. ಬಂದೊದಗಿದ ದುಃಖ ಶಾಶ್ವತವೋ ಎಂಬಂತೆ ಯಾತನೆ ಪಡುತ್ತೇವೆ. ಸುಖ ಶಾಶ್ವತವೋ ಎಂಬಂತೆ ಮೆರೆದಾಡುತ್ತೇವೆ. ಅಧಿಕಾರ ಶಾಶ್ವತ ಅನಿಸಿಬಿಟ್ಟರೆ, ಅದರ ದುರ್ಬಳಕೆ ಮಾಡುತ್ತೇವೆ. ಅವೆಲ್ಲ ಅದೆಷ್ಟು ಅಳ್ಳಕ ಎಂಬುದು ನಮ್ಮ ಗಮನಕ್ಕೆ ಬರುವುದೇ […]

ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು : ಬೆಳಗಿನ ಹೊಳಹು

“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ.  ಮನಸ್ಸಿನ ಕನ್ನಡಿ ಶುದ್ಧವಾಗಿದ್ದರೆ ಅದರಲ್ಲಿನ ಪ್ರತಿಬಿಂಬವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಜಗತ್ತು ಭಗವಂತನ ಕನ್ನಡಿಯಾದರೆ, ಅದರಲ್ಲಿ ಮೂಡುವ ಪ್ರತಿಬಿಂಬ ಸ್ವತಃ ಭಗವಂತನೇ. ನಾವು ಕೂಡಾ ಜಗತ್ತಿನ ಭಾಗವೇ ಆಗಿರುವುದರಿಂದ, ನಮ್ಮ ಮನಸ್ಸು ಕೂಡಾ ಭಗವಂತನ ಕನ್ನಡಿಯೇ. ಮತ್ತು ಅದರಲ್ಲಿ ಕಾಣುವ ಬಿಂಬ, ಸ್ವಯಂ ಭಗವಂತನದು! ನಮ್ಮ ನಮ್ಮ ಬಿಂಬ ನಮಗೆ ಸ್ಪಷ್ಟವಾಗಿ […]

ಯಾರು ಯಾರಿಗೆ ಕನ್ನಡಿ…!? : ಅರಳಿಮರ POSTER

“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ. ಅಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ ತನ್ನ ಹೃದಯದಾಳಕ್ಕೆ ಧುಮುಕಬೇಕು. ಏಕೆಂದರೆ ನಮ್ಮ ಹೃದಯ ಜಗತ್ತಿನ ಕನ್ನಡಿಯಾಗಿದೆ; ಮತ್ತು ಜಗತ್ತು ಭಗವಂತನ ಕನ್ನಡಿಯಾಗಿದೆ. ನಮ್ಮೊಳಗೆ ಹೊಕ್ಕು ಹುಡುಕಿದರೆ ನಾವು ಯಾವತ್ತೂ ನಂದದ ಬೆಳಕನ್ನು ಹೊಂದುತ್ತೇವೆ, ಭಗವಂತನನ್ನು ಪಡೆಯುತ್ತೇವೆ – ಇದು ಮೇಲಿನ ಸೂಫಿ ಚಿಂತನೆಯ ವಿಸ್ತೃತಾರ್ಥ.  ಸೃಷ್ಟಿ ಮತ್ತು ಭಗವಂತ ಪರಸ್ಪರ ಎದುರುಬದುರಿಟ್ಟ ಕನ್ನಡಿಗಳಂತೆ. ಒಬ್ಬರೊಬ್ಬರ […]

ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. ಚೇತನವು ಆ ಪ್ರತಿಬಿಂಬದೊಡನೆ ಕಲೆತುಹೋಗುತ್ತದೆ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ಚೇತನದ ಗೈರಿನಲ್ಲಿ ದೇಹಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಈ ದೇಹದ ಸಂಪೂರ್ಣ ವ್ಯವಸ್ಥೆಯ ಚಾಲಕ ಶಕ್ತಿ ಏನಿದೆ, ಅದು ಚೇತನವೇ ಆಗಿದೆ. ದೇಹದಲ್ಲಿ […]

ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್‌ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್‌ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ. ಒಂದು ದಿನ ಸಂಜೆಯ […]