ಜ್ಞಾನಿಯ ಪಾಲಿಗೆ ತಾನಿರುವಲ್ಲಿಯೇ ವೃಂದಾವನ : ರಮಣ ಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ: ನಾನು ಬೃಂದಾವನಕ್ಕೆ ಹೋಗಿ ಶ್ರೀಕೃಷ್ಣನ ನಿಜ ರೂಪವನ್ನು ದರ್ಶಿಸಿದರೆ ನನ್ನ ಸಂಕಷ್ಟಗಳೆಲ್ಲ ನಿವಾರಣೆಯಾಗುತ್ತವೆಯೇ? ಅವನ ದರ್ಶನ ಪಡೆದು ನನ್ನೆಲ್ಲ ಭಾರವನ್ನೂ ಅವನಿಗೇ ವಹಿಸಬೇಕೆಂಬ ಇಚ್ಛೆಯಾಗಿದೆ! ರಮಣ ಮಹರ್ಷಿಗಳು : ಅದಕ್ಕೇನಂತೆ! ಹಾಗೆಯೇ ಮಾಡಬಹುದು. ಕೃಷ್ಣನ ದರ್ಶನ ಮಾಡಿದ ನಂತರ ನಮ್ಮ ಎಲ್ಲ ಭಾರವೂ ಅವನ ಮೇಲೆಯೇ ಇರುತ್ತದೆ. ಈಗ ಆ ಚಿಂತೆ ನಿಮಗೇಕೆ? […]