ಜ್ಞಾನ – ಭಕ್ತಿ – ಕರ್ಮಗಳ ತ್ರಿವೇಣೀ ಸಂಗಮ : ಸಾನೆ ಗುರೂಜಿ

ಗಂಗಾ, ಯಮುನಾ, ಸರಸ್ವತೀ ನದಿಗಳ ಸಂಗಮವು ಅತ್ಯಂತ ಪವಿತ್ರವಾದುದೆಂದು ಮನ್ನಣೆ ಪಡೆದಿದೆ. ಈ ತ್ರಿವೇಣೀ ಸಂಗಮವು ಜ್ಞಾನ – ಭಕ್ತಿ – ಕರ್ಮಗಳನ್ನು ಸಂಕೇತಿಸುತ್ತವೆ ಎಂದು ಸಾನೆ ಗುರೂಜಿ ಹೀಗೆ ವಿವರಿಸುತ್ತಾರೆ…. ನದಿಗಳ ಸಂಗಮವು ಶ್ರೇಷ್ಠವಾದದ್ದು, ಪವಿತ್ರವಾದದ್ದು. ಅದ್ವೈತದ ಅನುಭಾವವನ್ನು ಪಡೆದ ಇಬ್ಬರು ಸಂತರ ಭೇಟಿ ಅದೆಷ್ಟು ಅದ್ಭುತವಾಗಿರುತ್ತದೆ ಊಹಿಸಿ! ವಸಿಷ್ಠ – ವಾಮದೇವರ ಭೇಟಿಯಂತೆ, ಗಾಂಧೀಜಿ – ರವೀಂದ್ರರ ಭೇಟಿಯಂತೆ… ಅದೊಂದು ಮಹಾಕಾವ್ಯವೇ ಸರಿ. ಹಾಗೆಯೇ ನದಿಗಳ ಸಂಗಮ ಕೂಡಾ. ಅಥವಾ ನದಿಗಳ ಸಂಗಮದಂತೆಯೇ ಮಹಾತ್ಮರ […]

ದೇವರು ಕಷ್ಟವೇಕೆ ಕೊಡುತ್ತಾನೆ? ನಿಯತಿಯ ತಪ್ಪಿಗೆ ನಾವು ಹೊಣೆಯೇ? : ಅರಳಿಮರ ಸಂವಾದ

ನಾವು ಕಷ್ಟ ಮಾತ್ರವಲ್ಲ, ಸುಖವನ್ನೂ ದೇವರ ತಲೆಯ ಮೇಲೆ ಹೊರಿಸಿ, ಅವನು ಕೊಟ್ಟ ಎಂದುಬಿಡುತ್ತೇವೆ. ಆದ್ದರಿಂದ, ತಪ್ಪು ದೇವರದ್ದಲ್ಲ, ನಮ್ಮದು. ಸುಖವನ್ನು ನಾವು ದೇವರ ಮೇಲೆ ಹೊರಿಸೋದು, ಅದನ್ನು ನಿಭಾಯಿಸುವ ಮತ್ತು ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಷ್ಟೆ. ಹಾಗೆಯೇ ಕಷ್ಟವನ್ನು ದೇವರ ಮೇಲೆ ಹೊರಿಸೋದು, ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು! ~ ಚಿತ್ಕಲಾ ದೇವರು ಕಷ್ಟಗಳನ್ನೇಕೆ ಕೊಡುತ್ತಾನೆ? ಇದು ಅರಳಿಮರದ ಚರ್ಚೆಯಲ್ಲಿ ಓದುಗರಾದ ಲಕ್ಷ್ಮಿಮಧು ಅವರು ಮುಂದಿಟ್ಟ ಪ್ರಶ್ನೆ. ಎಲ್ಲಕ್ಕಿಂತ ಮೊದಲು, ದೇವರು ಅನ್ನುವ ಅಸ್ತಿತ್ವ ಒಂದಿದೆ ಮತ್ತು […]

ಗೋಡೆಗೆಸೆದ ಚೆಂಡಿನಂತೆ ಕರ್ಮ ಮತ್ತು ಕರ್ಮಫಲ : Morning Mantra

ಚೆಂಡನ್ನು ಸರಿಯಾಗಿ ಎಸೆಯುವಷ್ಟೇ, ಅದನ್ನು ಮರಳಿ ಹಿಡಿಯುವುದೂ ಮುಖ್ಯ. ಕರ್ಮ ಮಾಡುವಷ್ಟೇ ಅದರ ಫಲವನ್ನು ಸರಿಯಾಗಿ ಅರಗಿಸಿಕೊಳ್ಳುವುದೂ ಮುಖ್ಯ ~ ಗಾಯತ್ರಿ ಪ್ರತಿ ಮುಂಜಾನೆ ಎದ್ದ ಕೂಡಲೇ ಪ್ರತಿಯೊಬ್ಬರೂ ತಮ್ಮ ತಮ್ಮ ರೂಢಿಗೆ ಅನುಸಾರವಾಗಿ ಮೊದಲ ಕ್ರಿಯೆ ನಡೆಸುತ್ತೀರಲ್ಲವೆ? ಕೆಲವರು ಅಂಗೈ ಉಜ್ಜಿ ಕಣ್ಣಿನ ಮೇಲಿರಿಸಿಕೊಳ್ಳುತ್ತಾರೆ. ಆಯಾ ಧರ್ಮಗಳ ಧಾರ್ಮಿಕ ಪ್ರವೃತ್ತಿಯವರು ತಮ್ಮ ತಮ್ಮ ರಿವಾಜುಗಳಂತೆ ಪ್ರಾರ್ಥಿಸುತ್ತಾರೆ. ಹೊಸ ತಲೆಮಾರಿನ ಜನ ಮೊಬೈಲ್ ನೋಡುತ್ತಾರೆ… ಹೀಗೆ. ಈ ಮೊದಲ ಕ್ರಿಯೆ ಮುಗಿದ ಮೇಲೆ, ಮುಂದಿನ ಕೆಲಸಕ್ಕೆ ಅಣಿಯಾಗುವ […]

ಕರ್ಮಸಿದ್ಧಾಂತ ನಿಜವೇ ಆಗಿದ್ದರೆ, ಕೆಲವು ರೈತರಿಗೆ ಫಲವೇಕೆ ಸಿಗುವುದಿಲ್ಲ? : ಅರಳಿಮರ ಸಂವಾದ

ಸತ್ಕರ್ಮ ಅಥವಾ ದುಷ್ಕರ್ಮ ಅಂದರೆ ಟೇಬಲ್ ಎತ್ತಿಟ್ಟ ಹಾಗೆ ಟಕ್ ಅಂತ ಮಾಡಿದ ಕೆಲಸವಲ್ಲ. ಕಾಯಾ ವಾಚಾ ಮನಸಾ ತೊಡಗಿ ಮಾಡಿದ ಕೆಲಸ. ಅಲ್ಲಿ ನಿಮ್ಮ ಬುದ್ಧಿ ಸರಿಯಾಗಿ ಬಳಕೆಯಾಗಿರಬೇಕು. ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದ್ದರೂ ಆತ ಮೂರ್ಖನಾಗಿದ್ದರೆ, ಫಲಿತಾಂಶ ಹೇಗೆ ಒಳ್ಳೆಯದಾಗಿರಲು ಸಾಧ್ಯ ? ನಾವು ಒಳ್ಳೆಯದು ಎಂಬಂತೆ ಕಾಣುವ ಕರ್ಮವನ್ನು ಪ್ರಜ್ಞಾಪೂರ್ವಕವಾಗಿ ನಡೆಸಿದಾಗ ಮಾತ್ರ, ಅದು ಒಳಿತಿನ ಖಾತೆಗೆ ಸೇರಬೇಕೋ ಕೆಡುಕಿನ ಖಾತೆಗೆ ಸೇರಬೇಕೋ ಅನ್ನುವ ನಿರ್ಧಾರವಾಗುತ್ತದೆ ~ ಚಿತ್ಕಲಾ ಕರ್ಮಸಿದ್ಧಾಂತದ ಪ್ರಕಾರ […]

ಫಲಕ್ಕಿಂತ ಕರ್ಮದಲ್ಲೇ ಹೆಚ್ಚು ಆನಂದ : ಸಾನೆ ಗುರೂಜಿ #6

ನಮಗೆ ಸಂಯಮವೇ ಇಲ್ಲ. ಮಾವಿನ ಓಟೆಯನ್ನು ಹುಗಿದು, ಅದು ಮೊಳೆತಿದೆಯೋ ಇಲ್ಲವೋ ಎಂದು ಪ್ರತಿದಿನವೂ ತೆಗೆದು ನೋಡುತ್ತಿದ್ದ ಬಾಲಕನಂತೆ ನಮ್ಮ ವರ್ತನೆ ಇರುತ್ತದೆ. ಹಾಗೆ ಹುಗಿದ ಓಟೆಯನ್ನು ತೆಗೆದುನೋಡುತ್ತಲೇ ಇದ್ದರೆ ಅದು ಎಂದಿಗಾದರೂ ಚಿಗುರಲು ಸಾಧ್ಯವೇ? ಹಾಗೆಯೇ, ಕರ್ಮಫಲದ ಬಗ್ಗೆ ತಲೆಕೆಡಿಸಿಕೊಂಡು, ಅದನ್ನೇ ಚಿಂತಿಸುತ್ತಿದ್ದರೆ, ಫಲ ದೊರೆಯುವುದು ಸಾಧ್ಯವೇ? ~ ಸಾನೆ ಗುರೂಜಿ ಭಗವದ್ಗೀತೆ ಮುಖ್ಯವಾಗಿ ಕರ್ಮ ಮತ್ತು ಕರ್ಮಫಲತ್ಯಾಗವನ್ನು ಬೋಧಿಸುತ್ತದೆ. ಜ್ಞಾನವಿಜ್ಞಾನಪೂರ್ವಕವಾಗಿ, ನಿಷ್ಠೆಯಿಂದ ಮತ್ತು ಪ್ರೀತಿಯಿಂದ ನಮ್ಮ ಕರ್ಮವನ್ನು – ಅಂದರೆ ಕೆಲಸವನ್ನು ನಾವು ಮಾಡಬೇಕು. […]

ಫಲದ ನಿರೀಕ್ಷೆಯಿಂದಲೇ ಕೆಲಸ ಮಾಡುವಾಗ ಮನಸ್ಸನ್ನು ಸಂಭಾಳಿಸುವುದು ಹೇಗೆ?

ಭಗವದ್ಗೀತೆಯ ಶ್ರೀಕೃಷ್ಣ ಹೇಳಿದಂತೆ ಫಲಾಫಲಗಳ ಬಗ್ಗೆ ಚಿಂತಿಸದೆ ಕೇವಲ ಕರ್ಮವನ್ನು ಮಾಡಬೇಕು. ಆದರೆ ಫಲವನ್ನು ಅಪೇಕ್ಷಿಸಿಯೇ ಒಂದು ಕೆಲಸವನ್ನು ಹಿಡಿದಿರುವಾಗ, ಸಾಹಸಕ್ಕೆ ಕೈಹಾಕಿದಾಗ ಏನು ಮಾಡಬೇಕು? ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ ಇಲ್ಲದೆ ನಾವು ಅದನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಪೂರ್ವ ನಿರ್ಧಾರಿತ ಪರೀಕ್ಷೆಗಳಲ್ಲಿ […]