ಮೈಕೇಲ್ ಏಂಜೆಲೋ ನೀಡಿದ ಉತ್ತರ

ಪ್ರಸಿದ್ಧ ಶಿಲ್ಪ ಕಲಾವಿದ ಮೈಕೇಲ್ ಎಂಜೆಲೋನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಅದೇ ಸಂದರ್ಶಕ ಹಿಂದೆಯೂ ಒಮ್ಮೆ ಬಂದಿದ್ದ. ಅವನು ಬಂದು ಹೋದಾಗಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ವಿವರಿಸಿದ : “ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವ ಹಾಗೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ […]

ಈಜತೊಡಗಿತು ಚಿತ್ರದ ಮೀನು : ಝೆನ್ ಕಥೆ

ಒಬ್ಬ ಪ್ರಸಿದ್ಧ ಕಲಾವಿದನ ಬಳಿ ಯುವ ಕಲಾವಿದನೊಬ್ಬ ಕಲಿಯಲು ಬರುತ್ತಿದ್ದ. ಆ ಯುವ ಕಲಾವಿದನಿಗೆ ಕಲೆ ಅಭಿಜಾತವಾಗಿ ಒಲಿದಿತ್ತು. ಅವನ ಅಪ್ರತಿಮ ಕಲಾ ಪ್ರತಿಭೆ ಕಂಡು ಗುರುವಿಗೆ ಅಸಾಧ್ಯ ಹೊಟ್ಚೆಕಿಚ್ಚು. ಏನಾದರೊಂದು ನೆಪ ಹುಡುಕಿ ಆ ಯುವ ಕಲಾವಿದನ ಮೇಲೆ ಹರಿ ಹಾಯುತ್ತಿದ್ದ. ಚಿತ್ರ ಬರಿಯಲಿಕ್ಕಲ್ಲ, ಮನೆಗೆ ಸುಣ್ಣ ಹಚ್ಚುವುದಕ್ಕೆ ಲಾಯಕ್ಕು ನೀನು ಎಂದು ಮಾತು ಮಾತಿಗೆ ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದ. ಕ್ರಮೇಣ ಆ ಯುವ ಕಲಾವಿದನ ಆತ್ಮವಿಶ್ವಾಸ ಕಡಿಮೆಯಾಗತೊಡಗಿತು. ಒಂದು ದಿನ ಗೋಲ್ಡ್ ಫಿಶ್ […]

ಶಾಂತಿಯನ್ನು ಬಿಂಬಿಸುವ ಚಿತ್ರ ಯಾವುದು?

ಶಾಂತಿಯ ಅರ್ಥವನ್ನು ಬಿಂಬಿಸುವ ಅತ್ಯುತ್ತಮ ಚಿತ್ರವನ್ನು ರಚಿಸುವ ಕಲಾವಿದನಿಗೆ ಸಾವಿರ ಹೊನ್ನಿನ ವರಹಗಳನ್ನು ಬಹುಮಾನ ಕೊಡುವುದಾಗಿ ರಾಜನೊಬ್ಬ ಘೋಷಿಸಿದ. ದೇಶದುದ್ದಗಲ ಇದ್ದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಲಾವಿದರು ಬಿಡಿಸಿದ  ಚಿತ್ರಗಳನ್ನು ರಾಜ ವೀಕ್ಷಿಸಿದ. ಅವುಗಳ ಪೈಕಿ ಅವನಿಗೆ ಬಹಳ ಮೆಚ್ಚುಗೆ ಆಗಿದ್ದು ಎರಡು ಚಿತ್ರಗಳು ಮಾತ್ರ. ಅವುಗಳಲ್ಲಿ ಒಂದನ್ನು ಆತ ಆಯ್ಕೆ ಮಾಡಬೇಕಿತ್ತು. ಪ್ರಶಾಂತ ಸರೋವರದ ಚಿತ್ರ ಮೊದಲನೆಯದು. ಸರೋವರದ ಸುತ್ತಲೂ ಇದ್ದ ಪರ್ವತಶ್ರೇಣಿಯ ಪರಿಪೂರ್ಣ ಪ್ರತಿಬಿಂಬ ಅದರಲ್ಲಿ ಗೋಚರಿಸುತ್ತಿತ್ತು. ಮೇಲಿದ್ದ ನೀಲಾಕಾಶ ಹಾಗು ಅದರಲ್ಲಿದ ಹತ್ತಿಯ ರಾಶಿಯನ್ನು […]