ಮನಸ್ಸು ಮತ್ತು ಬುದ್ಧಿ ; ನಮ್ಮೊಳಗಿನ ಅಂತರ್ಯುದ್ಧ…

ಮನಸ್ಸಿನ ಮಾತು ಎಂಬುದು ಎಂದಿಗೂ ಇರುವುದಿಲ್ಲ. ನಮ್ಮ ಮೆದುಳೇ ನಮ್ಮ ಮನಸ್ಸು. ಇದನ್ನು ನಾವು ಮೊದಲು ಅರಿಯಬೇಕು ~ ಪ್ರಣವ ಚೈತನ್ಯ  | ಕಲಿಕೆಯ ಟಿಪ್ಪಣಿಗಳು ಪ್ರತಿಯೊಬ್ಬರಿಗೂ ಯಾವುದಾದರೂ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಎರಡು ರೀತಿಯ ಆಲೋಚನೆಗಳು ಬಂದೇ ಬರುತ್ತವೆ. ಒಂದು ಒಳ್ಳೆಯ ಯೋಚನೆ, ಇನ್ನೊಂದು ಕೆಟ್ಟ ಯೋಚನೆ. ನಮ್ಮೊಳಗೆ ಒಮ್ಮೊಮ್ಮೆ ನಮ್ಮದೇ ಇನ್ನೊಂದು ದ್ವನಿ ಮೂಡುತ್ತದೆ. ಎಲ್ಲರಿಗೂ ಈ ಅನುಭವವಾಗಿರುತ್ತದೆ. ಅದು ಇಂತಹದನ್ನು ಮಾಡಬೇಡ, ಈ ಕೆಲಸ ಮಾಡಲು ಬಹಳ ಕಷ್ಟ ಎಂದು ನಮಗೆ ಹೇಳುತ್ತದೆ. […]

ಕಲಿಸುವಿಕೆ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 17

ಶಿಕ್ಷಕನೊಬ್ಬ ಕಲಿಸುವಿಕೆಯ ಬಗ್ಗೆ ಮಾಡಿದ ಪ್ರಶ್ನೆಗೆ ಅವನು ಉತ್ತರಿಸತೊಡಗಿದ. ನಿಮ್ಮ ತಿಳುವಳಿಕೆಯ ಸೂರ್ಯ ಅಂಬೆಗಾಲಿಡುತ್ತಿರುವಾಗ ಇನ್ನೂ ಅರೆನಿದ್ದೆಯಲ್ಲಿರುವುದನ್ನು ಬಿಟ್ಟು, ಬೇರೆ ಯಾವುದನ್ನೂ, ಯಾರೂ ನಿಮಗೆ ಹೇಳಿಕೊಡಲಿಕ್ಕಾಗುವುದಿಲ್ಲ. ದೇವಸ್ಥಾನದ ನೆರಳಲ್ಲಿ, ಸುತ್ತ ಮುತ್ತ ಶಿಷ್ಯರನ್ನೊಡಗೂಡಿ ನಡೆಯುತ್ತಿರುವ ಶಿಕ್ಷಕ ತನ್ನ ನಂಬಿಕೆ ಮತ್ತು ಪ್ರೇಮಭಾವವನ್ನು ಹೊರತುಪಡಿಸಿ ನಿಮಗೆ ಬೇರೆ ಯಾವ ತಿಳುವಳಿಕೆಯನ್ನೂ ಹೇಳಿಕೊಡುವುದಿಲ್ಲ. ಅವನು ತಿಳುವಳಿಕೆಯುಳ್ಳವನಾಗಿದ್ದರೆ ಬಾಗಿಲು ತೆರೆದು ನಿಮ್ಮನ್ನು ತನ್ನ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ, ಬದಲಾಗಿ, ನಿಮ್ಮನ್ನು ನಿಮ್ಮ ಮನದ ಹೊಸ್ತಿಲವರೆಗೆ ಎಳೆದುಕೊಂಡು ಹೋಗಿ ನಿಲ್ಲಿಸುತ್ತಾನೆ. ಖಗೋಳ ಶಾಸ್ತ್ರಜ್ಞ, ಆಕಾಶದ […]

ಶ್ರವಣ ಪರಂಪರೆ : ಕೇಳುವ ಮೂಲಕ ಕಲಿಯುವುದು

ಪ್ರಾಚೀನ ಗುರುಕುಲಗಳಲ್ಲಿ ಕೂಡ ಕಲಿಕೆಯು ಶ್ರವಣ ಮಾಧ್ಯಮವನ್ನೇ ಅವಲಂಬಿಸಿತ್ತು. `ಯಾವುದನ್ನು ಕೆಳಿ ತಿಳಿದುಕೊಳ್ಳಲಾಗುತ್ತದೆಯೋ ಅದು ಅಧಿಕೃತ ಜ್ಞಾನ. ಅಕ್ಷರದಲ್ಲಿ ಬರೆದಿಟ್ಟದ್ದು ಅವಲಂಬಿತ ಜ್ಞಾನ’ ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತು. ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ ನೀಡಲಾಗಿತ್ತು. ಅಸುರನ ಮಗನಾಗಿ ಹುಟ್ಟಿದರೂ ಪ್ರಹ್ಲಾದ ಹರಿಭಕ್ತನಾಗಿದ್ದು ಹೇಗೆ ಗೊತ್ತೇ? ಕುರುಕ್ಷೇತ್ರಯುದ್ಧದ ಸಮಯದಲ್ಲಿನ್ನೂ ಹದಿನಾರರ ಹುಡುಗನಾಗಿದ್ದ ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ಹೇಗೆ ಗೊತ್ತೆ? ಹೋಗಲಿ, ಕೃಷ್ಣನನ್ನು ನೋಡದೆಯೇ […]