ಕಲ್ಲುಕುಟಿಗ ಹಶ್ನು, ಮತ್ತೆ ಕಲ್ಲುಕುಟಿಗನಾಗಿದ್ದು : ಒಂದು ಜಪಾನಿ ಜನಪದ ಕಥೆ

ಒಂದೂರಲ್ಲಿ ಹಶ್ನು ಎಂಬ  ಕಲ್ಲುಕುಟಿಗನಿದ್ದ. ಉಂಡುಟ್ಟು ಹೆಂಡತಿ ಮಕ್ಕಳ ಜೊತೆ ಚೆನ್ನಾಗಿಯೇ ಇದ್ದ. ಆದರೂ  ಅವನಿಗೆ ಜೀವನದಲ್ಲಿ ಸಂತೃಪ್ತಿ ಅನ್ನೋದೇ ಇರಲಿಲ್ಲ. ಯಾವಾಗಲೂ ಅವನು ನಾನು ಅದಾಗಿದ್ದಿದ್ದರೆ… ಇದಾಗಿದ್ದಿದ್ದರೆ… ಅಂತ ಕನಸು ಕಾಣುತ್ತ ಇರುತ್ತಿದ್ದ. ಹೀಗೆ ಒಂದು ದಿನ ಹಶ್ನುವಿಗೆ “ನಾನು ರಾಜಕುಮಾರನಾಗಿರಬೇಕಿತ್ತು…” ಅನ್ನುವ ಆಸೆ ತೀವ್ರವಾಗಿ ಕಾಣಿಸಿಕೊಂಡಿತು. ಅದೇನು ಘಳಿಗೆಯೋ ಏನೋ ಮರುಕ್ಷಣ ಅವನು ರಾಜಕುಮಾರನಾಗಿಬಿಟ್ಟ. ಕಲ್ಲುಕುಟಿಗ ಹಶ್ನು, ರಾಜಕುಮಾರನಾಗಿ ತನ್ನ ಸಂಪತ್ತು – ಅಧಿಕಾರಗಳ ಬಗ್ಗೆ ಸಂಭ್ರಮಿಸುತ್ತಾ, ತನ್ನ ಅರಮನೆ ಮಾಳಿಗೆ ಮೇಲೆ ನಿಂತುಕೊಂಡಿದ್ದ. […]