ಕೊರೋನಿಸಳ ದೆಸೆಹಯಿಂದ ಕಪ್ಪಾಯಿತು ಕಾಗೆ  :  ಗ್ರೀಕ್ ಪುರಾಣ ಕಥೆಗಳು  ~ 32

ಅಪೋಲೋಗೆ ಕೊರೊನಿಸಾಳ ಅನ್ಯಮನಸ್ಕತೆ ಅನುಮಾನ ತರಿಸಿತ್ತು. ಅವನು ತನ್ನ ನೆಚ್ಚಿನ ಪಕ್ಷಿಯಾದ ಕಾಗೆಯನ್ನು ಅವಳ ಮೇಲೆ ಕಣ್ಣಿಡಲು ನೇಮಿಸಿದ್ದ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಥೆಲಿಸಿ ರಾಜ್ಯವನ್ನು ಆಳುತ್ತಿದ್ದ ಫ್ಲೆಜಿಯಸ್ ಎಂಬ ರಾಜನ ಮಗಳು ಕೊರೋನಿಸಾ. ಇವಳು ಸುಂದರಿಯೂ ಕಲಾವಿದೆಯೂ ಆಗಿದ್ದಳು. ಕೊರೋನಿಸಾಳ ಸೌಂದರ್ಯಕ್ಕೆ ಕಾವ್ಯ ಹಾಗೂ ಸಂಗೀತಾಭಿಮಾನಿ ದೇವತೆಯಾದ ಅಪೋಲೋ ಕೂಡಾ ಮರುಳಾಗಿದ್ದನು. ಅವಳಲ್ಲಿ ಮೋಹಗೊಂಡು, ಮನವೊಲಿಸಿ ತನ್ನ ಪ್ರೇಯಸಿಯನ್ನಾಗಿ ಮಾಡಿಕೊಂಡನು. ಕೊರೊನಿಸಾಳಿಗೆ ಅಪೋಲೋನ ಸಹವಾಸ ಹೆಮ್ಮೆಯ ವಿಷಯವಾಗಿತ್ತು. ಸ್ವರ್ಗಲೋಕದ ದೇವಸಭೆಯ ಪ್ರತಿಷ್ಠಿತ […]

ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು. ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು. ಈ ಎಲ್ಲ […]