ಕಥಾ ಸರಿತ್ಸಾಗರ : ಶಿವನು ಸ್ಮಶಾನವಾಸಿಯಾಗಿದ್ದು ಯಾಕೆ? : ಕಾಣಭೂತಿ ಹೇಳಿದ ಕಥೆ

ವಿಂಧ್ಯಾಟವಿಯಲ್ಲಿ ಕಾಣಭೂತಿ ಮತ್ತು ವರರುಚಿಯ ಭೇಟಿಯಾಯಿತು. ವರರುಚಿಯು ಕಾಣಭೂತಿಯ ಬಗ್ಗೆ ವಿಚಾರಿಸಿದಾಗ, ಅವನು ಶಿವ ಪಾರ್ವತಿಯರಿಂದ ತನ್ನ ಬಗ್ಗೆ ತನಗೆ ತಿಳಿದುಬಂದ ವಿಷಯಗಳನ್ನು ಹೇಳತೊಡಗಿದನು. ಅದರ ಜೊತೆಗೆ ಶಿವಪಾರ್ವತಿಯರು ಸೃಷ್ಟಿಯ ಬಗ್ಗೆ ನಡೆಸಿದ ಸಂವಾದವನ್ನೂ ಅವನು ಯಥಾವತ್ತಾಗಿ ಹೇಳಿದನು. ಪ್ರಳಯ ಉಂಟಾಗಿ ಯುಗಾಂತಗೊಂಡಾಗ ಎಲ್ಲೆಲ್ಲೂ ನೀರೇ ತುಂಬಿಕೊಂಡಿತ್ತು. ಆಗ ಶಿವನು ತನ್ನ ತೊಡೆಯನ್ನು ಸೀಳಿ ರಕ್ತದ ಹನಿಯೊಂದನ್ನು ಅದರಲ್ಲಿ ಬೀಳಿಸಿದನು. ನೀರಲ್ಲಿ ಬಿದ್ದ ಆ ಹನಿಯು ಮೊಟ್ಟೆಯಾಯಿತು. ಅದನ್ನು ಎರಡು ಭಾಗಗಳಾಗಿ ಒಡೆದಾಗ ಒಂದು ಭಾಗದಿಂದ ಪುರುಷನೂ […]

ಕಥಾ ಸರಿತ್ಸಾಗರ : ವರರುಚಿಯಾದ ಪುಷ್ಪದಂತ ಮತ್ತು ಕಾಣಭೂತಿಯಾದ ಸುಪ್ರತೀಕರ ಭೇಟಿ

ಕಥೆಗಳನ್ನು ಕದ್ದು ಕೇಳಿದ ಪುಷ್ಪದಂತ ಮತ್ತು ಆತನ ಪರವಹಿಸಿದ ಮಾಲ್ಯವಂತರು ಪಾರ್ವತಿಯಿಂದ ಶಾಪ ಪಡೆದುದನ್ನೂ ಕಾಣಭೂತಿ ಎಂಬ ಪಿಶಾಚದೊಡನೆ ವ್ಯವಹರಿಸುವ ಮೂಲಕ ಶಾಪವಿಮೋಚನೆ ಆಗುವುದೆಂಬ ಅಭಯ ಪಡೆದುದನ್ನೂ ಹಿಂದಿನ ಕಥೆಯಲ್ಲಿ ಓದಿದ್ದೀರಿ. ಈಗ ಶಪಿತ ಪುಷ್ಪದಂತನು ಭೂಮಿಯಲ್ಲಿ ಎಲ್ಲಿ ಹುಟ್ಟಿದನು, ಮತ್ತು ಕಾಣಭೂತಿಯನ್ನು ಭೇಟಿಯಾದಾಗ ನಡೆದುದೇನು ಎಂದು ನೋಡೋಣ. ಪಾರ್ವತಿಯಿಂದ ಶಾಪ ಪಡೆದ ಪುಷ್ಪದಂತನು ಕೌಶಾಂಬಿ ಎಂಬ ಮಹಾನಗರದಲ್ಲಿ ಕಾತ್ಯಾಯನ ವಂಶದಲ್ಲಿ ವರರುಚಿ ಎಂಬ ಹೆಸರಿನಿಂದ ಹುಟ್ಟಿದನು ಹಾಗೂ ಮಾಲ್ಯವಂತನು ಸುಪ್ರತಿಷ್ಠಿತ ಎಂಬ ನಗರದಲ್ಲಿ ಗುಣಾಢ್ಯನೆಂಬ ಹೆಸರಿನಿಂದ […]