ಇಂದು ಹೋಳಿಹುಣ್ಣಿಮೆ. ಇದು ಕಾಮನ ಹುಣ್ಣಿಮೆ ಎಂದೂ ಕರೆಯಲ್ಪಡುತ್ತದೆ. ಈ ದಿನ ಕಾಮದೇವನ ಪ್ರತಿಕೃತಿ ದಹಿಸಿ, ಕೆಟ್ಟ ಕಾಮನೆಗಳನ್ನು ತ್ಯಜಿಸುವ ಮತ್ತು ಸತ್ ಕಾಮನೆಗಳನ್ನು ಪೋಷಿಸಿಕೊಳ್ಳುವ ಸಂಕಲ್ಪ ತೊಡಬೇಕು.
ಹಲವು ಸಂಭ್ರಮಗಳ ಹಬ್ಬ : ಹೋಳಿ ಹುಣ್ಣಿಮೆ
ಆಶೆಯನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ! : ರಾಮತೀರ್ಥ ವಿಚಾರಧಾರೆ
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಗ್ಂ ಸಮಾಃ | …… ಮಾ ಗೃಧಃ ಸ್ವಿದ್ಧನಮ್ || (ಈಶಾವಾಸ್ಯ ಉಪನಿಷತ್) “ಕರ್ಮವನ್ನು ಮಾಡುತ್ತಲೇ ನೂರು ವರ್ಷಗಳು ಇಲ್ಲಿ ಬದುಕುವುದಕ್ಕೆ ಬಯಸಬೇಕು. (ಅದರ ಹೊರತಾಗಿ) ಯಾರ ಧನವನ್ನೂ ಬಯಸಬೇಡ” ಎಂದು ವೇದಾಂತವು ಹೇಳಿದೆ. ಈ ಮೂಲಕ ಅದು, ಯಾವಾಗಲೂ ಕ್ರಿಯಾಶೀಲರಾಗಿರಿ ಎಂದು ಸೂಚಿಸುತ್ತಿದೆ. ವೇದಾಂತದ ಪ್ರಕಾರ ಆಶೆಯನ್ನು ಒಮ್ಮೆಗೇ ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ. ಆಶೆಯಲ್ಲಿ ತಪ್ಪಿಲ್ಲ. ಆದರೆ ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಇಷ್ಟಕ್ಕೂ ಆಶೆ ಎಂದರೆ […]
‘ಕಾಮ’ವೆಂದರೆ ಲೈಂಗಿಕತೆಯಲ್ಲ; ಅದು ಸೃಷ್ಟಿಯ ಚಾಲಕ ಶಕ್ತಿ
ಕಾಮ ಸೃಷ್ಟಿಯ ಕೇಂದ್ರಬಿಂದು. ಕ್ಷಣಕ್ಷಣವೂ ಕ್ಷಯವಾಗುತ್ತಲೇ ಇರುವ ಸೃಷ್ಟಿಯನ್ನು ಸಮತೋಲನದಲ್ಲಿ ಇಡಲು ಕಾಮದ ಇರುವು ಅತ್ಯಗತ್ಯ. ಇದು ಕೇವಲ ಜೀವಿಗಳ ಸಂಖ್ಯೆಯ ಹೆಚ್ಚಳಕ್ಕೆ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮೊದಲಾದ ಸಂಗತಿಗಳಿಗೂ ಅನ್ವಯ. “ಹೀಗಾಗಬೇಕು, ಇಷ್ಟಾಗಬೇಕು” ಅನ್ನುವ ಕಾಮನೆಯೇ ಇಲ್ಲದೆ ಆ ನಿಟ್ಟಿನಲ್ಲಿ ಪ್ರಯತ್ನವಾಗಲೀ ಕಾರ್ಯವಾಗಲೀ ಸಾಧ್ಯವಿಲ್ಲ. ಹೀಗಾಗಿ ಕಾಮ ಒಟ್ಟಾರೆಯಾಗಿ ಸೃಷ್ಟಿಯನ್ನು ಕಾಯುವ ಊರುಗೋಲು. ~ ಸಾ.ಹಿರಣ್ಮಯಿ ~ ಸಾ.ಹಿರಣ್ಮಯೀ ಪರಬ್ರಹ್ಮವು “ಒಬ್ಬನೇ ಇರುವ ನಾನು ಮತ್ತಷ್ಟು ರೂಪಗಳಲ್ಲಿ ವಿಸ್ತರಣೆಗೊಳ್ಳುತ್ತೇನೆ” ಎಂದು ಬಯಸಿತು. ಆ ಬಯಕೆಯೊಂದಿಗೇ ‘ಕಾಮ’ […]
ಬ್ರಹ್ಮ ದೇವನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 6 ಅಪರೂಪದ ಮಾಹಿತಿ : ಅರಳಿಮರ ಪರಿಚಯ ಚಿತ್ರಿಕೆ
ಬ್ರಹ್ಮದೇವ ಸರಸ್ವತಿಯನ್ನು ಮದುವೆಯಾಗಿದ್ದೇಕೆ? ಭೃಗು ಮುನಿ ಬ್ರಹ್ಮನಿಗೆ ಕೊಟ್ಟ ಶಾಪವೇನು? ಬ್ರಹ್ಮನ ಜೀವಿತಾವಧಿ ಎಷ್ಟು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…. ತ್ರಿಮೂರ್ತಿಗಳಲ್ಲಿ ಬ್ರಹ್ಮನ ಸ್ಥಾನವೇನು? ಬ್ರಹ್ಮ ತನ್ನ ಮಗಳನ್ನೇ ಮದುವೆಯಾಗಿದ್ದೇಕೆ? ಬ್ರಹ್ಮನಿಗೇಕೆ ಪೂಜೆಯಿಲ್ಲ? ಬ್ರಹ್ಮ ಕಪಾಲ ಎಂದರೇನು? ಬ್ರಹ್ಮನ ಮಕ್ಕಳು ಯಾರು? ಬ್ರಹ್ಮನ ಜೀವಿತಾವಧಿ ಎಷ್ಟು?
ಮದುವೆ ಎಂದರೆ ಇಷ್ಟೇ; ಪ್ರೀತಿ…. ಪ್ರೀತಿ…. ಮತ್ತು, ಪ್ರೀತಿ….!! ~ ಓಶೋ ಧಾರೆ
ಪರಸ್ಪರರನ್ನು ಕಂಡಾಗ ಉಂಟಾಗುವ ಆನಂದಾನುಭೂತಿ, ಸಹಜವಾಗಿ ಕೂಡುವುದರಿಂದ ಅನುಭವಿಸುವ ಪರಮಾನಂದ, ಶಾಂತಿ – ಸಮಾಧಾನಗಳೇ ಪ್ರೀತಿ. ನಿಜವಾದ ಪ್ರೀತಿ ಕಾಮವಿಕಾರವಲ್ಲ. ಅದು ಭಾವನಾತ್ಮಕವೂ ಅಲ್ಲ. ಪ್ರೀತಿ ನಿಮ್ಮ ಪರಿಪೂರ್ಣ ಅಂತರಂಗವನ್ನು ಪ್ರವೇಶಿಸಿ ನಿಮ್ಮನ್ನು ಪೂರ್ಣಗೊಳಿಸುವ ಉಪಸ್ಥಿತಿ. ಒಬ್ಬರ ಇರುವಿಕೆ, ನಿಮ್ಮನ್ನು ಪರಿಪೂರ್ಣ ವ್ಯಕ್ತಿಯಾಗಿಸುವ ಪ್ರಕ್ರಿಯೆ ~ ಓಶೋ ರಜನೀಶ್ ಪ್ರಬುದ್ಧ ದಾಂಪತ್ಯವೆಂದರೆ ಗಂಡನು ಹೆಂಡತಿಯೊಡನೆ ಸದಾ ಕಾವ್ಯಮಯವಾಗಿರುವುದು ಎಂದಲ್ಲ. ಜೀವನವನ್ನು ಯಥಾವತ್ತಾಗಿ ಅರಿಯುವುದು, ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು, ನಿಭಾಯಿಸುತ್ತಾ ಜೀವನ ಸಾಗಿಸುವುದು. ಗಂಡ – ಹೆಂಡತಿ ಪರಸ್ಪರ […]
ಕಾಮ : ಮಿತಿಯಲ್ಲಿದ್ದರೆ ಉನ್ನತಿ, ಅತಿಯಾದರೆ ಅವನತಿ
ಮನದಲ್ಲಿ ನಿರಂತರವಾಗಿ ಕಾಮ ವಿಲಾಸದ ಚಿತ್ರಗಳ ಕಲ್ಪನೆಯಲ್ಲೇ ಮುಳುಗಿದ್ದರೆ ಅದು ಕಾಮವೆನಿಸುವುದಿಲ್ಲ, ರೋಗವೆನಿಸುತ್ತದೆ. ಹಸಿವು ಬಾಯಾರಿಕೆಯಂತೆ ಕಾಮವೂ ಕೂಡ ಒಂದು ಸಹಜ ಸಂವೇದನೆ. ಹಸಿದಾಗ ಊಟ ಮಾಡುತ್ತೇವೆ ಮಿತಿಮೀರಿ ಯಾವಾಗಲೂ ಹಸಿವಾಗುತ್ತಿಲ್ಲೇ ಇದ್ದರೆ ಅದನ್ನು ರೋಗವೇನ್ನಬೇಕಾಗುತ್ತದೆ. ಇದರಂತೆಯೇ ಯಾವಾಗಲೂ ಕಾಮದ ವಿಲಾಸದ ಕಲ್ಪನೆಯಲ್ಲೇ ಮುಳುಗಿದ್ದರೆ, ಅದು ರೋಗವೆನಿಸುತ್ತದೆ ~ ಅಪ್ರಮೇಯ ಹಸಿವು, ನಿದ್ರೆ, ಬಾಯಾರಿಕೆ ಭಯದಂತೆ ಕಾಮವೂ ಕೊಡ ಮಾನವನ ಸ್ವಾಭಾವಿಕ ಸಹಜ ಸಂವೇದನೆ. ಈ ಸಂವೇದನೆಗಳು ಎಲ್ಲಾ ಪ್ರಾಣಿಪಕ್ಷಿಗಳಿಗೂ ಇರತಕ್ಕವುಗಳೇ. ಅವು ಈ ಸಂವೇದನೆಗಳನ್ನು ನಿರ್ಲಕ್ಷಿಸಿ ತೃಪ್ತಿಯಿಂದ […]