ಬ್ರಹ್ಮಲೋಕದಲ್ಲಿ ಮಹಾರಾಜ ಕುಕುದ್ಮಿ ಮತ್ತು ರೇವತಿ

ಕುಕುದ್ಮಿ ಎಂಬ ಅರಸನಿಗೆ ರೇವತಿ ಎಂಬ ಮಗಳಿರುತ್ತಾಳೆ. ರೂಪ ಗುಣಗಳಲ್ಲಿ ಅಪ್ರತಿಮಳಾದ ಆಕೆಯನ್ನು ಮದುವೆಯಾಗಲು ಬಯಸಿ ಸುತ್ತಲಿನ ಹಲವು ರಾಜಕುಮಾರರು ಒಕ್ಕಣೆ ಕಳುಹಿಸಿರುತ್ತಾರೆ. ಅವರೆಲ್ಲರೂ ಒಬ್ಬರಿಗಿಂತ ಒಬ್ಬರು ಶೂರರೂ ಧೀರರೂ ಸುಂದರರೂ ಆಗಿದ್ದು, ಸೂಕ್ತ ವರನ ಆಯಕೆಯಲ್ಲಿ ತಂದೆ ಮಗಳಿಬ್ಬರೂ ಸೋಲುತ್ತಾರೆ. ಕುಕುದ್ಮಿಗೆ ತನ್ನ ಮಗಳ ಹಣೆಯಲ್ಲಿ ಯಾರ ಹೆಸರು ಬರೆಯಲಾಗಿದೆಯೋ ಆತನೇ ಮದುವೆಯಾಗುವನು. ಆದರೆ ಬ್ರಹ್ಮ ದೇವ ಯಾರನ್ನು ಆಕೆಯ ಪತಿಯನ್ನಾಗಿ ಬರೆದಿರಬಹುದು? ಎಂಬ ಕುತೂಹಲ ಉಂಟಾಗುತ್ತದೆ. ಸೂಕ್ತನಾದ ವರ ತಾನಾಗಿಯೇ ಬರುವವರೆಗೆ ಕಾಯುವುದಕ್ಕಿಂತ ಒಮ್ಮೆ […]