ಕುಡುಕನನ್ನು ಕೊಂದಿದ್ದು ನೀರೋ ಮದ್ಯವೋ? : ನಸ್ರುದ್ದೀನ್ ಕಥೆ

ಒಂದೂರಿನಲ್ಲಿ ಒಬ್ಬ ಮಹಾ ಕುಡುಕನಿದ್ದ. ಅವನ ಹೆಂಡತಿ ಅವನಿಗೆ ಕುಡಿತ ಬಿಡುವಂತೆ ಯಾವಾಗಲೂ ಒತ್ತಾಯಿಸುತ್ತಿದ್ದಳು. ಒಂದು ದಿನ ಗಾಬರಿಯಿಂದ ಅವನ ಬಳಿ ಓಡಿ ಬಂದು, “ಇಲ್ಲಿ ನೋಡು. ನಿಮ್ಮೂರಿನವನೊಬ್ಬ ವಿಪರೀತ ಕುಡಿದು ದೋಣಿ ನಡೆಸುವಾಗ ನೀರಿಗೆ ಬಿದ್ದು ಸತ್ತನಂತೆ. ಒಳ್ಳೇ ಮಾತಿನಲ್ಲಿ ಹೇಳುತ್ತಿದ್ದೇನೆ, ಇನ್ನಾದರೂ ಕುಡಿಯೋದು ಬಿಡು!” ಎಂದು ಬೈಯತೊಡಗಿದಳು.  ಆ ಕುಡುಕನಿಗೂ ಮುಲ್ಲಾ ನಸ್ರುದ್ದೀನನಿಗೂ ಒಳ್ಳೇ ಗೆಳೆತನ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಸ್ರುದ್ದೀನ್ ಕಿವಿಗೆ ಅವರ ಸಂಭಾಷಣೆ ಬಿತ್ತು. “ಏನು ವಿಷಯ?” ಎಂದು ವಿಚಾರಿಸಿದ. […]