ಕುರು ಕುಲದ ವಂಶಾವಳಿ : ಮಹಾಭಾರತ, ನಮಗೆಷ್ಟು ಗೊತ್ತು?

ಮಹಾಭಾರತ ಮತ್ತು ಪುರಾಣಗಳಲ್ಲಿ ಕಂಡುಬರುವಂತೆ, ಕುರುಕುಲದ ವಂಶಾವಳಿ ಇಲ್ಲಿದೆ… ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆ ಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಚಿತ್ರಾಂಗದನು ಯೌವನ ಪ್ರಾಪ್ತಿಯಾಗುವುದರೊಳಗೇ ಗಂಧರ್ವನೋರ್ವನಿಂದ ಹತನಾದನು. ನಂತರ ವಿಚಿತ್ರವೀರ್ಯನು ರಾಜನಾದನು. ವಿಚಿತ್ರವೀರ್ಯನು ಕಾಶಿರಾಜ ಮತ್ತು ಕೌಶಲ್ಯಳ ಪುತ್ರಿಯರೀರ್ವರನ್ನು ವಿವಾಹವಾದನು: […]