ಧಾರ್ಮಿಕರಾಗಿರುವುದೆಂದರೆ ಪ್ರಶ್ನೆಗಳನ್ನು ಕೇಳದೆ ಇರುವುದಲ್ಲ…

ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು ~ ಅಚಿಂತ್ಯ ಚೈತನ್ಯ ಧಾರ್ಮಿಕ ನಂಬಿಕೆಗಳು ಪ್ರಶ್ನಿಸುವುದಕ್ಕೆ, ಅಧ್ಯಯನ ನಡೆಸುವುದಕ್ಕೆ ಅಡ್ಡಿಯಾಗಿವೆ ಎಂದು ಭಾವಿಸಲಾಗುತ್ತದೆ. ಹಾಗೆ ನೋಡಿದರೆ ಧಾರ್ಮಿಕರಾಗಿರುವುದು ಪ್ರಶ್ನಿಸುವುದಕ್ಕೆ ಒಂದು ಅಡ್ಡಿಯಲ್ಲ. ಭಗವದ್ಗೀತೆಯ ಉದ್ದಕ್ಕೂ ಇದು ಸ್ಪಷ್ಟವಾಗಿದೆ. ಒಬ್ಪ ಆಸ್ತಿಕನಾಗಿದ್ದೂ ಯಾವ ಮಟ್ಟದ ಪ್ರಶ್ನೆಗಳನ್ನು ಕೇಳಬಹುದು ಎಂಬುದಕ್ಕೆ ಅರ್ಜುನ ಎತ್ತುವ ಪ್ರಶ್ನೆಗಳೇ ಸಾಕ್ಷಿ. ಈ ಕ್ಷಣವೇ ಅರ್ಜುನ ಯುದ್ಧರಂಗವನ್ನು […]

ಶ್ರೀಕೃಷ್ಣ, ಅರ್ಜುನನ ಗರ್ವಭಂಗ ಮಾಡಿದ ಕಥೆ

ಭಕ್ತವತ್ಸಲನಾದ ಶ್ರೀಕೃಷ್ಣ ತನ್ನ ಶಿಷ್ಯನೂ ಸಖನೂ ಆದ ಅರ್ಜುನ ಅಹಂಕಾರದಿಂದ ದಾರಿ ತಪ್ಪದಂತೆ ಸಕಾಲದಲ್ಲಿ ಗರ್ವಭಂಗ ಮಾಡಿ ಪಾಠ ಕಲಿಸಿದ್ದು ಹೀಗೆ… ಯಮುನಾ ನದೀತೀರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರು ಕುಳಿತು ಸಂಭಾಷಿಸುತ್ತಿದ್ದರು. ಶ್ರೀಕೃಷ್ಣನು ಅರ್ಜುನನಿಗೆ, ‘ಕೌರವರೊಂದಿಗೆ ಯುದ್ಧವು ನಿಶ್ಚಿತವಾಗಿದೆ. ಆದರೆ ನೀನು ಹೆದರಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ನಿನ್ನ ಬಳಿ ಶಿವನು ನೀಡಿದ ಪಾಶುಪತಾಸ್ತ್ರ ಇದೆ, ನೀನು ಶ್ರೇಷ್ಠ ಧನುರ್ಧರನೂ ಆಗಿದ್ದಿ’ ಎಂದು ಹೇಳುತ್ತಾನೆ. ತನ್ನ ಸ್ತುತಿಯಿಂದ ಸಂತುಷ್ಟನಾದ ಅರ್ಜುನನು, ಕೃಷ್ಣನೇ, ಶ್ರೀರಾಮನು ಸಹ ಧನುರ್ಧರನಾಗಿದ್ದನು. ಆದರೆ ಅವನು […]

ಗೀತಗೋವಿಂದ : ಹೃದಯವಂತರ ಭಗವದ್ಗೀತೆ

ಗೀತ ಗೋವಿಂದದ ಕೃಷ್ಣ ಜನ ಸಾಮಾನ್ಯರ ಕೃಷ್ಣನಾಗಿದ್ದ. ಅವನು ಎಲ್ಲರ ಹೆಗಲ ಮೇಲೆ ಕೈ ಹಾಕಿ ನಡೆಯಬಲ್ಲ ಸಖನಾಗಿದ್ದ. ಅವನು ಕಣ್ಣು – ಹೃದಯಗಳ ಅಳತೆ ಮೀರಿದ ವಿಶ್ವರೂಪಿಗಿಂತ ಹೆಚ್ಚಾಗಿ ಗೋಪಬಾಲನೂ ರಾಧಾ ಲೋಲನೂ ಆಗಿದ್ದ. ಇಂಥಾ ಕೃಷ್ಣನಲ್ಲಿ ಭಕ್ತಿಯನ್ನಿಟ್ಟುಕೊಂಡು, ಜಗತ್ತನ್ನು ಪ್ರೀತಿಸುವುದು ಸಾಧ್ಯವಾಗತೊಡಗಿದಾಗಲೇ ಸಮಾಜ ತನ್ನ ಸಂಕುಚಿತ ಮನಸ್ಥಿತಿಯಿಂದ ಮಗ್ಗಲು ಬದಲಿಸಿದ್ದು. ಮೌಲಿಕವಾದ ಒಂದು ಕೃತಿ ಸಂಸ್ಕೃತಿಯ ಮೇಲೆ ಎಷ್ಟೆಲ್ಲ ಬಗೆಯ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಗೀತಗೋವಿಂದ ಒಂದು ಅದ್ಭುತ ಉದಾಹರಣೆ. 12ನೇ ಶತಮಾನದಲ್ಲಿ ಆಗಿಹೋದ […]

ಕಾಯಬಲ್ಲವನೂ ಅವನೇ, ಕೊಲ್ಲಬಲ್ಲವನೂ ಅವನೇ… : ದೃಷ್ಟಾಂತ ಕಥೆ

ಪಾಂಡವರ ಮಾತುಗಳನ್ನು ಕೇಳುತ್ತಾ ಕೃಷ್ಣ ಒಳಗೊಳಗೆ ನಕ್ಕ. ಅವನ ತುಟಿಯ ಕೊಂಕು ಕಂಡ ಯುಧಿಷ್ಟಿರನಿಗೆ ಅಚ್ಚರಿ. ಇದರಲ್ಲೇನೋ ಮರ್ಮವಿದೆ ಎಂದು ಊಹಿಸಿದವನೇ, “ಕೃಷ್ಣಾ, ಯಾಕೆ ನಗುತ್ತಿದ್ದೀ? ನಮ್ಮಿಂದೇನಾದರೂ ತಪ್ಪಾಯಿತೇ?” ಎಂದು ಕೇಳಿದ. “ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ” ಎಂದು ಹಾಡಿದ್ದಾರೆ ಕನಕದಾಸರು. ಪಾಂಡವರ ಒಂದು ದೃಷ್ಟಾಂತದ ಮೂಲಕ ದಾಸರ ಈ ಪದಗಳ ಮರ್ಮವನ್ನು ಅರಿಯೋಣ. ಕುರುಕ್ಷೇತ್ರ ಯುದ್ಧ ಕಾಲದಲ್ಲಿ ಹೀಗಾಯ್ತು. ಕೌರವ […]

ಭಗವದ್ಗೀತೆ ಹೇಳುವ ಮೂರು ಬಗೆಯ ಸುಖಗಳು

ಕೃಷ್ಣ, ಸುಖವು “ಆತ್ಮ ಬುದ್ಧಿ ಪ್ರಸಾದಜಮ್” ಎಂದಿದ್ದಾನೆ. ಇದರ ಅರ್ಥ, “ಸುಖ ಆತ್ಮಪ್ರಸಾದ – ಅಂದರೆ, ಸುಖ ಹೊರಗಿನಿಂದ ಬರುವುದಲ್ಲ, ಒಳಗಿನಿಂದ ಚಿಮ್ಮುವಂಥದ್ದು” ಎಂದು. ಕೃಷ್ಣ ಅರ್ಜುನನಿಗೆ ಮೂರು ಬಗೆಯ ಸುಖಗಳನ್ನು ಹೀಗೆ ವಿವರಿಸುತ್ತಾನೆ : ಬಳಕೆಯಿಂದ ಖುಷಿಕೊಡುವಂಥದು, ದುಃಖವನ್ನು ನೀಗಿಸುವಂಥದು, ಮೊದಲು ವಿಷದಂತೆ ಅಪ್ರೀಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂಥದು. ಈ ಬಗೆಯ ಸುಖಗಳು ಸಾತ್ವಿಕ. ಇವು ಭಗವಂತನ ಕರುಣೆಯಿಂದ ಬರುವಂಥದು. ನಾವು ಆತ್ಯಂತಿಕವಾಗಿ ಬಯಸುವುದೇ ಸುಖವನ್ನು. ನಮ್ಮೆಲ್ಲ ಪ್ರಯತ್ನಗಳೂ ಜಂಜಡಗಳೂ ಸುಖವನ್ನು ಹೊಂದುವುದಕ್ಕಾಗಿಯೇ ಇವೆ. […]

ಸಂಶಯಪ್ರವೃತ್ತಿಯವರು ಎಲ್ಲೂ ಸಂತಸದಿಂದಿರಲು ಸಾಧ್ಯವಿಲ್ಲ : ಭಗವದ್ಗೀತೆ

ಸಂಶಯ ಪ್ರವೃತ್ತಿಯು ಇತರರ ಮೇಲಿನ ನಂಬಿಕೆಯ ಕೊರತೆಯನ್ನು ಮಾತ್ರವಲ್ಲ, ಸ್ವತಃ ತಮ್ಮ ಮೇಲಿನ ನಂಬಿಕೆಯ ಕೊರತೆಯನ್ನೂ ಬಿಂಬಿಸುತ್ತದೆ ಅನ್ನುತ್ತದೆ ಭಗವದ್ಗೀತೆಯ ಬೋಧನೆ ~ ಆನಂದಪೂರ್ಣ ಮನುಷ್ಯ ಜೀವಿಯ ಅತಿ ದೊಡ್ಡ ದೌರ್ಬಲ್ಯವೆಂದರೆ ಸಂಶಯ. ಯಾವುದೇ ಸಂಗತಿಯನ್ನು, ವಸ್ತು ಅಥವಾ ವ್ಯಕ್ತಿಯನ್ನು ಪರೀಕ್ಷಿಸುವ ದೃಷ್ಟಿಯಿಂದ, ಪ್ರಾಶ್ನಿಕ ಬುದ್ಧಿಯಿಂದ ಕಾಣುವುದು ಬೇರೆ; ಸಂಶಯ ದೃಷ್ಟಿಯಿಂದ ನೋಡುವುದೇ ಬೇರೆ. ಪರೀಕ್ಷೆ ಮತ್ತು ಪ್ರಶ್ನೆಗಳು ಹೆಚ್ಚಿನ ತಿಳಿವಳಿಕೆಗಾಗಿ ಮತ್ತು ಸ್ಪಷ್ಟತೆಗಾಗಿ ಹುಟ್ಟುತ್ತವೆ. ಆದರೆ ಸಂಶಯ ಹುಟ್ಟುವುದು ನಂಬಿಕೆಯ ಕೊರತೆಯಿಂದ.  ಯಾರು ಸದಾ ಕಾಲವೂ […]

ಶ್ರೀ ಕೃಷ್ಣನ 80 ಮಕ್ಕಳ ಹೆಸರು ನಿಮಗೆ ತಿಳಿದಿತ್ತೆ? : ಇಲ್ಲಿದೆ ನೋಡಿ….

ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು. ಹೀಗೆ ಅಷ್ಟಪತ್ನಿಯರಿಂದ ಕೃಷ್ಣ ಪಡೆದ ಮಕ್ಕಳ ಸಂಖ್ಯೆ 80! ಯಾವ ರಾಣಿಯಲ್ಲಿ ಯಾರು ಜನಿಸಿದರು? ಇಲ್ಲಿದೆ ನೋಡಿ… ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ , ಚಂದ್ರಭಾನು , ಬೃಹದ್ಭಾನು , ಅತಿಭಾನು […]