ಒಳಿತು ಕೆಡಕು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 21

ಊರಿನ ಹಿರಿಯಜ್ಜ ಒಳಿತು ಕೆಡಕುಗಳ ಬಗ್ಗೆ ಮಾಡಿದ ಪ್ರಶ್ನೆಗೆ ಅವನು ಉತ್ತರಿಸತೊಡಗಿದ. ನಿಮ್ಮೊಳಗಿರುವ ಒಳಿತಿನ ಬಗ್ಗೆಯೇನೋ ಮಾತನಾಡಬಹುದು ಆದರೆ ಕೆಡುಕಿನ ಬಗ್ಗೆ ಸಾಧ್ಯವಿಲ್ಲ. ಏಕೆಂದರೆ, ಕೆಡಕು ಬೇರೇನೂ ಅಲ್ಲ; ಹಸಿವೆ ಬಾಯಾರಿಕೆಗಳಿಂದ ಬಳಲಿ ಬೆಂಡಾದ ನಿಮ್ಮ ಒಳಿತೇ ಹೌದು. ಒಳಿತಿಗೆ ಹಸಿವೆಯಾದರೆ ಅದು ಸುಮ್ಮನೇ ಕೂಡುವುದಿಲ್ಲ ಕಗ್ಗತ್ತಲ ಗುಹೆಗೂ ಅನ್ನ ಹುಡುಕಿಕೊಂಡು ಹೋಗುತ್ತದೆ, ಬಾಯಾರಿಕೆಯಾದರೆ ಬಗ್ಗಡದ ನೀರನ್ನೂ ಕುಡಿಯುತ್ತದೆ. ನೀವು ನಿಮ್ಮೊಂದಿಗೆ ಒಂದಾದಾಗ ಮಾತ್ರ ಒಳಿತನ್ನು ಸಾಧಿಸುತ್ತೀರಿ. ಆದರೆ, ನೀವು ನಿಮ್ಮೊಡನೆ ಒಂದಾಗದೇ ಹೋದ ಮಾತ್ರಕ್ಕೆ ಕೆಡುಕಿಗೆ […]