ಸಮಾಜ ಸುಧಾರಕ ಆಧ್ಯಾತ್ಮಿಕ ಪಥದರ್ಶಕ : ಶ್ರೀ ನಾರಾಯಣ ಗುರು

“ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ಎಲ್ಲೂ ಕಂಡಿಲ್ಲ!” ಎಂದು ಕವಿ ರವೀಂದ್ರರು ಉದ್ಗರಿಸಿದ್ದರು  ~ ಗಾಯತ್ರಿ ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ. ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು. ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು. ಇರುವುದೊಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು; ಜಾತಿಯ ಬಗ್ಗೆ ಕೇಳಬೇಡ, […]