ನಾವೇಕೆ ಮೈಮೇಲೆ ಇರುವೆ ಬಿಟ್ಟುಕೊಳ್ಳಬೇಕು!? : ಅಧ್ಯಾತ್ಮ ಡೈರಿ

ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ~ ಅಲಾವಿಕಾ ಪ್ರತಿಕ್ರಿಯೆ ನಮ್ಮ ಸಮಯವನ್ನು ಮಾತ್ರವಲ್ಲ, ಜೀವನವನ್ನೇ ಹಾಳು ಮಾಡುತ್ತದೆ. ಪ್ರತಿಕ್ರಿಯೆ ನಮಗೆ ರೂಢಿಯಾಗಿಬಿಟ್ಟರೆ, ಪ್ರತಿಯೊಂದಕ್ಕೂ ನಮ್ಮದೊಂದು ಪ್ರತಿಕ್ರಿಯೆ ಹೆಣೆದು ತೂರಿಬಿಡುವುದು ಒಂದು ಗೀಳಾಗಿಬಿಡುತ್ತದೆ. ಒಂದು ಹಂತದಲ್ಲಿ, ನಮ್ಮಲ್ಲಿ ಪ್ರತಿಕ್ರಿಯೆ ಮೂಡಲಿ, ಮೂಡದಿರಲಿ, ಹೇಗಾದರೊಂದು ಹುಟ್ಟಿಸಿಕೊಂಡಾದರೂ ಅದನ್ನು ದಾಖಲಿಸುವ ಚಾಳಿ ಅಂಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ, ನಾವು ಇದನ್ನು ಢಾಳಾಗಿ ನೋಡಬಹುದು.  […]