ಸಾವಿರ ನಾಣ್ಯಗಳು ಮತ್ತು ಒಂದು ಕ್ಷಣ : ಒಂದು ನಸ್ರುದ್ದೀನ್ ಕಥೆ

ಮುಲ್ಲಾ ನಸ್ರುದ್ದೀನ ತೀಕ್ಷ್ಣ ಬುದ್ಧಿಯವನಾದ್ದರಿಂದ ಸುತ್ತ ಮುತ್ತಲಿನ ಜನರಿಗೆ ತನ್ನ ಸಲಹೆ, ತಿಳಿವು ಹಂಚುತ್ತ ಬದುಕು ಸಾಗಿಸುತ್ತಿದ್ದ. ಜನ ಅವನನನ್ನು ಸೂಫಿಯೆಂದೂ, ಭಗವಂತನೊಂದಿಗೆ ಹತ್ತಿರದ ಸಂಬಂಧವನ್ನಿಟ್ಟುಕೊಂಡವನೆಂದೂ ತಿಳಿದು ತಮ್ಮ ಸಮಸ್ಯೆ, ಪ್ರಶ್ನೆಗಳೊಂದಿಗೆ ಅವನನ್ನು ನೋಡಲು ಬರುತ್ತಿದ್ದರು. ಒಂದು ದಿನ ಒಬ್ಬ ಧಾರ್ಮಿಕ ಮನುಷ್ಯ ಅವನನ್ನು ಪರೀಕ್ಷಿಸಲು ಬಂದ. “ನಸ್ರುದ್ದೀನ್, ಜನ ನಿನ್ನ ಸಂತ ಎಂದು ಹೇಳುತ್ತಾರೆ, ಅಲ್ಲಾಹ್ ನ ಜೊತೆ ಮಾತನಾಡುವವ ಎಂದು ಹೇಳುತ್ತಾರೆ. ಅಲ್ಲಾಹ್ ನ ದೃಷ್ಟಿಯಲ್ಲಿ 1000 ಸಾವಿರ ವರ್ಷ ಎಂದರೆ ಎಷ್ಟು ? […]

ಬದುಕಿನ ಪ್ರತಿ ಕ್ಷಣವೂ ಪವಾಡವೇ

ನಮಗೆ ಮಾಡಬೇಕಾದ ಕೆಲಸವನ್ನು ಮುಂದೂಡುವುದರಲ್ಲಿ ಹೆಚ್ಚಿನ ಆಸಕ್ತಿ. ಇದು ನಮ್ಮ ಪಲಾಯನವಾದವಷ್ಟೆ…. ನಾವು ಬಹುತೇಕರು ಮಾಡುವುದು ಇದನ್ನೇ. ನಮ್ಮ ಬದುಕಿನಲ್ಲಿ ಪವಾಡ ಘಟಿಸಲಿದೆ ಎಂದು ಕಾಯುತ್ತಾ ಕೂರುತ್ತೇವೆ. ಆ ಪವಾಡ ನಾವು ಕಾಯುತ್ತ ಕುಳಿತ ಘಳಿಗೆಯಲ್ಲೇ ಘಟಿಸಬಹುದು. ಆದರೆ ನಾವು ಕಾಯುವುದರಲ್ಲಿ ಎಷ್ಟು ಮಗ್ನರಾಗಿರುತ್ತೇವೆ ಎಂದರೆ, ನಮ್ಮ ಕಣ್ಣೆದುರೇ ಘಟಿಸುತ್ತಿರುವ ಪವಾಡವನ್ನು ಗುರುತಿಸಲಾಗದೆ ಹೋಗುತ್ತೇವೆ. ಅದನ್ನು ಸ್ವೀಕರಿಸಲಾಗದೆ ಹೋಗುತ್ತೇವೆ. ಹೀಗೆ ನಮ್ಮದೇ ಮೂರ್ಖತನದಿಂದ ಕೈಗೆ ಬಂದಿರುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ನಮ್ಮ ಬದುಕಿನ ಪ್ರತಿಯೊಂದು ಕ್ಷಣವೇ ಪವಾಡವೇ ಆಗಿರುತ್ತದೆ. […]