ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ

ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು.  ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.

ಕ್ಷಮಿಸಲು ಬೇಕಿರುವುದು ಉದಾರ ಹೃದಯವಲ್ಲ, ಕ್ಷಮಿಸುವ ಧೈರ್ಯ!

ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ; ಕ್ಷಮಿಸುವ ಸಹಾನುಭೂತಿ. ಇದು ಕೇವಲ ಕ್ಷಮಿಸುವ ಗುಣವಲ್ಲ, ಆ ಗುಣದ ಮೂಲ ಬೀಜ. ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ, ಅನುದಿನದ ಬದುಕಿಗೂ `ಕ್ಷಾಂತಿ’ಯು ದಿವ್ಯ ಮಂತ್ರವಾಗಿದೆ. ~ ಗಾಯತ್ರಿ ನೆಮ್ಮದಿಯಾಗಿ ಬದುಕಲಿಕ್ಕೆ ಏನೆಲ್ಲ ಬೇಕು? ಹೊಟ್ಟೆ ಬಟ್ಟೆಗೆ ತಕ್ಕಷ್ಟು, ಇರಲಿಕ್ಕೆ – ಮಲಗಲಿಕ್ಕೊಂದು ಜಾಗ. ಇವಿಷ್ಟಿದ್ದರೆ ನೆಮ್ಮದಿ ಖಾತ್ರಿ. ಇವುಗಳ ಅಗತ್ಯಗಳ ಜೊತೆಗೆ ಮಹತ್ವಾಕಾಂಕ್ಷೆಗಳು ಸೇರಿಕೊಂಡಾಗ ಪಟ್ಟಿ ಬೆಳೆಯುತ್ತ ಹೋದರೂ ಅವು ಈ ಮೂಲಭೂತ ಅಗತ್ಯಗಳ ಬೀಜದಿಂದಲೇ ಚಿಗಿತು ಹಬ್ಬಿದಂಥವಷ್ಟೆ. ವಾಸ್ತವವಾಗಿ ನೆಮ್ಮದಿ […]

ಕ್ಷಮೆ ಅಂದರೇನು, ಹೇಳು ಸೂಫಿ…

ಕ್ಷಮಿಸುವುದು ಧೀರತನ. ಧೈರ್ಯವಂತರಷ್ಟೆ ಕ್ಷಮಿಸಬಲ್ಲರು, ಹೇಡಿಗಳಿಂದ ಅದು ಸಾಧ್ಯವಿಲ್ಲ…. ಮನುಷ್ಯರನ್ನು ಮನುಷ್ಯರನ್ನಾಗಿಸುವುದು ಯಾವುದು ಎಂದು ಕೇಳಲಾಯ್ತು. ಮೂಡಿಬಂದ ಒಕ್ಕೊರಲಿನ ಉತ್ತರ “ಕ್ಷಮೆ” ಎಂಬುದೇ ಆಗಿತ್ತು. ಮಿಕ್ಕೆಲ್ಲ ಪ್ರಾಣಿಗಳು ಕ್ರಿಯೆಗೆ ಪ್ರತಿಕ್ರಿಯೆ ತೋರಲು ಸಿದ್ಧವಾಗಿಯೇ ಇರ್ತವೆ. ಇನ್ನು ಕೆಲವು ಯಾರಿಂದಲಾದರೂ ಸಮಸ್ಯೆ ಒದಗುವ ಮೊದಲೇ ತನ್ನ ರಕ್ಷಣೆಗೆ ಸನ್ನದ್ಧವಾಗಿರ್ತವೆ. ಪ್ರಾಣಿಗಳಿಗೆ ತಮ್ಮ ಜೀವ ಮುಖ್ಯ. ತಮ್ಮ ಆಹಾರ ಮುಖ್ಯ. ತಮ್ಮ ನೆಲೆ ಮುಖ್ಯ. ಅವುಗಳ ಸೃಷ್ಟಿಯೇ ಹಾಗಿದೆ. ನಾಯಿಯ ಎದುರಿಟ್ಟ ಮೂಳೆ ತುಂಡನ್ನು ಮುಟ್ಟಿದರೆ ಅದು ಸುಮ್ಮನೆ ಬಿಡುವುದೇ? […]