ವಿವೇಕ ಮತ್ತು ತಪಸ್ಸು : ಖಲೀಲ್ ಗಿಬ್ರಾನ್

ಮೂಲ : ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ಆತ್ಮವೊಂದು ರಣರಂಗ. ಅಲ್ಲಿ ಬಹುತೇಕ  ನಿಮ್ಮ ವಿವೇಕ ಮತ್ತು ನ್ಯಾಯ, ನಿಮ್ಮ ತಪಸ್ಸು ಮತ್ತು ಬಯಕೆಗಳ ಮೇಲೆ ಯುದ್ಧ ಸಾರಿರುತ್ತವೆ. ಈ ಅಂಶಗಳ ನಡುವಿನ ಅಪಸ್ವರ ಮತ್ತು ವೈರತ್ವಗಳನ್ನು ತೊಡೆದುಹಾಕಿ ಏಕತೆ ಮತ್ತು ಸೌಹಾರ್ದ ಮೂಡಿಸಲು ನಾನು ನಿಮ್ಮ ಆತ್ಮದೊಳಗೆ ಶಾಂತಿ ದೂತನ ಕೆಲಸ ಮಾಡಬೇಕು. ಈ ಅಂಶಗಳನ್ನು, ನೀವೇ ಪ್ರೀತಿಸದಿದ್ದರೆ ಸೌಹಾರ್ದ ಮೂಡಿಸುವ ಕೆಲಸದಲ್ಲಿ ನೀವೇ ಕೈಜೋಡಿಸದಿದ್ದರೆ ನಾನು ತಾನೇ ಏನು […]

ಗಿಬ್ರಾನ್ ಹೇಳುತ್ತಾನೆ; ‘ಸುಖ’ ಎಂದರೆ….

ಮೂಲ : ಖಲೀಲ್ ಗಿಬ್ರಾನ್, ‘ಪ್ರವಾದಿ’ ಕೃತಿ | ಭಾವಾನುವಾದ : ಚಿದಂಬರ ನರೇಂದ್ರ ಸುಖ, ಸ್ವಾತಂತ್ರ್ಯದ ಹಾಡು ಆದರೆ ಅದೇ ಸ್ವಾತಂತ್ರ್ಯವಲ್ಲ. ಸುಖ, ನಿಮ್ಮ ಬಯಕೆಗಳ ಅರಳುವಿಕೆ. ಆದರೆ ಬಯಕೆಗಳ ಫಲವಲ್ಲ. ಸುಖ, ಆಳ ಎತ್ತರವನ್ನು ಕೂಗಿ ಕರೆಯುವ ಛಂದ, ಆದರೆ ಅದೇ ಆಳ, ಅದೇ ಎತ್ತರವಲ್ಲ. ಸುಖ, ರೆಕ್ಕೆ ಬಿಚ್ಚುತ್ತಿರುವ ಪಂಜರದ ಹಕ್ಕಿ, ಆದರೆ ಅದು ಸುತ್ತುವರೆದ ಅವಕಾಶವಲ್ಲ. ತೋಟಕ್ಕೆ ಹೋಗಿ ನೋಡಿ; ನಿಮಗೇ ಅರಿವಾಗುತ್ತದೆ… ದುಂಬಿಗೆ ಹೂವಿನಿಂದ ಜೇನು ಹೀರುವುದೇ ಸುಖ ಹೂವಿಗೆ, […]

ಗಿಬ್ರಾನ್ ಹೇಳಿದ ಜೀವನದ 8 ಗುಟ್ಟುಗಳು : Be positive video

ಜೀವನದ ಗುಟ್ಟುಗಳು ದೂರದ ಗುಹೆಯಲ್ಲೆಲ್ಲೋ ಹುಗಿದುಕೊಂಡಿಲ್ಲ. ಎಚ್ಚರದಿಂದ ಗಮನಿಸಿದರೆ ನಮಗೇ ಹೊಳೆಯುವ ಸರಳ ಪಾಠಗಳಿವು. ಆದರೆ ನಾವು ಸದಾ ಒಂದಿಲ್ಲೊಂದು ಮೈಮರೆವಿನಲ್ಲಿ ಇರುವುದರಿಂದ ನಮಗೆ ಈ ಗುಟ್ಟುಗಳು ಹೊಳೆಯುವುದೇ ಇಲ್ಲ. ಅತ್ಯಂತ ಸರಳವಾಗಿರುವ ಈ ಸಂಗತಿಗಳನ್ನೂ ಮತ್ತೊಬ್ಬರು ಎತ್ತಿ ಹೇಳಬೇಕಾಗುತ್ತದೆ.  ಕವಿ, ತತ್ವಜ್ಞಾನಿ ಖಲೀಲ್ ಗಿಬ್ರಾನ್ ಇಂತಹ ಸರಳ ಸತ್ಯಗಳನ್ನು ಬಹಳ ಸುಂದರವಾಗಿ, ಕಾವ್ಯಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. Sand and Foam (ಮರಳು ಮತ್ತು ನೊರೆ) ಅಂತಹ ಕೃತಿಗಳಲ್ಲೊಂದು. ಗಿಬ್ರಾನ್ ಹೇಳಿದ, ಬದುಕಿಗೆ ತಿಳಿವಿನ ಹೊಳಪು ನೀಡುವ […]

ಪ್ರೇಮಾನುಭೂತಿ ಸವಿಯಲು ಗಿಬ್ರಾನನ 8 ಸಲಹೆಗಳು : Be Positive Video

ಪ್ರೇಮಿಸುವುದು ಎಂದರೆ ನಮ್ಮ ವ್ಯಕ್ತಿತ್ವವನ್ನೆ ಇಲ್ಲವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಪ್ರೇಮವೆಂದರೆ ನಮ್ಮನ್ನು ಒಂದೆಡೆ ಬಂಧಿಸಿಕೊಳ್ಳುವುದಲ್ಲ. ಪ್ರೇಮ ಪಂಜರವಲ್ಲ, ರೆಕ್ಕೆ. ಇದು  ಖಲೀಲ್ ಗಿಬ್ರಾನ್ ಆಶಯ. ನಿಜ ಪ್ರೇಮದ ದಿವ್ಯಾನುಭೂತಿ ಸವಿಯಲು ಇಲ್ಲಿವೆ ಖಲೀಲ್ ಗಿಬ್ರಾನನ 8 ಸಲಹೆಗಳು:  

ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ ಕಾವ್ಯ

ಇಂದು ಜಗತ್ತು ಕಂಡ ಅಪರೂಪದ ತತ್ವಜ್ಞಾನಿ, ಕವಿ, ಚಿಂತಕ, ಅಧ್ಯಾತ್ಮ ಜೀವಿ ಖಲೀಲ್ ಗಿಬ್ರಾನ್ ಜನ್ಮದಿನ. ಈ ಸಂದರ್ಭದಲ್ಲಿ ಗಿಬ್ರಾನ್ ರಚನೆಯ ‘ಮರಳು ಮತ್ತು ನೊರೆ’ ಕೃತಿಯ ಆಯ್ದ ಭಾಗ, ನಿಮ್ಮ ಓದಿಗೆ | ಕನ್ನಡಕ್ಕೆ : ಚಿದಂಬರ ನರೇಂದ್ರ “ನಾನು ಈ ಸಮುದ್ರ ತೀರಗಳಲ್ಲಿ ನಡೆಯುತ್ತಲೇ ಇದ್ದೇನೆ, ಮರಳು ಮತ್ತು ನೊರೆಯ ನಡುವೆ. ಅಲೆಯ ಉಬ್ಬರ, ನನ್ನ ಪಾದದ  ಗುರುತುಗಳನ್ನ ಅಳಿಸಿ ಹಾಕಿದರೆ, ಬೀಸುವ ಗಾಳಿ, ಈ ನೊರೆಯನ್ನು ಒರೆಸಿ ಹಾಕುತ್ತದೆ. ಆದರೂ ಹಾಗೇ ಇವೆ, ಈ ಸಮುದ್ರ ಮತ್ತು ತೀರ ಅಂದಿನಿಂದಲೂ. […]

ಕಾಯಕ : ತಾವೋ ಧ್ಯಾನ ~ 7

ಋತುಮಾನ ಮತ್ತು ಕಾಯಕದ ಸ್ವಭಾವ ಅರಿತು ಕಾಯಕಕ್ಕಿಳಿದಾಗ ಅದು ಕಾಯಕವೂ ಹೌದು ಪ್ರೇಮವೂ ಹೌದು ~ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಕಟ್ಟಿಗೆ ಕತ್ತರಿಸುವವನ ಸಂಧಾನ ಋತುಗಳೊಂದಿಗೆ. ಕಟ್ಟಿಗೆ ಸೀಳುವುದು ಅವನಿಗೆ ದುಡಿಮೆಯೂ ಹೌದು, ದುಡಿಮೆ ಅಲ್ಲವೂ ಹೌದು. ಹಿಮ ಸುರಿಯುತ್ತಿರುವಾಗಲೂ ಕಟ್ಟಿಗೆ ಕತ್ತರಿಸುವವನಿಗೆ ಬಿಡುವಿಲ್ಲ. ಅವನು ಕಟ್ಟಿಗೆ ಕತ್ತರಿಸದೇ ಹೋದರೆ, ಅವನು ಮತ್ತು ಅವನ ಮನೆಯವರು ಬೆಚ್ಚಗಿರಲಾರರು ಹಾಗು ಅವನನ್ನು ಅವಲಂಬಿಸಿದವರು ಕೂಡ ಸರಾಗವಾಗಿ ಉಸಿರಾಡಲಾರರು. ಆದರೆ ಕಟ್ಟಿಗೆ ಕತ್ತರಿಸುವವ ತುಂಡು ಗುತ್ತಿಗೆಯವನ […]

ವಿದಾಯ ~ ಪ್ರವಾದಿ : ಅಂತಿಮ ಅಧ್ಯಾಯ

ನಿಮ್ಮಲ್ಲಿ ಇನ್ನೂ ಕೆಲವರು ಮಾತುಗಳಲ್ಲಿ ಅಲ್ಲದಿದ್ದರೂ ನನ್ನನ್ನು ಹೀಗೆ ಆಡಿಕೊಳ್ಳುತ್ತೀರಿ. “ ಅಪರಿಚಿತನೇ, ಆಗಂತುಕನೇ ಮುಟ್ಟಲಾಗದ ಎತ್ತರಗಳನ್ನು ಪ್ರೀತಿಸುವವನೇ, ಗರುಡ, ಗೂಡು ಕಟ್ಟುವ ಜಾಗಗಳಲ್ಲಿ ಯಾಕೆ ನೆಲೆಸ ಬಯಸುತ್ತಿ? “ ಅಸಾಧ್ಯದ ಬೆನ್ನ ಹಿಂದೆ ಯಾಕೆ ಬಿದ್ದಿರುವಿ ? “ ಯಾವ ಬಿರುಗಾಳಿಗೆ ಗಾಳ ಹಾಕಿರುವಿ? “ಆಕಾಶದಲ್ಲಿ ಯಾವ ಗಾಳಿ ಹಕ್ಕಿಯ ಬೆನ್ನಿಗೆ ಬಾಣ ಹೂಡಿರುವಿ? “ ಬಾ ನಮ್ಮೊಳಗೆ ಒಂದಾಗು, “ ಕೆಳಗಿಳಿದು ಬಾ, ನಮ್ಮ ಮನೆಯ ರೊಟ್ಟಿ ತಿಂದು, ಹಸಿವ ತೀರಿಸಿಕೋ ನಮ್ಮ ತೋಟದ […]

ಗಾಳಿಯಷ್ಟು ಅವಸರ ನನಗಿಲ್ಲವಾದರೂ ನಾನು ಹೋಗಲೇಬೇಕಾಗಿದೆ : ಬೀಳ್ಕೊಡುಗೆ ~ ಭಾಗ 1 : ಪ್ರವಾದಿ | ಅಧ್ಯಾಯ 28

ಸಂಜೆ ರಂಗೇರತೊಡಗಿತ್ತು. ಭವಿಷ್ಯವನ್ನು ಕಣ್ಣಿಗೆ ಕಟ್ಟಿಕೊಂಡ ಅಲ್’ಮಿತ್ರ ಮಾತನಾಡಿದಳು. “ ಈ ದಿನ, ಈ ಜಾಗ, ಮತ್ತು ಈವರೆಗೆ ಮಾತನಾಡಿದ ನಿನ್ನ ಚೇತನ ಎಲ್ಲ, ಧನ್ಯ ಭಾಗ್ಯರು “ ಅವನು ಉತ್ತರಿಸಿದ: ಮಾತನಾಡಿದವನು ನಾನೆ? ಕೇಳಿದವನೂ ನಾನೇ ಅಲ್ಲವೆ? ನಂತರ ಅವನು ದೇವಸ್ಥಾನದ ಮೆಟ್ಟಲಿಳಿದ, ಜನರೆಲ್ಲ ಅವನ ಹಿಂದೆ ಹೊರಟರು. ಅವನು ನೇರವಾಗಿ ಹೊರಟು, ತನ್ನ ಹಡಗು ಹತ್ತಿ ಮೇಲಿನ ಅಂಗಳದಲ್ಲಿ ನಿಂತ. ಜನರತ್ತ ಮುಖ ಮಾಡಿ ದನಿ ಎತ್ತರಿಸಿ ಮಾತನಾಡತೊಡಗಿದ. ಆರ್ಫಲೀಸ್ ನ ಮಹಾಜನರೇ, ನಿಮ್ಮನ್ನು […]

ಯುದ್ಧ ~ ಒಂದು ಗಿಬ್ರಾನ್ ಕಥೆ : Tea time story

ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ರಾಜನ ಅರಮನೆಯಲ್ಲಿ ಸಂಭ್ರಮದ ಔತಣ ಕೂಟ ಏರ್ಪಾಡಾಗಿತ್ತು. ಮಂತ್ರಿಗಳು, ಅಧಿಕಾರಿಗಳು ಎಲ್ಲ ಮೋಜಿನಲ್ಲಿ ಮಗ್ನರಾಗಿದ್ದರು. ಅದೇ ಸಮಯಕ್ಕೆ ಆ ಜಾಗಕ್ಕೆ ವ್ಯಕ್ತಿಯೊಬ್ಬನ ಪ್ರವೇಶವಾಯಿತು. ಅ ವ್ಯಕ್ತಿ ರಾಜನ ಮುಂದೆ ಹೋಗಿ ನಿಂತ. ಅಲ್ಲಿ ಸೇರಿದ್ದ ಎಲ್ಲರೂ ಆ ವ್ಯಕ್ತಿಯನ್ನು ಗಾಬರಿಯಿಂದ ನೋಡತೊಡಗಿದರು. ಅವನ ಕಣ್ಣಿನ ಗುಡ್ಡೆ ಹೊರ ಬಂದಿತ್ತು, ಕಣ್ಣಿಂದ ರಕ್ತ, ಧಾರಾಕಾರವಾಗಿ ಹರಿಯುತ್ತಿತ್ತು. “ ಏನಾಯ್ತು ನಿನಗೆ?, ನಿನ್ನ ಈ ಸ್ಥಿತಿಗೆ ಯಾರು ಕಾರಣ?” ರಾಜ […]

ಸುಖದ ವಿಷಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 26

ವರ್ಷಕ್ಕೊಮ್ಮೆ ನಗರಕ್ಕೆ ಬಂದು ಹೋಗುತ್ತಿದ್ದ ಸನ್ಯಾಸಿಯೊಬ್ಬ ಮುಂದೆ ಬಂದು ಸುಖದ ಬಗ್ಗೆ ಅಭಿಪ್ರಾಯ ಕೇಳಿದ. ಅವನು ಸುಖದ ವಿಷಯ ಮಾತನಾಡತೊಡಗಿದ. ಸುಖ, ಸ್ವಾತಂತ್ರ್ಯದ ಹಾಡು, ಆದರೆ, ಅದೇ ಸ್ವಾತಂತ್ರ್ಯವಲ್ಲ. ಸುಖ, ನಿಮ್ಮ ಬಯಕೆಗಳ ಅರಳುವಿಕೆ. ಆದರೆ ಬಯಕೆಗಳ ಫಲವಲ್ಲ. ಸುಖ, ಆಳ ಎತ್ತರವನ್ನು ಕೂಗಿ ಕರೆಯುವ ಛಂದ, ಆದರೆ, ಅದೇ ಆಳ, ಅದೇ ಎತ್ತರವಲ್ಲ. ಸುಖ, ರೆಕ್ಕೆ ಬಿಚ್ಚುತ್ತಿರುವ ಪಂಜರದ ಹಕ್ಕಿ, ಆದರೆ, ಅದು ಸುತ್ತುವರೆದ ಅವಕಾಶವಲ್ಲ. ಹೌದು. ಸುಖ, ಸ್ವಾತಂತ್ರ್ಯದ ಹಾಡು, ಇದು ಖಡಾ ಖಂಡಿತ […]