ನಿಮ್ಮ ಬಳಿಯೂ ದುಃಖದ ಚೀಲ, ಖುಷಿಯ ಚೀಲಗಳು ಇವೆ ಅಲ್ಲವೆ? : ನಸ್ರುದ್ದೀನನ ಕಥೆ ಓದಿ!

ಮುಲ್ಲಾ ನಸ್ರುದ್ದೀನನಿಗೆ ಊರ ಉಸಾಬರಿ ಜಾಸ್ತಿ. ಆದರೆ ಅದರಿಂದ ಎಲ್ಲರಿಗೂ ಅನುಕೂಲವೇ ಆಗುತ್ತಿತ್ತು, ನಸ್ರುದ್ದೀನನಿಗೂ ನಷ್ಟವಿರಲಿಲ್ಲ. ಒಮ್ಮೆ ಹೀಗಾಯ್ತು. ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಪಟ್ಟಣಕ್ಕೆ ಹೊರಟಿದ್ದ. ದಾರಿ ಬದಿಯಲ್ಲಿ ನಡುವಯಸ್ಕ ವ್ಯಕ್ತಿಯೊಬ್ಬ ಆಕಾಶ ತಲೆಯ ಮೇಲೆ ಬಿದ್ದಂತೆ ಕೂತುಕೊಂಡಿರುವುದು ಕಾಣಿಸಿತು. ಅವನು ಬಹಳ ನಿರಾಶನಾಗಿದ್ದ. ಕತ್ತೆಯಿಂದ ಕೆಳಗಿಳಿದ ನಸ್ರುದ್ದೀನ್ ಆತನ ಬಳಿ ಏನಾಯ್ತೆಂದು ವಿಚಾರಿಸಿದ. ಆ ವ್ಯಕ್ತಿ ಮುಖ ಊದಿಸಿಕೊಂಡೇ ತನ್ನ ಬಳಿ ಇದ್ದ ಚೀಲವೊಂದನ್ನು ತೋರಿಸಿ “ಮತ್ತೇನು ಮಾಡಲಿ? ನನ್ನ ಬಳಿ ಇರುವುದೆಲ್ಲ […]

ಕೊರಗು ಕಳೆಯುವ 5 ಹಂತಗಳು : Be Positive video

ಕೊರಗು ನೀಗುವಲ್ಲಿ ಪ್ರತಿಯೊಬ್ಬರೂ ಹಾಯುವ ಈ 5 ಹಂತಗಳನ್ನು ಗಮನಿಸಿ. ನೀವು ಯಾವ ಹಂತದಲ್ಲಿ ಸಿಲುಕಿದ್ದೀರಿ, ನಿರುಕಿಸಿ. ಕೊನೆಗೂ ನೀವು ನಿಮ್ಮ ಬದುಕನ್ನು ಬಾಳಲೇಬೇಕು. ಕಾಲವ್ಯರ್ಥ ಮಾಡಬೇಡಿ, ಖುಷಿಯಾಗಿರಿ!!    ಸಂಬಂಧಗಳು ಕಳಚಿಹೋದಾಗ, ಸಂಗಾತಿ ತೀರಿಹೋದಾಗ ಅಥವಾ ಬೆಸುಗೆಯೇ ಸುಳ್ಳಾದಾಗ ಉಂಟಾಗುವ ಕೊರಗು ಕಡಿಮೆಯಲ್ಲ. ಇಂಥದನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅನುಭವಿಸಿಯೇ ಇರುತ್ತಾರೆ. ಆದರೆ ಇದನ್ನು ಎದುರಿಸುವ ರೀತಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನ. ಕೆಲವರು ವಿಪರೀತ ವಿಷಾದದಲ್ಲಿ ತಮ್ಮ ಬದುಕನ್ನೆ ನಷ್ಟಮಾಡಿಕೊಂಡರೆ, ಮತ್ತೆ ಕೆಲವರು ಬಹಳ […]