ಶ್ರೀಕೃಷ್ಣ, ಅರ್ಜುನನ ಗರ್ವಭಂಗ ಮಾಡಿದ ಕಥೆ

ಭಕ್ತವತ್ಸಲನಾದ ಶ್ರೀಕೃಷ್ಣ ತನ್ನ ಶಿಷ್ಯನೂ ಸಖನೂ ಆದ ಅರ್ಜುನ ಅಹಂಕಾರದಿಂದ ದಾರಿ ತಪ್ಪದಂತೆ ಸಕಾಲದಲ್ಲಿ ಗರ್ವಭಂಗ ಮಾಡಿ ಪಾಠ ಕಲಿಸಿದ್ದು ಹೀಗೆ… ಯಮುನಾ ನದೀತೀರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರು ಕುಳಿತು ಸಂಭಾಷಿಸುತ್ತಿದ್ದರು. ಶ್ರೀಕೃಷ್ಣನು ಅರ್ಜುನನಿಗೆ, ‘ಕೌರವರೊಂದಿಗೆ ಯುದ್ಧವು ನಿಶ್ಚಿತವಾಗಿದೆ. ಆದರೆ ನೀನು ಹೆದರಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ನಿನ್ನ ಬಳಿ ಶಿವನು ನೀಡಿದ ಪಾಶುಪತಾಸ್ತ್ರ ಇದೆ, ನೀನು ಶ್ರೇಷ್ಠ ಧನುರ್ಧರನೂ ಆಗಿದ್ದಿ’ ಎಂದು ಹೇಳುತ್ತಾನೆ. ತನ್ನ ಸ್ತುತಿಯಿಂದ ಸಂತುಷ್ಟನಾದ ಅರ್ಜುನನು, ಕೃಷ್ಣನೇ, ಶ್ರೀರಾಮನು ಸಹ ಧನುರ್ಧರನಾಗಿದ್ದನು. ಆದರೆ ಅವನು […]