32  ಗಾಯತ್ರಿ ಮಂತ್ರಗಳು  : ನಿತ್ಯಪಾಠ #2

ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದಗಳ ಮಂತ್ರ. ಇದು ಒಟ್ಟು 24  ಅಕ್ಷರಗಳ  ಛಂದಸ್ಸು. ಈ ಛಂದಸ್ಸಿನಲ್ಲಿ ರಚನೆಗೊಂಡ ವಿವಿಧ ದೇವತೆಗಳ ಸ್ತುತಿ ಆಯಾ ದೇವತೆಗಳ ಗಾಯತ್ರಿ ಮಂತ್ರವೆಂದು ಕರೆಯಲ್ಪಡುತ್ತದೆ. ಇಲ್ಲಿ 32 ದೇವತೆಗಳ ವಿವಿಧ ಗಾಯತ್ರಿ ಮಂತ್ರಗಳನ್ನು ನೀಡಲಾಗಿದೆ.  ಗಾಯತ್ರಿ ದೇವಿ ಮಂತ್ರ ಓಂ ಭೂರ್ಭುವಃ ಸ್ವಃ ತತ್ಸರ್ವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ಸೂರ್ಯ ಓಂ ಭಾಸ್ಕರಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್ ಚಂದ್ರ ಓಂ ಕೃಷ್ಣ […]

ವರಕವಿ ಅಂಬಿಕಾತನಯದತ್ತ ರಚಿಸಿದ ‘ಗಾಯತ್ರೀ ಸೂಕ್ತ’

ಡಾ.ದ.ರಾ. ಬೇಂದ್ರೆ, ಅಧ್ಯಾತ್ಮದೆಡೆ ತೀವ್ರ ತುಡಿತವಿದ್ದ ಕವಿ. ಆದ್ದರಿಂದಲೇ ಅವರು ವರ ಕವಿ. ಬೇಂದ್ರೆಯವರ ಕವಿತೆಗಳಲ್ಲಿ ಹಲವಾರು ಅನುಭಾವ ಪದ್ಯವನ್ನು ನಾವು ನೋಡಬಹುದು. ಇಲ್ಲಿ ನೀಡಲಾಗಿರುವ ‘ಗಾಯತ್ರೀ ಸೂಕ್ತ’, ಬೇಂದ್ರೆಯವರ ಅರ್ಥಪೂರ್ಣ ರಚನೆಗಳಲ್ಲೊಂದು.  ಲಯದ ಬಸಿರ ಬಯಲಲ್ಲಿ ದೇವ-ಭವ ಬೀಜ ಬಿತ್ತಿದಾಕೆ ಮೂಕು ಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ ರಸವ ಮೀರಿ ತಾನಾರಿದಾತನಿಗೆ ಹೇಗೊ ರುಚಿಸಿದಾಕೆ ಸಾಕ್ಷಿಪುರುಷನಾ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ ಜಡದ ಪ್ರಾಣಗತಿ ಜಡಿದು ಮಿಡಿದು ಸ್ವರಮೇಳ ಕೋದಿದಾಕೆ ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ […]