ಖಲೀಲ್ ಗಿಬ್ರಾನನ ಮರಳು ಮತ್ತು ನೊರೆ : ಗುಚ್ಛ 2
ನಿನ್ನ ಬೇಡುವುದಾದರೂ ಏನು…!? : ‘ಪ್ರಾರ್ಥನೆ’ ಪದ್ಯದ ವಾಚನ
ಪ್ರೇಮ ಏನಾದರೂ ಕೊಡುವುದಾದರೆ ಅದು ತನ್ನನ್ನು ಮಾತ್ರ : ಖಲೀಲ್ ಗಿಬ್ರಾನ್
ಮೂಲ : ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ದಾರಿ ನಿಷ್ಠುರ ಆಯ ತಪ್ಪಿದರೆ ಪ್ರಪಾತ, ಆದರೂ ಸನ್ನೆ ಮಾಡಿ ಕರೆದಾಗ ಪ್ರೇಮ ಎದ್ದು ಬಿಡಿ ಸುಮ್ಮನೇ. ಮಿಂಚಿನಂತಿತ್ತು ಅವನ ಧ್ವನಿ. ಅಂಚಿನಲ್ಲಿ ಮುಚ್ಚಿಟ್ಟುಕೊಂಡ ಚೂರಿ ಚುಚ್ಚಬಹುದೇನೋ, ಆದರೂ ರೆಕ್ಕೆ ಬಿಚ್ಚಿ ಕರೆದಾಗ ಅಪ್ಪಿಕೊಂಡುಬಿಡಿ ಸುಮ್ಮನೇ. ಉತ್ತರ ಧ್ರುವದ ಗಾಳಿ ಹೂವಿನ ತೋಟವ ಉಧ್ವಸ್ತಗೊಳಿಸುವಂತೆ ಕೊಚ್ಚಿಹಾಕಿಬಿಡಬಹುದು ಈ ಪ್ರೇಮ ಪ್ರವಾಹ ನಿಮ್ಮ ಕನಸುಗಳನ್ನು . ಕಿರೀಟ ತೊಡಿಸಿದ ವೇಗದಲ್ಲೇ ಹುತಾತ್ಮನ ಪಟ್ಟವನ್ನೂ ದಯಮಾಡಿ ದಯಪಾಲಿಸಬಲ್ಲದು. […]
ಸ್ವಾತಂತ್ರ್ಯದ ಕುರಿತು ಖಲೀಲ್ ಗಿಬ್ರಾನ್ : ‘ಪ್ರವಾದಿ’ ಪದ್ಯ
ಜನಗಳ ಸ್ವಂತ ಸ್ವಾತಂತ್ರ್ಯದಲ್ಲಿ ದಬ್ಬಾಳಿಕೆ ಇರದಿದ್ದರೆ, ಮತ್ತು ಸ್ವಾಭಿಮಾನದಲ್ಲಿ ಸಂಕೋಚ ಇರದೇ ಹೋದರೆ, ನಿರಂಕುಶನೊಬ್ಬ ಸರ್ವ ಸ್ವತಂತ್ರರನ್ವೂ, ಸ್ವಾಭಿಮಾನಿಗಳನ್ನೂ ಆಳುವುದು ಹೇಗೆ ಸಾಧ್ಯ ? ~ ಖಲೀಲ್ ಗಿಬ್ರಾನ್ | ಅನುವಾದ : ಚಿದಂಬರ ನರೇಂದ್ರ ತನ್ನ ಕುತ್ತಿಗೆಗೆ ಕತ್ತಿ ಹಿಡಿದ ಕ್ರೂರಿಯನ್ನು ಗುಲಾಮನೊಬ್ಬ ದೀನನಾಗಿ ಆರಾಧಿಸುತ್ತಿರುವಾಗಲೂ ; ನಗರದ ಹೆಬ್ಬಾಗಿಲ ಬಳಿ, ಮನೆಯೊಳಗೆ ಬೆಂಕಿಗೂಡಿನ ಸುತ್ತ ನೀವು ದೀರ್ಘದಂಡ ಹಾಕಿ ಸ್ವಾತಂತ್ರ್ಯವನ್ನು ಆರಾಧಿಸುವುದನ್ನ ನಾನು ನೋಡಿದ್ದೇನೆ. ಹೌದು, ದೇವಾಲಯದ ಅಂಗಳದಲ್ಲಿ ಮತ್ತು ಕೋಟೆ ಕೊತ್ತಲಗಳ ನೆರಳಲ್ಲಿ, ನಿಮ್ಮೊಳಗಿನ ಅತ್ಯಂತ ಸ್ವಾತಂತ್ರ್ಯಪ್ರಿಯ ಜನ ತಮ್ಮ ಸ್ವಾತಂತ್ರ್ಯವನ್ನು […]
ಕುರುಡು ಖಗೋಳ ಯಾತ್ರಿ ಜೊತೆ ಮಾತುಕತೆ : ಒಂದು ಗಿಬ್ರಾನ್ ಪದ್ಯ
ದೇವಸ್ಥಾನದ ನೆರಳಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ ನಮ್ಮ ಕಣ್ಣಿಗೆ ಬಿದ್ದ. ಅಗೋ ಅಲ್ಲಿ ನೋಡು ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು ಗೆಳೆಯ ಉತ್ಸಾಹದಿಂದ ಕೂಗಿಕೊಂಡ. ಗೆಳೆಯನನ್ನು ಹಿಂದೆ ಬಿಟ್ಟು ನಾನು ಕುರುಡನ ಹತ್ತಿರ ಹೋದೆ, ಬಹಳ ಹೊತ್ತು ನಾವು ಅದು, ಇದು ಮಾತನಾಡಿದೆವು. ಯಾವತ್ತಿನಿಂದ ನಿನಗೆ ಈ ಕುರುಡು? ನಾನು ಹುಟ್ಟು ಕುರುಡ ಸ್ವಾಮಿ ಎಷ್ಟು ಮೋಹಕವಾಗಿದೆ ನಿನ್ನ ಮಾತು ಯಾವ ಜ್ಞಾನದ ಮಾರ್ಗ ನಿನ್ನದು? ನಾನೊಬ್ಬ ಖಗೋಳ ಯಾತ್ರಿ ಆತ, ತನ್ನ ಕೈ ಎದೆ […]
ಗೆಳೆತನದ ಕುರಿತು….. : ಖಲೀಲ್ ಗಿಬ್ರಾನನ ‘ಪ್ರವಾದಿ’
ಚೇತನವನ್ನು ಆಳವಾಗಿಸುವುದರ ಹೊರತಾಗಿ ಬೇರೆ ಯಾವ ಉದ್ದೇಶವೂ ಇರದಿರಲಿ ಗೆಳೆತನಕ್ಕೆ ~ ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ಗೆಳೆಯ, ನಿಮ್ಮ ಸಂತೃಪ್ತಿಯ ಕಾರಣ. ನೀವು ಪ್ರೀತಿಯಿಂದ ಬಿತ್ತುವ, ಕೃತಜ್ಞತೆಯಿಂದ ಕಟಾವು ಮಾಡುವ ನಿಮ್ಮದೇ ಸ್ವಂತ ಹೊಲ ಅವನು. ಹಸಿವಾದಾಗ ಅವನ ಬಳಿಯೇ ಧಾವಿಸುತ್ತೀರಿ ಸಮಾಧಾನಕ್ಕಾಗಿ ಅವನನ್ನೇ ಹುಡುಕುತ್ತೀರಿ ಆದ್ದರಿಂದ ಅವನೇ ನಿಮ್ಮ ಅಡುಗೆ ಒಲೆ, ಅವನೇ ನಿಮ್ಮ ಬೆಂಕಿಗೂಡು. ನಿಮ್ಮ ಗೆಳೆಯ, ನಿಮ್ಮೆದುರು ಮನ ಬಿಚ್ಚಿ ಮಾತಾಡುವಾಗ ನೀವು ಉಹೂಂ ಎನ್ನಲೂ ಹೆದರುವುದಿಲ್ಲ […]
ಖುಷಿ, ಖುಷಿಯಲ್ಲ… ಮುಖವಾಡ ಕಳಚಿದ ನಿಮ್ಮ ದುಃಖ! ~ ಖಲೀಲ್ ಗಿಬ್ರಾನ್
ದುಃಖ ನಿಮ್ಮನ್ನು ಎಷ್ಟು ಆಳವಾಗಿ ಕೊರೆಯುತ್ತದೋ ಅಷ್ಟೇ ಅಗಾಧವಾಗಿ ಆನಂದ ನಿಮ್ಮನ್ನು ತುಂಬಿಕೊಳ್ಳುವುದು ~ ಪ್ರವಾದಿ, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಂತರ ಹೆಣ್ಣು ಮಗಳೊಬ್ಬಳು ಖುಶಿಯ ಬಗ್ಗೆ, ದುಃಖದ ಬಗ್ಗೆ ತನ್ನ ಅನುಮಾನಗಳನ್ನು ಹಂಚಿಕೊಂಡಳು. ಖುಶಿ ಮತ್ತು ದುಃಖದ ಕುರಿತು ಅವನು ಮಾತನಾಡತೊಡಗಿದ. ಖುಶಿ, ಖುಶಿಯಲ್ಲ. ಮುಖವಾಡ ಕಳಚಿದ ನಿಮ್ಮ ದುಃಖ. ಮತ್ತು ತನ್ನಿಂದ ತಾನೇ ತುಂಬಿಕೊಳ್ಳುವ ಬಾವಿ. ನಿಮ್ಮ ನಗು ಚಿಮ್ಮುವ ಈ ಬಾವಿ ಬಹುತೇಕ ತುಂಬಿಕೊಂಡಿರುವುದು ಕಣ್ಣೀರಿನಿಂದಲೇ. ಹೀಗಲ್ಲದೆ ಬೇರೆ ಹೇಗೆ ಸಾಧ್ಯ […]
ದಾಂಪತ್ಯವೊಂದು ದಿವ್ಯ ಅವಕಾಶ : ಖಲೀಲ್ ಗಿಬ್ರಾನ್ | ‘ದ ಪ್ರಾಫೆಟ್’
ಮೂಲ : ದ ಪ್ರಾಫೆಟ್, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಲ್’ಮಿತ್ರ ಮತ್ತೆ ಮಾತಾಡಿದಳು; ದಾಂಪತ್ಯದ ಬಗ್ಗೆ ವಿವರಣೆ ಕೇಳಿದಳು. ಅವ ಸ್ಪಷ್ಟ ದನಿಯಲ್ಲಿ ಮಾತನಾಡತೊಡಗಿದ ; ಕೂಡಿ ಹುಟ್ಟಿದವರು ನೀವು, ಕೂಡಿಯೇ ಬಾಳುವಿರಿ ಕೊನೆಯ ತನಕ. ಬಿಳೀ ರೆಕ್ಕೆಯ ಸಾವಿನ ಹಕ್ಕಿ ನಿಮ್ಮ ಕಾಲವ ಕುಕ್ಕಿ ಚೂರು ಚೂರು ಮಾಡುವಾಗಲೂ ಕೈ ಹಿಡಿದುಕೊಂಡೇ ಇರುವಿರಿ ಕೊನೆಯ ತನಕ. ಹೌದು, ಭಗವಂತ ನೆನಪಿಸಿಕೊಳ್ಳಲೂ ನಿರಾಕರಿಸುವ ನೆನಪುಗಳಲ್ಲಿ ನೀವು ಹತ್ತಿರ, ಒಬ್ಬರಿಗೊಬ್ಬರು. ಆದರೆ ಈ […]
ಗಿಬ್ರಾನ್’ಗೆ ಕಾಯಕ ಕಂಡಿದ್ದು ಹೀಗೆ….: ‘ಪ್ರವಾದಿ’ಯಿಂದ ಒಂದು ಪದ್ಯ
ಮೂಲ : ಖಲೀಲ್ ಗಿಬ್ರಾನ್, ಪ್ರವಾದಿ | ಕನ್ನಡಕ್ಕೆ : ಚಿದಂಬರ ನರೇಂದ್ರ ಮನುಷ್ಯ, ಕಾಯಕಕ್ಕೆ ಮುಂದಾಗುವುದು ಭೂಮಿಯ ಗತಿಯೊಂದಿಗೆ, ಆತ್ಮದೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆ ಹಾಕಲು. ಸೋಮಾರಿಯಾಗುವುದೆಂದರೆ, ಋತುಮಾನಗಳಿಗೆ ಅಪರಿಚಿತನಾದಂತೆ. ಗಂಭೀರವಾಗಿ, ತಲೆ ಎತ್ತಿಕೊಂಡು ಅಪಾರದತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಮೆರವಣಿಗೆಯಿಂದ ಹೊರಗುಳಿದಂತೆ. ಕಾಯಕಕ್ಕಿಳಿದಾಗ ನೀವೊಂದು ಕೊಳಲಿನಂತೆ. ಆಗ ನಿಮ್ಮ ಎದೆಯ ಮೂಲಕ ಹಾಯ್ದು ಹೋಗುವ ಕಾಲದ ಪಿಸುಮಾತು, ಸಂಗೀತವಾಗುತ್ತದೆ. ಕಾಯಕ ಬೇರೇನಲ್ಲ; ಪ್ರೇಮ ಪ್ರತ್ಯಕ್ಷವಾಗುವ ಒಂದು ವಿಧಾನ. ಕಾಯಕದಲ್ಲಿ ಪ್ರೇಮ ಸಾಧ್ಯವಾಗದೇ ಹೋದರೆ, ಜಿಗುಪ್ಸೆ […]