ಗೀತಾಚಾರ್ಯ ಶ್ರೀಕೃಷ್ಣ ಹೇಳಿದ 8 ತಾಮಸ ಗುಣಗಳು

ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ.

ದೈನಂದಿನ ಯುದ್ಧಕ್ಕೆ ಭಗವದ್ಗೀತೆಯ 8 ಪಾಠಗಳು

ಬದುಕೇ ಒಂದು ಯುದ್ಧ. ಯುದ್ಧ ಪ್ರಕ್ರಿಯೆ ಕೂಡಾ ಬದುಕಿನ ಸವಾಲುಗಳಿಗಿಂತ ಬೇರೆಯಲ್ಲ. ಯುದ್ಧಕ್ಕೂ ಬದುಕಿಗೂ ಹೊಂದುವಂಥ ಬೋಧನೆಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅವುಗಳಲ್ಲಿ 8 ಮುಖ್ಯ ಹೇಳಿಕೆಗಳು ಇಲ್ಲಿವೆ…

ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! : | ಸನಾತನ ಸಾಹಿತ್ಯ ~ ಮೂಲಪಾಠಗಳು #27

ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದೂ ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ. ಕಾಯಕ ಸಂಸ್ಕೃತಿಯ ಬಗ್ಗೆ ಹಾಗೂ ದೈವೀ ಸಂಪದ ವರ್ಗದ ಕಾಯಕ ಸಂಸ್ಕೃತಿಯ ಬಗ್ಗೆ ನೆನ್ನೆ ಈ ಅಂಕಣದಲ್ಲಿ ಓದಿದ್ದೀರಿ (ಕೊಂಡಿ: https://aralimara.com/2018/07/17/sanatana26/ ) ಇದನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ನಮ್ಮದಾಗಿಸಿಕೊಳ್ಳಲು ಬೇಕಾದ ನೈತಿಕ ಸ್ಥೈರ್ಯವನ್ನು ರೂಢಿಸಿಕೊಳ್ಳುವುದು ಹೇಗೆ? ಅದಕ್ಕಾಗಿಯೇ ಭಗವದ್ಗೀತೆಯು ಈ […]

ಭಗವದ್ಗೀತೆ; ಅಧ್ಯಾಯ 14 ಮತ್ತು 15 : ಸನಾತನ ಸಾಹಿತ್ಯ ~ ಮೂಲಪಾಠಗಳು #21

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 14 : ಗುಣತ್ರಯ ವಿಭಾಗ ಯೋಗ ಪುರುಷನೊಂದಿಗೆ ಮಿಲನಗೊಂಡು ಸೃಷ್ಟಿಗೆ ಕಾರಣವಾಗುವ ಪ್ರಕೃತಿಯ ಕುರಿತಾಗಿ, ಸೃಷ್ಟಿ ಕ್ರಿಯೆಯ ಕುರಿತಾಗಿ ಹದಿನಾಲ್ಕನೆಯ ಅಧ್ಯಾಯವು ಅಧ್ಯಾಯವು ಚರ್ಚಿಸುತ್ತದೆ. ಪ್ರಕೃತಿಯಿಲ್ಲದೇ ಸೃಷ್ಟಿ ಇಲ್ಲ ಅನ್ನುವುದನ್ನು ಸಾಬೀತುಪಡಿಸುತ್ತಾ ಅದರ ಮಹತ್ವವನ್ನು ಈ ಅಧ್ಯಾಯವು ವಿವರಿಸುತ್ತದೆ. ಜೊತೆಗೆ; ತ್ರಿಗುಣಗಳ  ವಿಶ್ಲೇಷಣೆ […]

ಭಗವದ್ಗೀತೆ : ಸನಾತನ ಸಾಹಿತ್ಯ ~ ಮೂಲಪಾಠಗಳು #13

ಭಗವದ್ಗೀತೆಯು ಜ್ಞಾನ ಸಾಗರವನ್ನೆ ಹುಗಿದಿಟ್ಟುಕೊಂಡ ಮಧು ಪಾತ್ರೆ. ಶ್ರೀಕೃಷ್ಣ ಅತ್ಯಂತ ಸರಳವಾಗಿ, ಕಾವ್ಯಾತ್ಮಕವಾಗಿ ಇದನ್ನು ಬೋಧಿಸುತ್ತಾನೆ. ಆದ್ದರಿಂದಲೇ ಇದು “ಗೀತೆ”. ಅನುಷ್ಟುಪ್ ಛಂದಸ್ಸಿನಲ್ಲಿ ಸಲಿಲದಂತೆ ಸಾಗುವ ಗೀತೆಯ ಪ್ರತಿ ಶ್ಲೋಕದಲ್ಲೂ 32 ಪದಗಳಿವೆ. ಕೆಲವು ಶ್ಲೋಕಗಳಲ್ಲಿ ತ್ರಿಷ್ಟುಪ್ ಛಂದಸ್ಸನ್ನು ಬಳಸಲಾಗಿದೆ. 700 ಶ್ಲೋಕಗಳುಳ್ಳ ಭಗವದ್ಗೀತೆಯು 18 ಅಧ್ಯಾಯಗಳಲ್ಲಿ ನಿರೂಪಣೆಗೊಂಡಿದೆ. ಭಗವದ್ಗೀತೆ ತನ್ನದೇ ಸಂಬಂಧಿಗಳೊಡನೆ ಯುದ್ಧ ಮಾಡಲಾಗದ ರಾಜಕುಮಾರನೊಬ್ಬನನ್ನು ಹುರಿದುಂಬಿಸುವ ಸಂವಾದವಷ್ಟೇ ಅಲ್ಲ. ಈ ನೆವದಲ್ಲಿ ಸೃಷ್ಟಿಯ ಆದ್ಯಂತಗಳನ್ನೂ ನಡುವಿನ ವಿದ್ಯಮಾನಗಳನ್ನೂ ವೈಜ್ಞಾನಿಕವಾಗಿ ವಿವರಿಸುತ್ತಾ ಮಾನವ ಈ ಅನಂತ ಶಕ್ತಿಯ […]