“ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ ಒಂದು ದೃಷ್ಟಾಂತ. ಒಂದೂರಿನಲ್ಲಿ ಎರಡು ವರ್ಷಗಳಿಂದ ಮಳೆಯೇ ಆಗಿರುವುದಿಲ್ಲ. ಮುಖಂಡರೆಲ್ಲ ಸೇರಿಕೊಂಡು ಮಹಾಯಾಗವನ್ನು ಆಯೋಜಿಸುತ್ತಾರೆ. ಪೂರ್ಣಾಹುತಿಯ ದಿನ ವರ್ಷಧಾರೆ ಖಚಿತ ಎಂದು ಪುರೋಹಿತರು ಘೋಷಿಸುತ್ತಾರೆ. ಅದರಂತೆ ಒಂದು ವಾರ ಅವಧಿಯ ಮಹಾಯಾಗ ನಡೆಯುತ್ತದೆ. ಪ್ರತಿಯೊಬ್ಬರಲ್ಲೂ ಮಳೆಯ ನಿರೀಕ್ಷೆ, ಪೂರ್ಣಾಹುತಿಯ ದಿನದ ಸಂಭವನೀಯತೆಯ ಬಗ್ಗೆ ಮಾತು. ಪುರೋಹಿತರ ಮಾತಿಗೆ ಯಾರೊಬ್ಬರದೂ […]