ನೀವೂ ಗುಡಾಕೇಶರಾಗಿ! : ನೆಮ್ಮದಿಯ ನಿದ್ರಿಗೆ ಈ 5 ಸೂತ್ರಗಳನ್ನು ಅನುಸರಿಸಿ…

ನಾವು ತೀರಾ ನಿದ್ರೆಯನ್ನು ಹೀಗೆ ನಿಯಂತ್ರಿಸಲಾಗದೆ ಇದ್ದರೂ, ಕೊನೆ ಪಕ್ಷ ರಾತ್ರಿಗಳಲ್ಲಿ ಸುಖನಿದ್ರೆಯನ್ನು ಹೊಂದುವ ಪ್ರಯತ್ನ ಮಾಡಬಹುದು, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ 5 ಉಪಾಯಗಳನ್ನು ಅನುಸರಿಸಿ ನೋಡಿ. ಜೀವ ಕೋಟಿಗಳಲ್ಲಿ ನಿದ್ರೆಗೆ ಪರದಾಡುವುದು ಮನುಷ್ಯ ಜೀವಿ ಮಾತ್ರ. ಇದನ್ನು ಮನುಷ್ಯರ ‘ಆಲೋಚಿಸುವ ಸಾಮರ್ಥ್ಯ’ದ ಸೈಡ್ ಎಫೆಕ್ಟ್ ಅನ್ನಲಡ್ಡಿಯಿಲ್ಲ. ಕೆಲವರು ಎಲ್ಲೆಂದರಲ್ಲಿ ಕಣ್ಮುಚ್ಚಿದ ಕೂಡಲೇ ನಿದ್ರೆಗೆ ಜಾರಿದರೆ, ನಿದ್ರೆಗಾಗಿ ನಾನಾ ಬಗೆಯ ಕಸರತ್ತುಗಳನ್ನೂ ಔಷಧಗಳನ್ನೂ ಮಾಡಿ ದಣಿಯುವವರ ಸಂಖ್ಯೆ ಬಹಳವಿದೆ. ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. […]