ನಾನೇನೂ ಕಳೆದುಹೋಗಿಲ್ಲ, ಆದ್ರೆ… : ಅರಳಿಮರ Comics Quotes

ನಾನೇನೂ ಕಳೆದುಹೋಗಿಲ್ಲ. ನಾನೆಲ್ಲಿದೀನಿ ಅಂತ ನಂಗೆ ಗೊತ್ತಿದೆ. ಆದ್ರೆ… ನಾನು ಕಳೆದುಹೋಗಿದ್ದಕ್ಕೇ ಈಗ ಇಲ್ಲಿದೀನಾ…!? ಅದು ಮಾತ್ರ ಗೊತ್ತಿಲ್ಲ!! ~ Winnie – the Pooh  ಊರಿಗೊಂದು ದಾರಿ ಆದ್ರೆ, ಜಾಣನಿಗೇ ಒಂದು ದಾರಿ ಅನ್ನುವ ಮಾತಿದೆ. ಜನಸಾಮಾನ್ಯರಿಗೆ ಜಾಣರ ದಾರಿಗಳು ಯಾವತ್ತೂ ತಪ್ಪಾಗಿಯೇ ಕಾಣುತ್ತವೆ. ವಿಚಿತ್ರವಾಗಿಯೂ ವಿಲಕ್ಷಣವಾಗಿಯೂ ತೋರುತ್ತವೆ. ಕೊರೆದಿಟ್ಟ ದಾರಿಗಳಲ್ಲಿ ನಡೆದು, ಗುರುತು ಮಾಡಿಟ್ಟ ಗುರಿಯನ್ನಷ್ಟೆ ಸೇರುವ ಈ ಜನಸಾಮಾನ್ಯರು, ತಮ್ಮದೇ ದಾರಿ ಮಾಡಿಕೊಂಡು ನಡೆಯುವ ಜಾಣರನ್ನು ಜೀವನ ಯಾನದಲ್ಲಿ “ಕಳೆದುಹೋದವರು” ಎಂದೇ ಭಾವಿಸುತ್ತಾರೆ.  […]

ಗೆಲ್ಲುವುದಕ್ಕಿಂತ ಸೋಲದೆ ಇರುವುದು ಮುಖ್ಯ : ಅರಳಿಮರ POSTER

ಗೆಲ್ಲುವುದು ಮುಖ್ಯವೋ? ಸೋಲುವುದು ಮುಖ್ಯವೋ? ಅವೆರಡೂ ಒಂದೆಯೋ ಅಥವಾ ಬೇರೆಬೇರೆಯೋ…!? ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ನಮ್ಮನ್ನು ಹೆಚ್ಚು ಅರ್ಥಪೂರ್ಣವಾಗಿ ಗುರಿ ತಲುಪಿಸುತ್ತದೆ.  ಆತ್ಮವಿಶ್ವಾಸ ಕೆಲವೊಮ್ಮೆ ಅತಿರೇಕವಾಗಿ ಅಹಂಕಾರಕ್ಕೆ ಪರಿವರ್ತನೆಗೊಳ್ಳುವ ಅಪಾಯವಿರುತ್ತದೆ. ಗೆಲ್ಲಬೇಕು, ಗೆದ್ದೇ ಗೆಲ್ಲುವ ಅನ್ನುವ ನಿರ್ಣಯಗಳು ಇತರ ಸಂಗತಿಗಳನ್ನು ಕಡೆಗಣಿಸುವಂತೆ ಮಾಡಬಹುದು. ಅಥವಾ ಗುರಿಯೊಂದನ್ನೆ ಗಮನದಲ್ಲಿಟ್ಟುಕೊಂಡು ದಾರಿ ತಪ್ಪಲೂಬಹುದು. ಆದರೆ, ಸೋಲಬಾರದು ಅನ್ನುವ ಪ್ರಜ್ಞೆ ಅಥವಾ ಎಚ್ಚರ ಹಾಗಲ್ಲ. ಅದು ನಮ್ಮಿಂದ ತಪ್ಪುಗಳಾದಂತೆ ರಕ್ಷಿಸುತ್ತದೆ. ಸರಿಯಾದ ಹಾದಿಯಲ್ಲಿ ನಡೆಸುತ್ತದೆ. […]

ಅಧ್ಯಾತ್ಮ ಡೈರಿ : ನಾವು ನಡೆದ ದಾರಿಗಳ ಮೊತ್ತವೇ ನಮ್ಮ ಗುರುತು!

ನಮಗೆ ನಾವು ಎಲ್ಲಿ ತಲುಪುತ್ತೀವಿ ಅಂತ ಗೊತ್ತಿರೋದಿಲ್ಲ. ಯಾವ ದಾರಿಯಲ್ಲಿ ಹೋಗಬೇಕಂತಲೂ ಗೊತ್ತಿರೋದಿಲ್ಲ. ಹಾಗಂತ ನಿಂತಲ್ಲೇ ಇದ್ದುಬಿಟ್ಟರೆ ಅಲ್ಲೇ ಮುಗಿದುಹೋಗಬೇಕಾಗುತ್ತೆ. ಆದ್ದರಿಂದ ಯಾವುದಾದರೊಂದು ಗುರಿ ತಲುಪಲಿಕ್ಕೆ, ಏನಾದರೊಂದು ಸಾಧನೆ ಮಾಡಲಿಕ್ಕೆ ನಡಿಗೆ ನಿಲ್ಲಿಸದಿರುವುದೊಂದೇ ಉಪಾಯ ~ ಅಲಾವಿಕಾ “ನೀನು ಯಾರು?” ಕಂಬಳಿ ಹುಳು ಆಲೀಸ್’ಳನ್ನು ಕೇಳಿತು. ಸಂಭಾಷಣೆ ಇಂಥದೊಂದು ಪ್ರಶ್ನೆಯಿಂದ ಶುರುವಾದರೆ ಮುಂದುವರಿಯೋದು ಹೇಗೆ? ಆಲಿಸ್ ಗಲಿಬಿಲಿಯಾದಳು. ಸಾವರಿಸಿಕೊಂಡು, “ನಾನು ಯಾರು ಅಂದ್ರೆ…. ಇವತ್ತು ಬೆಳಗ್ಗೆ ಏಳುವಾಗ ನಾನು ಏನಾಗಿದ್ದೆ ಅನ್ನೋದು ನನಗೆ ಗೊತ್ತಿದೆ ಸರ್. ಆದ್ರೆ, […]