ಶಿಷ್ಯನು ಸಿದ್ಧನಾದಾಗ ಗುರುವು ಕಾಣಿಸಿಕೊಳ್ಳುತ್ತಾನೆ… : ಬೆಳಗಿನ ಹೊಳಹು
ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು… ~ ಸಾ.ಮೈತ್ರೇಯಿ
ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು : ಝೆನ್ ಕಥೆ
(ಸಂಗ್ರಹ ಮತ್ತು ನಿರೂಪಣೆ : ಚಿದಂಬರ ನರೇಂದ್ರ)
ಸದ್ಗುರುವೆಂದರೆ ಯಾರು? ಯಾವ ಲಿಂಗ ಕುಲ ಜಾತಿಗೆ ಸೇರಿದವರು?
ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.
ಮಹಡಿಯಲ್ಲಿ ಗುರು : ಸೂಫಿ corner
ಗುರುವಿನ ಮಮತೆ ಬಗ್ಗೆ ಹದಿನೇಳು ಸಲ ಮೂಗು ಮುರಿದುಕೊಂಡ ಹಫೀಜ್ ಹೇಳೋದು ಕೇಳಿ!
ನಾರಾಯಣ ‘ಗುರು ಮಾರ್ಗ’ : ಕ್ರಾಂತಿಕಾರಿ ಸಂತನ ಜೀವನಗಾಥೆ
ಇಂದು (ಸೆಪ್ಟೆಂಬರ್ 2) ಶ್ರೀ ನಾರಾಯಣ ಗುರು ಜಯಂತಿ
ಗುರುವಾರದ ವಿಶೇಷ : ಜ್ಞಾನಪ್ರಾಪ್ತಿಗಾಗಿ ಗುರು ಸ್ತುತಿ ~ ನಿತ್ಯಪಾಠ
ಗುರುಕೃಪೆ ಇದ್ದರೆ ಅಸಾಧ್ಯ ಅನ್ನುವ ಪದವೇ ಇರುವುದಿಲ್ಲ. ಆಧ್ಯಾತ್ಮ ಮಾತ್ರವಲ್ಲ, ಲೌಕಿಕ ವಿದ್ಯೆಗೂ ಗುರುವೇ ಆಧಾರ. ಗುರುವಾರ, ಗುರು ವಂದನೆಗೆ ಮೀಸಲಿಟ್ಟ ವಾರ. ನಿತ್ಯಪಠಣದೊಡನೆ, ಈ ದಿನ ಗುರು ಸ್ಮರಣೆ, ಗುರು ಸ್ತುತಿ ಮಾಡುವುದು ವಿಶೇಷ. ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||೧|| ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ | ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ […]
ಯುವ ಸನ್ಯಾಸಿಯನ್ನು ಕಾಡುತ್ತಿದ್ದ ಜೇಡ ಯಾವುದು? : ಝೆನ್ ಕಥೆ
ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ ತನ್ನ ಗುರುವಿನ ಮುಂದೆ ತನ್ನ ಸಂದಿಗ್ಧತೆಯನ್ನು ತೋಡಿಕೊಂಡ “ಮಾಸ್ಟರ್, ಧ್ಯಾನಕ್ಕೆ ಕೂರುವಾಗ ಒಂದು ಚೂರಿ ಇಟ್ಟುಕೊಳ್ಳುತ್ತೇನೆ, ಈ ಸಲ ಬರಲಿ ಆ ಜೇಡ, ಮುಗಿಸಿಬಿಡುತ್ತೇನೆ” ಎಂದ. ಒಂದು ನಿಮಿಷ ಧ್ಯಾನಿಸಿ, ಗುರುಗಳು ಉತ್ತರಿಸಿದರು, “ಬೇಡ, ಚೂರಿ ಬೇಡ, ಬದಲಾಗಿ ಒಂದು ಸುಣ್ಣದ ಕಡ್ಡಿ ಇಟ್ಟುಕೊ, ಜೇಡ ಬಂದಾಗ ಅದರ […]
ಗುರು – ಶಿಷ್ಯರ ನಡುವಣ ವ್ಯತ್ಯಾಸವೇನು? : ಸಾಇಲ್ ಪ್ರಶ್ನೆಗೆ ರಾ-ಉಮ್ ಉತ್ತರ
~ ಯಾದಿರಾ ವಾ-ಐನ್-ಸಾಇಲ್ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ ಪಾನೀಯ ಧ್ಯಾನದ ಹೊತ್ತು ಇಲ್ಲವೇ ಬೆಳಗ್ಗಿನ ಕಲಿಕೆಯ ಸಮಯ ಅಥವಾ ಎಲ್ಲಾ ಶಿಷ್ಯರೂ ಒಟ್ಟಾಗಿರುವ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಅವನ ಬಾಯಿಂದ ಹೊರಬರುತ್ತಿದ್ದವು. ಈ ಪ್ರಶ್ನೆಗಳಿಗೆ ರಾ-ಉತ್ತರಿಸುತ್ತಾಳೆ ಎಂಬ ಖಾತರಿಯೇನೂ ಇರಲಿಲ್ಲ. ಆದರೆ ಆಗಾಗ ಇಂಥ ಪ್ರಶ್ನೆಗಳನ್ನು ಅವನಂತೂ ಕೇಳುತ್ತಿರುತ್ತಿದ್ದ. ಇಂಥದ್ದೇ ಒಂದು ಸಂದರ್ಭದಲ್ಲಿ ಅವನು ಕೇಳಿದ ಪ್ರಶ್ನೆ […]
ಗುರು ಎಂಬ ಪರಿಕಲ್ಪನೆ ಶಿಷ್ಯನೆಂಬ ಪರಿಕಲ್ಪನೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ….
ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು ಶೋಧಿಸಬೇಕಿರುವುದು ಹಿಂದೆಂದಿಗಿಂತಂಲೂ ಹೆಚ್ಚು ಅಗತ್ಯ ~ ಅಚಿಂತ್ಯ ಚೈತನ್ಯ | ಇಂದು ಗುರುಪೂರ್ಣಿಮೆ (ಜುಲೈ 16) ಗುರುವನ್ನು ನೆನಪಿಸಿಕೊಳ್ಳುವ ಕ್ರಿಯೆಯೊಂದು ನಾಗರಿಕತೆಯಷ್ಟೇ ಹಳೆಯದಾದುದು. ‘ವಂಶಋಷಿಭ್ಯೋ ಗುರುಭ್ಯೋ’ ಎಂದು ಪ್ರತೀ ಮುಂಜಾನೆಯೂ ವಂಶಾವಳಿಯಲ್ಲಿರುವ ಗುರುಗಳನ್ನೆಲ್ಲಾ ಸ್ತುತಿಸಲಾಗುತ್ತದೆ. ಬೃಹದಾರಣ್ಯಕೋಪನಿಷತ್ತಿನ ಐದನೇ ಅಧ್ಯಾಯದ ಆರನೇ ಬ್ರಾಹ್ಮಣದಲ್ಲಿ ಪೌತಿಮಾಷಿಯ ಪುತ್ರನಿಂದ ಆರಂಭಗೊಂಡು ಆತ್ರೇಯನವರೆಗೂ ಆತ್ರೇಯನಿಂದ ಆಸುರಿಯವರೆಗೂ ವಿಲೋಮವಾಗಿ ಸಾಗುವ […]