ಆಗೋ ಗುರುವಿನ ಗುಲಾಮ : ಕೊಳ್ಳೂರು ಹುಸನಾ ಸಾಹೇಬರ ತತ್ತ್ವಪದ

ಆರು ಗುಣ ಬಿಡುವೊ ಅವ ಗುಲಾಮ ಆಗೋ ಗುರುವಿನ ಗುಲಾಮ ||ಪ|| ಮೋಹಕ್ಕ ತಿಳಿದಿಲ್ಲ ಮರಮ ಮದವೆಂಬುದು ಕಟ್ಟ ಹರಾಮ ವಂಚೆರ ಆಡತಾವ ವರಮ ಆಗೋ ಗುರುವಿನ ಗುಲಾಮ ||1|| ನೋಡಿದರ ನೀಚೆಂಬ ಧರಮ ಉಚ್ಚುವೆನು ಬೆನ್ನಿನ ಚರಮ ನಿಂದ ನೀನೆ ಕಾಯ್ದಕೊ ಭರಮ ಆಗೋ ಗುರುವಿನ ಗುಲಾಮ ||2|| ಅಲ್ಲಂದರ ಯಾತರ ಜಲಮ ಗುರುವಿಲ್ದೆ ಹತ್ತಲಿಲ್ಲ ಪಲಮ ಹುಸನಾ ಹೇಳ್ಯಾನ ಹೊಸ ಕಲಮ ಆಗೋ ಗುರುವಿನ ಗುಲಾಮ ||3|| (ಆಕರ ಕೃಪೆ : ಜನಪ್ರಿಯ ತತ್ವಪದ […]

ಗುಲಾಮ ಮತ್ತು ಮರಣ ದೇವತೆ : ಸೂಫಿ ಹೇಳಿದ ಕಥೆ

ಬಾಗ್ದಾದಿನಲ್ಲಿ, ಒಮ್ಮೆ ಒಬ್ಬ ಗುಲಾಮ ಯಜಮಾನಲ್ಲಿಗೆ ಓಡೋಡಿ ಬಂದ. ಬಂದವನೇ “ಮಾಲಿಕ್! ದಯವಿಟ್ಟು ನಂಗೊಂದು ಕುದುರೆ ಕೊಡಿ. ನಿಮ್ಮ ಲಾಯದಲ್ಲಿ ಅತಿ ವೇಗವಾಗಿ ಓಡುವ ಕುದುರೆಯನ್ನು ಇದೊಂದು ದಿನದ ಮಟ್ಟಿಗೆ ದಯಪಾಲಿಸಿ” ಎಂದು ಕೈ ಕೈ ಮುಗಿದು ಬೇಡತೊಡಗಿದ. ಸರಂಜಾಮು ತರಲು ಮಾರುಕಟ್ಟೆಗೆ ಹೋದವನು ಖಾಲಿ ಕೈಲಿ ಮರಳಿರೋದೂ ಅಲ್ಲದೆ, ಕುದುರೆ ಕೊಡಿ ಅಂತ ಕೇಳ್ತಿದ್ದಾನಲ್ಲ! ಮಾಲಿಕನಿಗೆ ಆಶ್ಚರ್ಯ. “ಕುದುರೆ ತಗೊಂಡು ನೀನೇನು ಮಾಡ್ತೀಯ? ಅದರಲ್ಲೂ ಅತಿ ಹೆಚ್ಚು ವೇಗವಾಗಿ ಓಡುವ ಕುದುರೆ!” ಅವನು ಕೇಳಿದ. “ಮಾಲಿಕ್… […]

ನೀನು ಏನಾಗಿದ್ದೀಯೋ ಅದುವೇ ಜಗತ್ತಿಗೆ ನಿನ್ನ ಕೊಡುಗೆಯಾಗಿರುತ್ತದೆ

ಗುಲಾಮರು ಮತ್ತೊಬ್ಬ ಗುಲಾಮನನ್ನು ಹುಟ್ಟುಹಾಕಬಲ್ಲರಷ್ಟೆ. ಸ್ವತಂತ್ರ ವ್ಯಕ್ತಿಯು ಸ್ವಾತಂತ್ರ್ಯವನ್ನು ಹುಟ್ಟುಹಾಕುವನು. ಜ್ಞಾನಿಯು ನಿಮ್ಮನ್ನೂ ಅರಿವಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಾನೆ. ಯಾರು ಸ್ವತಃ ಬಂಧಿತರಾಗಿರುತ್ತಾರೋ ಅವರು ನಿಮ್ಮನ್ನೂ ಸಿಲುಕಿಸಲು ಪ್ರಯತ್ನಿಸುತ್ತಾರೆ. ನಾನು ಏನಾಗಿದ್ದೀನೋ ಜಗತ್ತಿಗೆ ನನ್ನ ಕೊಡುಗೆ ಅದೇ ಆಗಿರುತ್ತದೆ. ನಾನು ಏನಲ್ಲವೋ ಅದನ್ನು ಹೇಗೆ ತಾನೆ ಜಗತ್ತಿಗೆ ಕೊಡಲು ಸಾಧ್ಯ? ನನ್ನ ಬಳಿ ಏನಿಲ್ಲವೋ ಅದನ್ನು ನಾನು ಹೇಗೆ ತಾನೆ ಕೊಡಬಲ್ಲೆ!? ~ Whosoever  ನಾವು ಬೇಸರದಲ್ಲಿ ಮುಳುಗಿದ್ದೇವೆ. ನಮಗೆ ವಿಪರೀತ ಬೋರ್ ಹೊಡೆಯುತ್ತದೆ. ಬೇಸರವನ್ನೆ ಹಾಸು […]