ಸೋಲುವುದು ಸುಲಭವಲ್ಲ, ಮೊದಲು ಅದನ್ನು ಕಲಿಯೋಣ : ಅಧ್ಯಾತ್ಮ ಡೈರಿ

ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ ~ ಅಲಾವಿಕಾ ನಾವು ಓಡುತ್ತಲೇ ಇದ್ದೇವೆ. ಎಂಥಾ ಧಾವಂತ! ನಮ್ಮ ಬದುಕು ಒಂದು ಓಟದ ಸ್ಪರ್ಧೆಯೇನೋ ಅನ್ನುವಂತೆ, ಸೋತರೆ ಸತ್ತೇಹೋಗುವೆವು ಅನ್ನುವಂತೆ. ನಾವು ಗೆಲುವಿನ ಹಪಾಹಪಿಗೆ ಅದೆಷ್ಟು ಒಗ್ಗಿಕೊಂಡಿದ್ದೇವೆ ಅಂದರೆ, ಚಿಕ್ಕ ಸೋಲು ಕೂಡ ನಮ್ಮನ್ನು ಹಿಂಡಿಹಾಕಿಬಿಡುತ್ತದೆ. ಅದರಿಂದ ಪಾಠ ಕಲಿತು ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಬದಲು ನಾವು ಆತ್ಮವಿಶ್ವಾಸ ಕಳೆದುಕೊಳ್ಳುವುದೇ ಹೆಚ್ಚು. ಅಲ್ಲಿಂದ ಮುಂದೆ, ಸೋಲಿನ […]

ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು

ಸೋಲು ಮತ್ತು ಗೆಲುವುಗಳು ಸಂದರ್ಭಾನುಸಾರ ಅರ್ಥ ಪಡೆಯುತ್ತವೆ…. ನಾವು ಏನನ್ನು ಗೆದ್ದೆವು, ಏನನ್ನು ಸೋತೆವು ಅನ್ನುವುದು ಕೂಡಾ ಮುಖ್ಯವಾಗುತ್ತದೆ.  ಕೆಲವು ಗೆಲುಗಳು ಮತ್ತೊಂದು ಸೋಲಿನ ಕಾರಣದಿಂದ ಮೌಲ್ಯ ಕಳೆದುಕೊಳ್ಳುವುದುಂಟು. ಹಾಗೆಯೇ ಕೆಲವು ಸೋಲುಗಳು ಮತ್ತೊಂದರ ಗೆಲುವಿನ ಕಾರಣದಿಂದ ಸಾರ್ಥಕಗೊಳ್ಳುವುದೂ ಉಂಟು.  ಉದಾಹರಣೆಗೆ ಪ್ರೇಮದಲ್ಲಿ, ಸ್ನೇಹದಲ್ಲಿ ನಾವು ಸೋತರಷ್ಟೆ ಗೆಲ್ಲುವೆವು. ಭಗವಂತನೆದುರು ಶರಣಾದರಷ್ಟೆ ವರದಾನದ ವಿಜಯಮಾಲೆ ನಮ್ಮನ್ನು ಅಲಂಕರಿಸುವುದು. ಹಾಗೆಯೇ, ಯುದ್ಧದಲ್ಲಿ ಗೆದ್ದರೂ ಸಾವುಗಳು, ಆಸ್ತಿ – ಪಾಸ್ತಿ ನಷ್ಟಗಳು ಸೋಲಿಗಿಂತ ಕಡಿಮೆಯೇನಲ್ಲ.  ಸೋಲು ಗೆಲುವುಗಳ ವಿಷಯ ಬಂದಾಗ […]

ಗೆಲುವು : ತಾವೋ ಧ್ಯಾನ ~ 20

ಸ್ವಂತದ ಕೊರತೆಗಳನ್ನು ಕೊಂದುಕೊಂಡಾಗಲೇ ಅವನ ನಿಜವಾದ ಗೆಲುವು. ಆದ್ದರಿಂದಲೇ ಹಲವಾರು ಧರ್ಮಗಳು ತಮ್ಮ ಪುರಾಣಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಯೋಧನೊಬ್ಬನನ್ನು ನಾಯಕನಂತೆ ಬಿಂಬಿಸುತ್ತವೆ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಯೋಧನಾಗಲು ಶಿಸ್ತು, ಧೈರ್ಯ ಮತ್ತು ಸತತ ಪ್ರಯತ್ನ ಅತ್ಯವಶ್ಯ. ಯೋಧನಾಗುವುದೆಂದರೆ ಕೊಲೆಗಾರನಾಗುವುದಲ್ಲ. ಜನ ಸಾಮಾನ್ಯರು ಯೋಧನಾಗುವುದೆಂದರೆ ಹಿಂಸೆಯ ದಾರಿಯನ್ನು ತುಳಿಯುವುದು ಎಂದು ತಪ್ಪು ತಿಳಿದುಕೊಂಡು ಸೈನಿಕ ತರಬೇತಿಯ ಅತ್ಯುತ್ತಮ ಅಂಶಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ನಿಜವಾದ ಯೋಧ ಕ್ರೂರಿಯಲ್ಲ ಆತ ವೈಚಾರಿಕತೆಯ, ಸಿದ್ಧಾಂತಗಳ ಮತ್ತು ಆತ್ಮ ಗೌರವದ […]

ಸೋಲುವುದು ಸಹಜ, ಮಗನೇ! : ಹರೆಯದ ಹುಡುಗರಿಗೊಂದು ಪತ್ರ

ಮಗನೇ, ಓಡಿಹೋಗುವುದರಿಂದ, ಕಾಲೇಜು ತೊರೆಯುವುದರಿಂದ, ಹಲ್ಲುಕಚ್ಚಿ ಸಹಿಸುವುದರಿಂದೆಲ್ಲ ಏನೂ ಸಾಧನೆಯಾಗದು. ನಿನ್ನ ಪ್ರಯಾಣವನ್ನು ನೀನು ಮಾಡಲೇಬೇಕು. ಆದರೆ, ಎಲ್ಲಿಗೆ ಹೋಗಬೇಕೆಂಬುದನ್ನೇ ಅರಿತುಕೊಳ್ಳದೆ ಪ್ರಯಾಣವನ್ನು ಹೇಗೆ ಆರಂಭಿಸುತ್ತೀಯ? ~ ಚೈತನ್ಯ ಸೋಲುವುದು ಸಹಜ, ಮಗನೇ! ನಿನ್ನ ವಯಸ್ಸಿನಲ್ಲಿ ನಾವೂ ಸಾಹಸಗಳನ್ನು ಮಾಡಲು ಹೋಗಿ ಸೋತಿದ್ದೆವು.  ಸುಮ್ಮನಿದ್ದೂ ಸೋತಿದ್ದೆವು. ಏಕಾಗ್ರತೆ ಸಾಧಿಸುವಲ್ಲಿ ಸೋತಿದ್ದೆವು. ಪ್ರೇಮವನ್ನು ಪಡೆಯುವಲ್ಲಿ ಸೋತಿದ್ದೆವು. ಗಮನ ಸೆಳೆಯುವಲ್ಲಿ ಸೋತಿದ್ದೆವು. ನಮಗೇನು ಬೇಕು ಅನ್ನುವ ಸ್ಪಷ್ಟತೆ ತಂದುಕೊಳ್ಳಲಿಕ್ಕೂ ಸೋತಿದ್ದೆವು. ಅಪ್ಪ – ಅಮ್ಮನನ್ನು ಖುಷಿಯಾಗಿಡಲು ಸೋತಿದ್ದೆವು. ಆಟದಲ್ಲಿ ಸೋತಿದ್ದೆವು, […]

ಗೆಲ್ಲುವುದಕ್ಕಿಂತ ಸೋಲದೆ ಇರುವುದು ಮುಖ್ಯ : ಅರಳಿಮರ POSTER

ಗೆಲ್ಲುವುದು ಮುಖ್ಯವೋ? ಸೋಲುವುದು ಮುಖ್ಯವೋ? ಅವೆರಡೂ ಒಂದೆಯೋ ಅಥವಾ ಬೇರೆಬೇರೆಯೋ…!? ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ನಮ್ಮನ್ನು ಹೆಚ್ಚು ಅರ್ಥಪೂರ್ಣವಾಗಿ ಗುರಿ ತಲುಪಿಸುತ್ತದೆ.  ಆತ್ಮವಿಶ್ವಾಸ ಕೆಲವೊಮ್ಮೆ ಅತಿರೇಕವಾಗಿ ಅಹಂಕಾರಕ್ಕೆ ಪರಿವರ್ತನೆಗೊಳ್ಳುವ ಅಪಾಯವಿರುತ್ತದೆ. ಗೆಲ್ಲಬೇಕು, ಗೆದ್ದೇ ಗೆಲ್ಲುವ ಅನ್ನುವ ನಿರ್ಣಯಗಳು ಇತರ ಸಂಗತಿಗಳನ್ನು ಕಡೆಗಣಿಸುವಂತೆ ಮಾಡಬಹುದು. ಅಥವಾ ಗುರಿಯೊಂದನ್ನೆ ಗಮನದಲ್ಲಿಟ್ಟುಕೊಂಡು ದಾರಿ ತಪ್ಪಲೂಬಹುದು. ಆದರೆ, ಸೋಲಬಾರದು ಅನ್ನುವ ಪ್ರಜ್ಞೆ ಅಥವಾ ಎಚ್ಚರ ಹಾಗಲ್ಲ. ಅದು ನಮ್ಮಿಂದ ತಪ್ಪುಗಳಾದಂತೆ ರಕ್ಷಿಸುತ್ತದೆ. ಸರಿಯಾದ ಹಾದಿಯಲ್ಲಿ ನಡೆಸುತ್ತದೆ. […]

ಅಂತರಂಗದ ಗೆಲುವೇ ಗೆಲುವು, ಬಹಿರಂಗದ ಗೆಲುವಲ್ಲ : ಸುಭಾಷಿತ

ಭೇತವ್ಯಂ ನ ತಥಾ ಶತ್ರೋಃ ನಾಗ್ನೇರ್ನಾಹೇರ್ನ ಚಾಶನೇಃ | ಇಂದ್ರಿಯೇಭ್ಯೋ ಯಥಾ ಸ್ವೇಭ್ಯಃ ತೈರಜಸ್ರಂ ಹಿ ಹನ್ಯತೇ || ಅಶ್ವಘೋಷ, ಸೌಂದರನಂದ ಕೃತಿ || ಅರ್ಥ: “ವ್ಯಕ್ತಿಯು ಶತ್ರುವಿಗಾಗಲಿ, ಬೆಂಕಿಗಾಗಲಿ, ಹಾವಿಗಾಗಲಿ, ಸಿಡಿಲಿಗಾಗಲಿ ಅಷ್ಟೇನೂ ಹೆದರಬೇಕಾಗಿಲ್ಲ. ಇವೆಲ್ಲಕ್ಕಿಂತ ಅವನು ಹೆದರಬೇಕಾದದ್ದು ತನ್ನ (ಬಾಹ್ಯ ಹಾಗೂ ಒಳಗಣ) ಇಂದ್ರಿಯಗಳಿಗೆ. ಏಕೆಂದರೆ ಇಂದ್ರಿಯಗಳು ಹಾಗೂ ಅವನ್ನು ತೃಪ್ತಿಪಡಿಸುವ ಅರಿಷಡ್ವರ್ಗಗಳು ಸದಾ ಒಂದಿಲ್ಲೊಂದು ಸಮಸ್ಯೆ ಉಂಟುಮಾಡುತ್ತಲೇ ಇರುತ್ತವೆ. ಪಾಪಕಾರ್ಯಗಳಿಗೆ ಪ್ರಚೋದನೆ ನೀಡುತ್ತಲೇ ಇರುತ್ತವೆ” ಮನುಷ್ಯನ ಶತ್ರುಗಳು ಯಾರು ಅನ್ನುವ ಪ್ರಶ್ನೆಗೆ ಹೊರಗೆಲ್ಲೋ ಉತ್ತರ ಹುಡುಕಬೇಕಿಲ್ಲ. […]

ವಂಚಿಸಿ ಗೆಲ್ಲುವವರು ಬೇಕೇ? ಗೌರವಾನ್ವಿತರನ್ನು ಗೆಲ್ಲಿಸೋಣವೇ?

ಯಾವತ್ತೂ ಪ್ರಾಮಾಣಿಕತೆಗೆ ಗೆಲುವಾಗುವುದು ಅದನ್ನು ಹೊಂದಿರುವ ವ್ಯಕ್ತಿಯ ಕಾರಣದಿಂದ ಅಲ್ಲ. ಅದನ್ನು ಗುರುತಿಸಿ ಮನ್ನಣೆ ನೀಡುವ ಜನರಿಂದಾಗಿ. ಆದ್ದರಿಂದ ಪ್ರಾಮಾಣಿಕರ ಗೆಲುವು ನಮ್ಮ ಗೆಲುವು ಮತ್ತು ಅವರ ಸೋಲು ನಮ್ಮದೇ ಸೋಲು. ವಂಚಕರ ವಿಷಯ ಹಾಗಲ್ಲ. ಅವರ ಗೆಲುವು ನಮ್ಮ ಸೋಲು ಮತ್ತು ಅವರ ಸೋಲು ನಮ್ಮ ಗೆಲುವು…. ಈ ಶಿರೋನಾಮೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ನಾವಿಲ್ಲಿ ಬದುಕಿನ ಸ್ಪರ್ಧೆಯಲ್ಲಿ ವಂಚಿಸಿ ಗೆಲ್ಲುವುದರ ಹಾಗೂ ಪ್ರಾಮಾಣಿಕವಾಗಿದ್ದು, ಗೌರವಯುತವಾಗಿ ಸೋಲುವುದರ ನಡುವಿನ ಆಯ್ಕೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಬೇಕಿದ್ದರೆ, […]

ಆತ್ಮಾವಿಶ್ವಾಸದಿಂದಲೇ ಸಿದ್ಧಿಸುವುದು ಗೆಲುವು

ಎಲ್ಲಿಯವರೆಗೆ ಗೆಲುವನ್ನು ನಾವು ಅನಿವಾರ್ಯ ಎಂದು ಭಾವಿಸುವುದಿಲ್ಲವೋ, ಅದನ್ನು ಜೀವನದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದಕ್ಕಾಗಿ ನಮ್ಮ ಸಂಪೂರ್ಣ ಬದ್ಧತೆ, ಸಾಮರ್ಥ್ಯ, ಕೌಶಲ್ಯಗಳನ್ನು ಧಾರೆ ಎರೆಯುವುದಿಲ್ಲ. ನಮ್ಮ ಆತ್ಮ ವಿಶ್ವಾಸದ ಪ್ರಮಾಣ ಹೆಚ್ಚಿಸಿಕೊಳ್ಳುವುದಿಲ್ಲ. ಯಾವಾಗ ಅದು ಬದುಕಿನ ಪ್ರಶ್ನೆಯಾಗುತ್ತದೋ ಆಗ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಶುರುವಿಡುತ್ತೇವೆ. ಸೋಲು ಮತ್ತು ಗೆಲುವು ಸಾಂದರ್ಭಿಕ ಸತ್ಯಗಳು. ಇವೆರಡೂ ತಾತ್ಕಾಲಿಕ. ಆದರೆ ಈ ಎರಡು ಸಂಗತಿಗಳು ಹಲವು ಆಯಾಮಗಳಲ್ಲಿ ಹಲವು ಪಾಠಗಳನ್ನು ಕಲಿಸುತ್ತವೆ. ಕಲಿಕೆ ಕೇವಲ ಗೆಲುವಿನಲ್ಲಿ ಇರುವುದಿಲ್ಲ. ವಾಸ್ತವದಲ್ಲಿ ಸೋಲುಂಡ […]

ಕನ್’ಫ್ಯೂಶಿಯಸ್ ಹೇಳಿದ್ದು …

“ಯಾವತ್ತಿಗೂ ಬೀಳದೆ ಇರುವುದೇ ನಮ್ಮ ಸಾಧನೆಯಲ್ಲ. ಬಿದ್ದಾಗಲೆಲ್ಲ ಹೇಗೆ ಎದ್ದು ನಿಂತೆವು ಅನ್ನುವುದು ನಮ್ಮ ಸಾಧನೆಯಾಗುತ್ತದೆ” ಅನ್ನುತ್ತಾನೆ ತತ್ತ್ವಜ್ಞಾನಿ ಕನ್’ಫ್ಯೂಷಿಯಸ್.  ನಾವು ಸೋಲಲೇ ಇಲ್ಲ ಅನ್ನುವುದಕ್ಕಿಂತ, ಸೋತಾಗ ಅದನ್ನು ಮೀರಿ ಹೇಗೆ ಬೆಳೆದೆವು, ಹೇಗೆ ಗೆಲುವಿನ ಛಲ ತೊಟ್ಟು ಮುನ್ನಡೆದೆವು ಮತ್ತು ಗೆಲುವು ಸಾಧಿಸಲು ಪ್ರಯತ್ನಿಸಿದೆವು ಅನ್ನುವುದು ಮುಖ್ಯವಾಗುತ್ತದೆ. ಬದುಕಿನ ನೈಜ ಸ್ವಾರಸ್ಯ ಇರುವುದೇ ಇಲ್ಲಿ. ಆದ್ದರಿಂದ ಸೋಲು ಬಂದಾಗ ಕುಗ್ಗದೆ, ಗೆಲುವಿಗೆ ಅತಿಯಾಗಿ ಹಿಗ್ಗದೆ ಮುನ್ನಡೆಯಬೇಕು ಅನ್ನುವುದು ಈ ಮಾತಿನ ವಿಸ್ತರಣೆ.