ಅಧ್ಯಾತ್ಮ ಡೈರಿ : ಉಪ್ಪಿಟ್ಟು ಹೋಟೆಲಿನ ಹುಡುಕಾಟ ಮತ್ತು ವಾರಾಂತ್ಯದ ಗೊಣಗಾಟ

ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ನಾವು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ ವ್ಯವಹಾರ. ಇದೊಂದು ಮಜವಾದ ಸಂಗತಿ. ನಮ್ಮಲ್ಲಿ ಬಹಳಷ್ಟು ಜನ ಹೀಗೆ ಮಾಡುತ್ತೇವೆ. ಕಶ್ಮೀರಕ್ಕೆ ಹೋಗಿ ಇಡ್ಲಿ, ಉಪ್ಪಿಟ್ಟು ಸಿಗುವ ಹೋಟೆಲ್ ಹುಡುಕುತ್ತೇವೆ. ಅಲ್ಲಿನ ಸೌಂದರ್ಯವನ್ನು ಮನಸಾರೆ ಅನುಭವಿಸಿಯೂ ಇನ್ನೇನು ಊರು ತಲುಪಲಿದ್ದೇವೆ ಅನ್ನುವಾಗ “ಎಷ್ಟು ದೇಶ ಸುತ್ತಿದರೂ ನಮ್ಮ ಊರೇ ನಮಗೆ ಚೆಂದ” ಅಂತ ಡೈಲಾಗು ಹೊಡೆಯುತ್ತೇವೆ. ನಾವ್ಯಾಕೆ […]

ಕೃತಜ್ಞತೆ : ಸಕಾರಾತ್ಮಕತೆಯ ದಿವ್ಯೌಷಧ

ನಮ್ಮ ಸುತ್ತಲು ಒಂದು ಜಗತ್ತಿದೆ ಎಂದೇ ನಮಗೂ ಅಸ್ತಿತ್ವ ಇದೆ ಅಲ್ಲವೆ? ಇದೊಂದು ಒಳಹೆಣಿಗೆ. ಒಂದು ಗಂಟು ಬಿಡಿಸಿಕೊಂಡರೆ ಇಡಿಯ ನೇಯ್ಗೆ ಕಿಸಿದುಹೋಗುತ್ತೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿರುವ ಎಲ್ಲ ಎಳೆಗಳಿಗೂ ನಾವು ಕೃತಜ್ಞರಾಗಿರಬೇಕು. ನಮಗೆ ಅವರು ಕೂಡಾ ಆಗಿರುತ್ತಾರೆ… ಆಗಿರಬೇಕು. ಬದುಕಿನಲ್ಲಿ ನಮ್ಮನ್ನು ಸಂತೋಷವಾಗಿ ಇರಿಸಬಲ್ಲ ಯಾವುದಾದರೂ ಸಂಗತಿ ಇದೆ ಎಂದರೆ, ಅದು ‘ಕೃತಜ್ಞತೆ’. ಎಲ್ಲಕ್ಕಿಂತ ಮೊದಲು ನಮಗೆ ನಾವು ಕೃತಜ್ಞರಾಗಿರುವುದು. ದೇಹವು ನಮ್ಮನ್ನು ಹಿಡಿದುಕೊಂಡಿರುವುದಕ್ಕಾಗಿ. ಸ್ವಸ್ಥವಾಗಿರುವುದಕ್ಕಾಗಿ. ಮತ್ತು ನಮ್ಮೆಲ್ಲ ಚಟುವಟಿಕೆಗಳಿಗೆ ಸಹಕರಿಸುತ್ತಿರುವುದಕ್ಕಾಗಿ. ನಮ್ಮಲ್ಲಿ ಕೆಲವರು […]

ಮಾರ್ಚ್ ತಿಂಗಳ ವಿಶೇಷ ಜ್ಞಾನ : ಉದ್ಯೋಗಸ್ಥಳದಲ್ಲಿ ಸಮಚಿತ್ತ ಕಾಯ್ದುಕೊಳ್ಳಿ!

ಬಹುತೇಕರ ಪಾಲಿಗೆ ಈ ತಿಂಗಳುಗಳು ಮಹಾ ಅತೃಪ್ತಿಯ ಮಾಸಗಳು. ಈ ಅತೃಪ್ತಿಯಿಂದ ಹೊರಗೆ ಬರದೆ ಹೋದರೆ ಉದ್ಯೋಗ ಸ್ಥಳದಲ್ಲಿ ನಮ್ಮ ಕಾರ್ಯಕ್ಷಮತೆ ಕಡಿಮೆಯಾಗುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವವೂ ಕಹಿಯಾಗಿಬಿಡುವ ಸಾಧ್ಯತೆಯಿರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ನೀವೆಷ್ಟು ರೇಟಿಂಗ್ ಕೊಟ್ಟುಕೊಳ್ಳುತ್ತೀರಿ? ಈ ಪ್ರಶ್ನೆ ಕೇಳಿದಾಗ ಬಹುತೇಕವಾಗಿ ಎಲ್ಲರೂ ಐದಕ್ಕೆ ಐದೂ ಸ್ಟಾರ್’ಗಳನ್ನು ಕೊಟ್ಟುಕೊಳ್ಳುವ ಉತ್ಸಾಹ ತೋರುತ್ತಾರೆ. ಆದರೆ ನಿಮ್ಮ ಕೆಲಸಕ್ಕೆ ಸಿಗುವ ಪ್ರತಿಫಲದ ಕುರಿತು ನೀವೆಷ್ಟು ಸಂತೃಪ್ತರಾಗಿದ್ದೀರಿ? ಎಂದು ಕೇಳಿದರೆ ಕಣ್ಣು ಮೇಲೆ ಮಾಡುವವರೇ ಬಹಳ.   ಕೆಲವರಿಗೆ […]