ಶಬ್ದಬ್ರಹ್ಮ : ಭಾಷೆ ಅರ್ಥ ಪಡೆಯುವುದು ನಮ್ಮ ಗ್ರಹಿಕೆಯಲ್ಲಿ

ಭಾಷೆ ಎಷ್ಟೇ ಉಪಯುಕ್ತವಾದುದಾದರೂ ಅದನ್ನು ಬಲ್ಲವರಿಗಷ್ಟೆ ಪ್ರಯೋಜನ. ಮತ್ಯಾವುದೋ ಪ್ರಾಂತ್ಯದಲ್ಲಿ ನಮ್ಮ ಭಾಷೆಯ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ಇರುವಿಕೆ, ಅಗತ್ಯ ಹಾಗೂ ಸಂಪನ್ಮೂಲಗಳೇ ಅಲ್ಲಿ ಸಂವಹನದ ಆಕರಗಳಾಗಿ ಒದಗುತ್ತವೆ ~ ಗಾಯತ್ರಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ಬಯಸುವಂಥವರು. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುವವರು. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು ನಮಗೆ ಸಮಯದ ಅಪವ್ಯಯದಂತೆ ತೋರುವುದು. ಆದರೆ ನಾವು ಕಾರಣಸಹಿತ ಕೆಲಸಗಳನ್ನಾಗಲೀ ಅರ್ಥಸಹಿತ ಮಾತುಗಳನ್ನಾಗಲೀ ಪ್ರಜ್ಞಾ ಪೂರ್ವಕವಾಗಿ […]

ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ : Morning Mantra

ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ ~ ಗಾಯತ್ರಿ ಈ ದಿನದ Morning Mantra ನಮಗೆ ಸಮಾಜದೊಡನೆ ಬೆರೆಯಲು ಅತ್ಯಂತ ಉಪಯುಕ್ತವಾಗಿರುವಂತದ್ದು. ಆದರೆ, ಅಷ್ಟೇ ಸರಳವೂ ಆಗಿರುವಂಥದ್ದು : “ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ”! ಎದ್ದು, ಮುಖ ತೊಳೆದು ಕನ್ನಡಿ ಮುಂದೆ […]

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]