ಅರಿವಿಗೆ ತಕ್ಕಂತೆ ಮಾತುಗಳು ಅರ್ಥ ಪಡೆಯುತ್ತವೆ : ಅಧ್ಯಾತ್ಮ ಡೈರಿ

ಯಾವುದೇ ಪದ, ಶಬ್ದ, ಕೇಳುಗರ ಕಿವಿಯಲ್ಲಿ, ಅವರ ಅರಿವಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಮಾತು ಎನ್ನುವುದು ಮಾಯೆಯಂತೆ. ಅದು ಸಮ್ಮೋಹಗೊಳಿಸುತ್ತದೆ. ನಮ್ಮನ್ನು ಒಂದು ಅರ್ಥಕ್ಕೆ ಬದ್ಧರಾಗುವಂತೆ ಕಟ್ಟಿಹಾಕುತ್ತದೆ. ಆ ಅರ್ಥದ ಪಾಶದಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ ~  ಅಲಾವಿಕಾ

ಬದುಕಿನ ಪ್ರತಿ ಕ್ಷಣವೂ ಪವಾಡವೇ

ನಮಗೆ ಮಾಡಬೇಕಾದ ಕೆಲಸವನ್ನು ಮುಂದೂಡುವುದರಲ್ಲಿ ಹೆಚ್ಚಿನ ಆಸಕ್ತಿ. ಇದು ನಮ್ಮ ಪಲಾಯನವಾದವಷ್ಟೆ…. ನಾವು ಬಹುತೇಕರು ಮಾಡುವುದು ಇದನ್ನೇ. ನಮ್ಮ ಬದುಕಿನಲ್ಲಿ ಪವಾಡ ಘಟಿಸಲಿದೆ ಎಂದು ಕಾಯುತ್ತಾ ಕೂರುತ್ತೇವೆ. ಆ ಪವಾಡ ನಾವು ಕಾಯುತ್ತ ಕುಳಿತ ಘಳಿಗೆಯಲ್ಲೇ ಘಟಿಸಬಹುದು. ಆದರೆ ನಾವು ಕಾಯುವುದರಲ್ಲಿ ಎಷ್ಟು ಮಗ್ನರಾಗಿರುತ್ತೇವೆ ಎಂದರೆ, ನಮ್ಮ ಕಣ್ಣೆದುರೇ ಘಟಿಸುತ್ತಿರುವ ಪವಾಡವನ್ನು ಗುರುತಿಸಲಾಗದೆ ಹೋಗುತ್ತೇವೆ. ಅದನ್ನು ಸ್ವೀಕರಿಸಲಾಗದೆ ಹೋಗುತ್ತೇವೆ. ಹೀಗೆ ನಮ್ಮದೇ ಮೂರ್ಖತನದಿಂದ ಕೈಗೆ ಬಂದಿರುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ನಮ್ಮ ಬದುಕಿನ ಪ್ರತಿಯೊಂದು ಕ್ಷಣವೇ ಪವಾಡವೇ ಆಗಿರುತ್ತದೆ. […]