ಪ್ರೇಮವೊಂದೆ ಚಿರವಿರಲಿ ನಿನ್ನೆಡೆಗೆ ~ ಸೂಫಿಗಳ ‘ತೋಬಾ’ ಪ್ರಾರ್ಥನೆ

ಮುಸ್ಲಿಮ್ ಸಮುದಾಯ ತಿಂಗಳ ಕಾಲದ ವಿಶಿಷ್ಟ ಬಗೆಯ ಉಪವಾಸ ಮುಗಿಸಿ ಹಬ್ಬದ ಸಂಭ್ರಮದಲ್ಲಿದೆ. ರಂಜಾನ್, ಉಪವಾಸ, ದಾನ ಮತ್ತು ಪ್ರಾರ್ಥನೆಗಳ ಪವಿತ್ರ ತಿಂಗಳು. ಹಬ್ಬದ ಹಿನ್ನೆಲೆಯಲ್ಲಿ, ಸೂಫೀಗಳ ‘ತೋಬಾ’ ಪ್ರಾರ್ಥನೆಯಿಂದ ಹೆಣೆದ ಪದ್ಯ ಇಲ್ಲಿದೆ…. ಪಶ್ಚಾತ್ತಾಪದ ಕಂಬನಿ ಕುದಿಗೆ ಕರುಳು ಬೆಂದ ವಾಸನೆ ತೋಬಾ ಎ ಹಾಲ್ ಆಣೆ ಇಡುವೆ ಪ್ರೇಮವೇ, ತೋಬಾ ಎ ಪಾ ಹರಾಮಿ ಹೆಜ್ಜೆಯಿಡೆನು ಮತ್ತೆಂದೂ ಮನ್ನಿಸು, ಕಡುಪಾಪಿ ನಾನು. ತೋಬಾ ಎ ಚಶ್ಮ್ ನೀನಲ್ಲದ ಮತ್ತೇನೂ ನೋಡದಿರಲಿ ಕಣ್ಣು ತೋಬಾ ಎ […]

ಬುಧನ ತಂದೆ ಯಾರು? ಬೃಹಸ್ಪತಿಯೋ, ಚಂದ್ರನೋ!? ~ ಪುರಾಣ ಕಥೆಗಳು

ಬುಧನು ತನ್ನ ತಾಯಿಯ ಬಳಿ ಬಂದು, ಗಂಭೀರವಾಗಿ “ಅಮ್ಮಾ, ಮಗನಿಗೆ ತನ್ನ ತಂದೆ ಯಾರೆಂದು ತಿಳಿಯುವ ಹಕ್ಕು ಇರುತ್ತದೆ, ತಾಯಿಯಾಗಿ ನಿನ್ನ ಕರ್ತವ್ಯವನ್ನು ನಡೆಸು. ನನ್ನ ತಂದೆ ಯಾರೆಂದು ತಿಳಿಸು” ಅನ್ನುತ್ತಾನೆ. ಆಗ ತಾರೆ ಯಾರ ಹೆಸರು ಹೇಳುತ್ತಾಳೆ ಗೊತ್ತೇ? ~ ಗಾಯತ್ರಿ  ತಾರಾ, ದೇವಗುರು ಬೃಹಸ್ಪತಿಯ ಹೆಂಡತಿ. ಬೃಹಸ್ಪತಿಯಲ್ಲಿ ಶಿಷ್ಯನಾಗಿದ್ದ ಚಂದ್ರನು ಗುರುಪತ್ನಿಯ ಮೇಲೆಯೇ ಮೋಹಗೊಳ್ಳುತ್ತಾನೆ. ತಾರೆಯೂ ಸುರಸುಂದರನಾದ ಚಂದ್ರನ ಮೇಲೆ ಮೋಹಿತಳಾಗುತ್ತಾಳೆ. ಅವರಿಬ್ಬರೂ ಆಶ್ರಮ ತೊರೆದು ಪ್ರತ್ಯೇಕವಾಗಿ ಸಂಸಾರ ಹೂಡುತ್ತಾರೆ. ಈ ಬೆಳವಣಿಗೆಗಳಿಂದ ಕಂಗೆಟ್ಟ […]

ನಮ್ಮಲ್ಲಿ ಕಂಪನವಿದ್ದರೆ ಸಂಬಂಧವೂ ಕದಲುವುದು!

ನಾವು ಎಲ್ಲಿಯವರೆಗೆ ನಮ್ಮ ಸುಖಕ್ಕೆ ಬೇರೆ ಯಾರನ್ನೂ ಅವಲಂಬಿಸುವುದಿಲ್ಲವೋ, ಎಲ್ಲಿಯವರೆಗೆ ದುಃಖಕ್ಕೆ ಮತ್ಯಾರನ್ನೋ ಹೊಣೆಗೇಡಿಯಾಗಿಸುತ್ತೇವೆಯೋ ಅಲ್ಲಿಯವರೆಗೆ ಸಂಬಂಧಗಳು ಅನಿಶ್ಚಿತತೆಯಲ್ಲಿ ಕಂಪಿಸುತ್ತಲೇ ಇರುತ್ತವೆ  ~ ಅಲಾವಿಕಾ ಕದಡಿದ ಕೊಳದಲ್ಲಿ ಬಿಂಬವೂ ಅಸ್ಥಿರ; ದೂರಬೇಡ ಚಂದ್ರನ್ನ. ಈ ಮಾತು ಅದೆಷ್ಟು ನಿಜ!! ನಾವು ಕೊಳದಂತೆ. ಸಂಬಂಧವೇ ಪ್ರತಿಬಿಂಬ. ನಮ್ಮಲ್ಲಿ ಕಂಪನಗಳಿದ್ದಷ್ಟೂ ಹೊತ್ತು ಸಂಬಂಧವೂ ಅಲುಗಾಡುತ್ತಿರುತ್ತದೆ. ಆದರೆ ನಾವು ಅದನ್ನು ಸಂಬಂಧದ ಆ ತುದಿಯಲ್ಲಿ ಇರುವವರ ದೋಷ ಅಂದುಕೊಂಡು ನರಳುತ್ತೇವೆಯೇ ಹೊರತು, ನಮ್ಮನ್ನು ಹೊಣೆಯಾಗಿಸಿಕೊಳ್ಳುವುದಿಲ್ಲ. ಯಾವುದೇ ಸಂಬಂಧದಲ್ಲಿ ಅಪನಂಬಿಕೆ ಉಂಟಾಗುವುದು ನಮ್ಮ […]