ಝೆನ್ ಶೈಲಿಯಲ್ಲಿ ಬದುಕುವುದೆಂದರೆ…

ಟೆನ್ನೋ ಎನ್ನುವವನೊಬ್ಬ ಝೆನ್ ಕಲಿಯಲು ಗುರು ನ್ಯಾನ್ ಇನ್ ಬಳಿ ಬಂದ. ಝೆನ್ ಕಲಿಯುವವರು ಗುರುವಿನೊಟ್ಟಿಗೆ ಎರಡು ವರ್ಷ ಕಳೆಯಬೇಕಾಗಿತ್ತು. ಟೆನ್ನೋ ಹಾಗೆ ನ್ಯಾನ್ ಇನ್ ಜೊತೆಗೇ ಇದ್ದು ಝೆನ್ ಕಲಿತ. ತಾನಿನ್ನು ಬೋಧನೆ ಶುರು ಮಾಡಬಹುದು ಅನ್ನಿಸಿತು ಅವನಿಗೆ. ಆಶ್ರಮವನ್ನು ಬಿಟ್ಟು ಹೊರಡಲು ಸಿದ್ಧತೆ ಮಾಡಿಕೊಂಡ. ನ್ಯಾನ್ ಇನ್ ಆಶ್ರಮದಿಂದ ಸ್ವಲ್ಪ ದೂರವಿದ್ದ ಬೋಧನಾ ಕೊಠಡಿಯಲ್ಲಿ ಕುಳಿತಿದ್ದ. ಅವನನ್ನು ಕಾಣಲು ಟೆನ್ನೋ ಕಾಲಿಗೆ ಮರದ ಚಡಾವುಗಳನ್ನು ಧರಿಸಿ, ಚತ್ರಿಯನ್ನು ಹಿಡಿದು ಹೊರಟ. ಒಳಗೆ ಹೋಗುವ ಮೊದಲು […]