ಆಶ್ರಯಣೀಯವೂ ಆದರಣೀಯವೂ ಆದ ಚಾರ್ವಾಕ ದರ್ಶನ

ನಾಸ್ತಿಕವಾದಿ ಲೋಕಾಯತರ ಕೆಲವು ಚಿಂತನೆಗಳು ಆಸ್ತಿಕವಾದಿ ಬಂಡಾಯಗಾರರನ್ನೂ (ಅಂದರೆ ದಾಸ, ಶರಣ ಇತ್ಯಾದಿ) ಪ್ರಭಾವಿಸಿರುವುದು. ಈ ದೃಷ್ಟಿಯಿಂದ ಲೋಕಾಯತ ದರ್ಶನವನ್ನು ಭಾರತೀಯ ಪರಂಪರೆಯ ಬಂಡಾಯದ ಮೂಲ ಬೀಜ ಎಂದು ಕರೆಯಬಹುದೇನೋ…. ~ ಚೇತನಾ ತೀರ್ಥಹಳ್ಳಿ ಯಾವಾಗ ಒಂದು `ಗುಂಪು’ ತಯಾರಾಗುತ್ತದೆಯೋ ಆಗಲೇ `ವಿರೋಧಿ’ಗಳೂ ಹುಟ್ಟಿಕೊಳ್ಳುತ್ತಾರೆ. ಯಾವಾಗ ಒಂದು `ಸಿದ್ಧಾಂತ’ ಅಥವಾ ಚೌಕಟ್ಟುಳ್ಳ ಜೀವನಕ್ರಮ ರೂಪುಗೊಳ್ಳುತ್ತದೆಯೋ ಅದರೊಳಗಿಂದಲೇ `ಬಂಡಾಯ’ವೂ ಹುಟ್ಟಿಕೊಳ್ಳುತ್ತದೆ. ಭಾರತೀಯ ಧರ್ಮ – ತತ್ವಶಾಸ್ತ್ರ ಪರಂಪರೆಯಲ್ಲಿ ಇಂತಹ ಬಂಡಾಯಗಾರರು ನಮ್ಮ ಪರಂಪರೆಯ ತಳಹದಿಯೆಂದು ಪರಿಗಣಿಸಲ್ಪಡುವ ವೇದಕಾಲದಲ್ಲೇ ಹುಟ್ಟಿಕೊಂಡಿದ್ದರು. […]