ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ ಮಾಡಬಲ್ಲ ವಿಕೃತಿ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮನುಷ್ಯ ಸಮುದಾಯಕ್ಕೆ ಸೀಮಿತವಾಗಿರುವ ಈ ವಿಕೃತಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.
ನಾನು ಎಂಬ ಚಿಂತನೆ : ರಮಣ ವಿಚಾರ ಧಾರೆ
ಪ್ರತಿಯೊಬ್ಬರ ಎದೆಯೂ ಸೌಹಾರ್ದ ಬಿತ್ತನೆಗೆ ಭೂಮಿಯಾಗಲಿ…
ಯಾವಾಗ ಬೇಲಿ ಕಟ್ಟಲ್ಪಡುತ್ತದೆಯೋ ಆಗ ಅದರ ಒಳಗಿನವರು ಅದು ಉಳಿದರೆ ಮಾತ್ರ ನಮಗೆ ರಕ್ಷೆ ಎಂಬ ತಪ್ಪು ಕಲ್ಪನೆಗೆ ಬೀಳುತ್ತಾರೆ ಮತ್ತು ಯಥಾಯಗತಾಯ ಅದನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಾರೆ. ಮತ್ತೂ ಮುಂದುವರೆದು, ಸ್ವಯಂ ರಕ್ಷಣೆಯ ನೆಪದಲ್ಲಿ, ತಮ್ಮ ಬಣದ ಮೇಲ್ಮೆಯ ಹಪಾಹಪಿಯಲ್ಲಿ ಆಕ್ರಮಣಗಳಿಗೆ ಮುಂದಾಗುತ್ತಾರೆ. ಇದು ದ್ವೇಷದ ಕಿಡಿ ಹೊತ್ತಿಸುತ್ತದೆ ~ ಆನಂದಪೂರ್ಣ ಜಗತ್ತು ರಾಗದ್ವೇಷಗಳಿಂದ ಮುಕ್ತವಾಗಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ಪೂರ್ವಕಾಲದಿಂದಲೂ ಋಷಿ ಮುನಿಗಳು ಹೇಳುತ್ತಲೇ ಬಂದಿದ್ದಾರೆ. ಎಲ್ಲವೂ ಒಂದೇ ಪರಮ […]
ಪಂಚೇಂದ್ರಿಯಗಳನ್ನು ಸಮರ್ಥವಾಗಿ ಬಳಸಿ, ನಿಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಿ!
“ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ ಒಂದು ದೃಷ್ಟಾಂತ. ಒಂದೂರಿನಲ್ಲಿ ಎರಡು ವರ್ಷಗಳಿಂದ ಮಳೆಯೇ ಆಗಿರುವುದಿಲ್ಲ. ಮುಖಂಡರೆಲ್ಲ ಸೇರಿಕೊಂಡು ಮಹಾಯಾಗವನ್ನು ಆಯೋಜಿಸುತ್ತಾರೆ. ಪೂರ್ಣಾಹುತಿಯ ದಿನ ವರ್ಷಧಾರೆ ಖಚಿತ ಎಂದು ಪುರೋಹಿತರು ಘೋಷಿಸುತ್ತಾರೆ. ಅದರಂತೆ ಒಂದು ವಾರ ಅವಧಿಯ ಮಹಾಯಾಗ ನಡೆಯುತ್ತದೆ. ಪ್ರತಿಯೊಬ್ಬರಲ್ಲೂ ಮಳೆಯ ನಿರೀಕ್ಷೆ, ಪೂರ್ಣಾಹುತಿಯ ದಿನದ ಸಂಭವನೀಯತೆಯ ಬಗ್ಗೆ ಮಾತು. ಪುರೋಹಿತರ ಮಾತಿಗೆ ಯಾರೊಬ್ಬರದೂ […]